Sunday, October 22, 2023

ಕಿಸಾನ್ ಸಮ್ಮಾನ್ ಅರ್ಜಿಸಲ್ಲಿಕೆ ವಿಸ್ತರಣೆಗೆ ಪ್ರಭಾಕರ ಪ್ರಭು ಮನವಿ

Must read

ಬಂಟ್ವಾಳ:  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ಸೆಪ್ಟಂಬರ್ ವರೆಗೆ ವಿಸ್ತರಿಸುವಂತೆ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಬಂಟ್ವಾಳ ತಾಪಂ ಸದಸ್ಯ ಪ್ರಭಾಕರ ಪ್ರಭು ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.    ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರಿಗೂ ಮನವಿ ಸಲ್ಲಿರುವ ಅವರು ಈ ಬಗ್ಗೆ ಮುಖ್ಯ ಕಾರ್ಯದರ್ಶಿಯವರಿಗೆ ಮನವರಿಕೆ ಮಾಡುವಂತೆ ಕೋರಿದ್ದಾರೆ.
 ರೈತರಿಗೆ ಪ್ರೋತ್ಸಾಹ ನೀಡುವ ವಾರ್ಷಿಕ ೬೦೦೦ ಆರ್ಥಿಕ ನೆರವು ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಸಂಬಂಧಿಸಿದಂತೆ  ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಂದಿ ಸಣ್ಣ ಹಾಗೂ ಅತೀ ಸಣ್ಣ ಹಿಡುವಳಿ ಹೊಂದಿದ್ದು, ಸ್ವಂತ ಮತ್ತು ಜಂಟಿಯಾಗಿ ಇರುವ  ಎಲ್ಲಾ ಖಾತೆದಾರರ ಆಧಾರ್ ನಂಬ್ರ ಮತ್ತು ಬ್ಯಾಂಕ್ ಪಾಸ್ ಬುಕ್ ನಂಬ್ರ  ಜಮೀನಿನ ವಿವರ ಇತ್ಯಾದಿ ಮಾಹಿತಿ ಪಡೆದು ಪ್ರತಿ ರೈತರಿಂದ ಅರ್ಜಿ ಅನುಬಂಧ ಪಡೆಯಲು  ಕಾಲಾವಕಾಶದ ಅಗತ್ಯವಿದೆಯಲ್ಲದೆ ಕಂಪ್ಯೂಟರ್‌ನಲ್ಲಿ ಅಪ್ಲೋಡ್ ಮಾಡಲು ಸರ್ವರ್ ತಾಂತ್ರಿಕ ಕಾರಣಗಳಿಂದ ನಿಧಾನವಾಗುತ್ತಿದೆ ಎಂದು ಪ್ರಭು ಪತ್ರದಲ್ಲಿ ವಿವರಿಸಿದ್ದಾರೆ.
     ದ.ಕ. ಜಿಲ್ಲೆಯಲ್ಲಿ ಒಟ್ಟು ಅಂದಾಜು ೧.೮೩ ಲಕ್ಷ, ಬಂಟ್ವಾಳ ತಾ.ನಲ್ಲಿ ೫೨,೦೦೦ ರೈತ ಕುಟುಂಬಗಳಿದ್ದು ಒಟ್ಟಾರೆಯಾಗಿ ದ. ಕ. ಜಿಲ್ಲೆಯಲ್ಲಿ ೩೫,೦೦೦, ಹಾಗೂ  ಬಂಟ್ವಾಳ ತಾ.ನಲ್ಲಿ ೧೨,೦೦೦ ಅರ್ಜಿಗಳು  ಮಾತ್ರ     ಸ್ವೀಕೃತವಾಗಿದ್ದು, ಶೇ. ೨೫ ರಷ್ಟು ಸಹ ಪ್ರಗತಿಯಾಗಿರುವುದಿಲ್ಲ ಹಾಗಾಗಿ ಎಲ್ಲಾ ರೈತ ಕುಟುಂಬಗಳಿಗೆ ಆರ್ಥಿಕ ನೆರವು ದೊರೆಯುವಂತಾಗಲು  ಕೇಂದ್ರ ಸರಕಾರದ ಇಲಾಖೆಯೊಡನೆ ಸಮಾಲೋಚಿಸಿ ರಾಜ್ಯದಲ್ಲಿ ಅರ್ಜಿ ನೀಡುವ ದಿನಾಂಕವನ್ನು ಸೆಪ್ಟೆಂಬರ್ ೩೧ರವರೆಗೆ ವಿಸ್ತರಣೆ ಮಾಡುವಂತೆ ಅವರು ಪತ್ರದ ಮೂಲಕ ಆಗ್ರಹಿಸಿದ್ದಾರೆ.                                       ಪತ್ರದ ಪ್ರತಿಯನ್ನು ಜಿಲ್ಲಾಧಿಕಾರಿ , ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೂ ರವಾನಿಸಿದ್ದಾರೆ.
Attachments area

More articles

Latest article