ಬಂಟ್ವಾಳ: ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯ ಕ್ರಮ ಬಿಸಿರೋಡಿನ ಮಿನಿವಿಧಾನ ಸೌಧದ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿ.ಸೋಜ ಅವರ ಅಧ್ಯಕ್ಷ ತೆಯಲ್ಲಿ ನಡೆಯಿತು.

ಗ್ರಾಮದಲ್ಲಿ ಜನರ ಜೊತೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹೆಚ್ಚು ತಾಳ್ಮೆಯಿಂದ ಯಾರಿಗೂ ತೊಂದರೆ ಯಾಗದ ರೀತಿಯಲ್ಲಿ ಕೆಲಸ ಮಾಡಿ ಎಂದು ಐವನ್ ಹೇಳಿದರು.

ಸರಕಾರದ ಕೆಲಸಗಳನ್ನು ನಿಯತ್ತಿನಿಂದ ಬದ್ದತೆಯ ಅಧಾರದ ಲ್ಲಿ ಕೆಲಸ ಮಾಡಲು ಗ್ರಾಮ ಕರಣೀಕರಿಗೆ ಸಚಿವರು ತಿಳಿಸಿದರು.

ಶಿಕ್ಷಣ ಕ್ಕೆ ಗಾಗಿ ಬರುವ ಅದಾಯ ಸರ್ಟಿಫಿಕೇಟ್ ಗಳಿಗೆ ಯಾವುದೇ ತೊಂದರೆ ನೀಡದೆ ನೀಡುವಂತೆ ಅವರು ಸೂಚಿಸಿದರು.
ಸರಕಾರದ ಯೋಜನೆಗಳನ್ನು ಜಾರಿಗೆ ತರುವಾಗ ಬಡವರ ಮೇಲೆ ದಯೆ ತೋರಿ ಕೆಲಸ ಮಾಡಿ. ತಾಲೂಕಿನ ಎಲ್ಲಾ ಪಿಂಚಣಿದಾರರ ವಿಶೇಷ ಸಭೆ ಕರೆದು ಅವರಿಗೆ ಸಮಸ್ಯೆ ಗಳು ಇದ್ದಲ್ಲಿ ಪರಿಹಾರ ಮಾಡಲು ತಹಶಿಲ್ದಾರರಿಗೆ ತಿಳಿಸಿದರು.
ಗ್ರಾಮದಲ್ಲಿ ಯೂ ಸ್ಮಶಾನ ಇರಲೇಬೇಕು ಈ ದೃಷ್ಟಿಯಲ್ಲಿ ಕೆಲಸ ಮಾಡಿ.

ಅಕ್ರಮ ಸಕ್ರಮ ಸಮಿತಿ ಯಲ್ಲಿ ಮಂಜೂರಾದ ಕುಮ್ಕಿ ಅರ್ಜಿಗಳಿಗೆ ಹಕ್ಕು ‌ಪತ್ರ ನೀಡಬೇಕು, ಅಕ್ರಮ ಸಕ್ರಮ ಸಮಿತಿಯ ಲ್ಲಿ ಮಂಜೂರಾದ ಜಮೀನು ಗಳಿಗೆ ನಿರಪೇಕ್ಷಣಾ ಪತ್ರ ತಹಶಿಲ್ದಾರರೇ ನೀಡಬೇಕು ಹಾಗೂ ಸಮಿತಿಯ ಲ್ಲಿ ಮಂಜೂರಾದ ಜಮೀನುಗಳು ಎನ್.ಸಿ.ಆರ್. ಜಮೀನು ಗಳನ್ನು ಪೋಡಿಮುಕ್ತ ಗ್ರಾಮದಲ್ಲಿ ಸೇರಿಸಬೇಕು ಎಂದು ಸಚಿವರಿಗೆ ತಾ.ಪಂ.ಉಪಾಧ್ಯಕ್ಷ ಉಸ್ಮಾನ್ ಕರೋಪಾಡಿ ಮನವಿ ನೀಡಿದರು.
ಕೋಟ್ಯಾಂತರ ರೂ ಖರ್ಚು ಮಾಡಿದ ಮಿನಿವಿಧಾನ ಸೌಧದ ದಲ್ಲಿ ಸ್ವಚ್ಚತೆ ಇಲ್ಲ ಈ ಬಗ್ಗೆ ಗಮನ ಕೊಡುವಂತೆ ಜೊತೆಗೆ ಲೊಪ್ಟ್ ಸರಿ ಇಲ್ಲದೆ ಮೇಲಿನ ಅಂತಸ್ತು ಕಡೆಗೆ ತೆರಳಲು ಬಾರೀ ಕಷ್ಟವಾಗುತ್ತಿದೆ ಸರಿ ಮಾಡುವಂತೆ ಸಭೆಯಲ್ಲಿ ತಿಳಿಸಿದರು.
ನೆಮ್ಮದಿ ಕೇಂದ್ರ ದಲ್ಲಿ ದಿನ ಸರ್ವರ್ ಸಮಸ್ಯೆ ಯಿಂದ ನಮಗೆ ನೆಮ್ಮದಿ ಯಿಲ್ಲ ಎಂದು ಸಭೆಯಲ್ಲಿ ಕೇಳಿ ಬಂತು.
ಈ ಬಗ್ಗೆ ಉತ್ತರಿಸಿದ ತಹಶಿಲ್ದಾರ ರಶ್ಮಿ ಈ ಸರಕಾರಿ ಕಚೇರಿಯ ನ್ನು ತಮ್ಮ ಮನೆಯಂತೆ ಟ್ರೀಟ್ ಮಾಡಿ ಎಂದು ಕಚೇರಿಗೆ ಬರುವ ಸಾರ್ವಜನಿಕರಿಗೆ ಸಹಕರಿಸುವಂತೆ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಮಾಜಿ ಸಚಿವ ಬಿ.ರಮಾನಾಥ ರೈ ಅವರಿಗೆ ಪುಷ್ಪ ಗುಚ್ಚ ನೀಡಿ ಸ್ವಾಗತಿಸಿದರು.

ತಹಶಿಲ್ದಾರರಾದ ರಶ್ಮಿ ಅವರು ಮಾತನಾಡಿ ಈ ವರಗೆ ಪಾಕೃತಿಕ ವಿಕೋಪಸಡಿ ಒಟ್ಟು 72 ಪ್ರಕರಣಗಳು ದಾಖಲಾಗಿವೆ.
ಅದರಲ್ಲಿ 46 ಪಕ್ಕಾ ಮನೆ ಹಾನಿ 21 ಭಾಗಶಃ ಹಾನಿ ಹಾಗೂ ಕಳೆದ ಕೆಲ ದಿನಗಳ ಹಿಂದೆ ಮೆಸ್ಕಾಂ ನ ತಂತಿ ಸ್ಪರ್ಶಿಸಿ ಎರಡು ಜೀವ ಹಾನಿಯಾಗಿದೆ ಎಂದು ಅವರು ತಿಳಿಸಿದರು.
94 ಸಿ.ಸಿ.ಅರ್ಜಿಗಳಿಗೆ ಸಂಬಂಧಿಸಿದಂತೆ.
25416 ಅರ್ಜಿ ಸ್ವೀಕಾರ ಮಾಡಲಾಗಿದೆ.12703 ಅರ್ಜಿಗಳು ಮಂಜೂರಾಗಿವೆ.
10699 ತಿರಸ್ಕಾರ ವಾಗಿವೆ
2014 ಅರ್ಜಿಗಳು ಬಾಕಿಯಾಗಿವೆ.
94 ಸಿ ಅರ್ಜಿ ಗೆ ಸಂಬಂಧಿಸಿದಂತೆ 7306 ಅರ್ಜಿಗಳು ಸ್ವೀಕಾರ ವಾಗಿವೆ, 4194 ಅರ್ಜಿಗಳು ವಿಲೇವಾರಿ, 1579 ತಿರಸ್ಕಾರ ಹಾಗೂ 1530 ಅರ್ಜಿಗಳು ಬಾಕಿಯಾಗಿ ಉಳಿದಿವೆ ಎಂದು ಅವರು ಸಚಿವರ ಗಮನಕ್ಕೆ ತಂದರು.

330 ಎಕ್ರೆ ಸಾರ್ವಜನಿಕ ಉದ್ದೇಶಗಳಿಗೆ ಜಾಗ ಕಾದಿರಿಸಲಾಗಿದೆ ಎಂದು ಅವರು ಹೇಳಿದರು.
ಡಿ.ಸಿ.ಮನ್ನಾ ಜಾಗಕ್ಕಾಗಿ
710 ಅರ್ಜಿಗಳು ಬಂದಿವೆ.
612 ಬಾಕಿಯಾಗಿದೆ.

ಈ ಸಂದರ್ಭ ಮಾಜಿ ಸಚಿವ ರಮಾನಾಥ ರೈ, ತಾ.ಪಂ.ಅಧ್ಯಕ್ಷ ಚಂದ್ರ ಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, .ಪಂ.ಸದಸ್ಯ ರಾದ ರವೀಂದ್ರ ಕಂಬಳಿ, ಚಂದ್ರಪ್ರಕಾಶ್ ಶೆಟ್ಟಿ, ಮಮತಾ ಗಟ್ಟಿ, ಕಮಲಾಕ್ಷೀ ಕೆ.ಪೂಜಾರಿ. ಜೈನ್, ತಾಪಂ ಸದಸ್ಯ ಉಸ್ಮಾನ್ ಕರೋಪಾಡಿ
ಇ.ಒ.ರಾಜಣ್ಣ ಉಪಸ್ಥಿತರಿದ್ದರು.
ತಾಲೂಕು ತಹಶಿಲ್ದಾರರಾದ ರಶ್ಮಿ ಸ್ವಾಗತಿಸಿದರು.
ಪ್ರಗತಿ ಪರಿಶೀಲನೆ ಸಭೆಯಲ್ಲಿ ಬ್ರೋಕರ್ ಗಳು ಮಾತ್ರ ಕಂಡು ಬಂದದ್ದು ವಿನಃ ಯರೋಬ್ವರು ಫಲಾನುಭವಿಗಳು ಕಾಣಸಿಗಲಿಲ್ಲ.
ಕಂದಾಯ ಇಲಾಖೆ ಸರಿಯಾಗಿ ಈ ಸಭೆಯ ಮಾಹಿತಿ ನೀಡದೇ ಇರುವದೇ ಕಾರಣ ಎಂದು ಹೇಳಲಾಗುತ್ತಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here