Friday, October 27, 2023

ಐ.ಎಮ್.ಎ.ಪ್ರಕರಣದಲ್ಲಿ ಶಾಮೀಲಾಗಿದ್ದ ಸಚಿವರ ಕೈಬಿಡಲು ರಾಜ್ಯಪಾಲರಿಗೆ ಪ್ರಭು ಮನವಿ

Must read

ಬಂಟ್ವಾಳ: ಬಹುಕೋಟಿ ರೂಪಾಯಿ ಐ.ಎಮ್.ಎ.ವಂಚನೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಸಂಶಯಾಸ್ಪದ ಸಚಿವರನ್ನು ಕೈ ಬಿಡಲು ಮುಖ್ಯ ಮಂತ್ರಿಗೆ  ಸೂಚಿಸುವಂತೆ ಬಂಟ್ವಾಳತಾಪಂ ಸದಸ್ಯ ಪ್ರಭಾಕರ ಪ್ರಭು ಅವರು ಕರ್ನಾಟಕ ರಾಜ್ಯಪಾಲರಾದ ವಜುಭಾಯಿವಾಲಾ ಅವರನ್ನು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಸಾವಿರಾರು ಕೋಟಿ ವಂಚಿಸಿರುವ ಐ.ಎಮ್.ಎ.ಜುವ್ಯೆಲ್ ಸಂಸ್ಥೆಯ ಪ್ರಕರಣದಲ್ಲಿ ರಾಜ್ಯದ ಸಾವಿರಾರು ಮಂದಿ ಅಮಾಯಾಕರು‌ ತಮ್ಮ ಹತ್ತಾರು ಆಸೆ,ಆಕಾಂಕ್ಷೆ ಈಡೇರಿಸುವ ನಿಟ್ಟಿನಲ್ಲಿ ಲಕ್ಷಾಂತರ ರೂ.ಹಣವನ್ನು ಹೂಡಿಕೆ ಮಾಡಿದ್ದಾರೆ. ದೇಶ,  ವಿದೇಶ ಗಳಲ್ಲದೆ,ಕರಾವಳಿಯ ಭಾಗದಿಂದಲೂ ಹಲವು ಮಂದಿ ಹಣ ಹೂಡಿಕೆ ಮಾಡಿ ಈಗ ದಿಕ್ಕು ತೋಚದೆ  ಕಂಗಾಲಾಗಿದ್ದಾರೆ.ದಿನಂಪ್ರತಿ  ಸಾವಿರಾರು ಮಂದಿ ದೂರು ನೀಡಿ  ಹಣ ಮರುಪಾವತಿಗಾಗಿ ,ಕಚೇರಿಗೆ ಅಲೆದು ದ್ರಶ್ಯಮಾದ್ಯಮಗಳ ಮುಂದೆ ತಮ್ಮ‌ಕುಟುಂಬದ ನೋವು ತೊಡಿಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಮನವಿಯಲ್ಲಿ ಅವರು ಆಳಲನ್ನು ತೋಡಿಕೊಂಡಿದ್ದಾರೆ.                                          ಐಎಮ್ಎ ವಂಚನೆ ಪ್ರಕರಣ ಕರ್ನಾಟಕ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದ್ದು, ಗಂಭೀರ ಸ್ವರೂಪದ ಈ ಪ್ರಕರಣ  ರಾಜ್ಯದ ಇತಿಹಾಸದಲ್ಲಿಯೂ ದೊಡ್ಡ ಪ್ರಮಾಣದ ಹಗರಣ ಗಳಲ್ಲಿ  ಒಂದಾಗಿದೆ ಎಂದು ಪ್ರಭುಮನವಿಯಲ್ಲಿ ತಿಳಿಸಿದ್ದಾರೆ.
ವಂಚನೆ ಗೊಳಪಟ್ಟವರಲ್ಲಿ ಈಗಾಗಲೇ 10 ಮಂದಿ ಆತ್ಮಹತ್ಯೆ ಮಾಡಿದ್ದು  ಇನ್ನುಳಿದಂತೆ  ಸುಮಾರು 43,000 ಕುಟುಂಬ  ತೀವ್ರ ಸಂಕಟ  ಅನುಭವಿಸುತ್ತಿರುವುದನ್ನು ನೋಡಿ ದೇಶದ ಪ್ರಧಾನ ಮಂತ್ರಿ ಹಾಗೂ ಹಣಕಾಸು  ಸಚಿವರು ಕೂಡ ಈ ಪ್ರಕರಣವನ್ನು ಅತೀ ಸೂಕ್ಷ್ಮ ರೀತಿಯಲ್ಲಿ ಗಮನಿಸುತ್ತಿದ್ದು, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಂಡು ಕೇಂದ್ರಕ್ಕೆ ವರದಿ ನೀಡಲು ರಾಜ್ಯಕ್ಕೆ ನಿರ್ದೇಶನ  ನೀಡಿರುತ್ತಾರೆ ಎಂದು ರಾಜ್ಯಪಾಲರಿಗೆ ರವಾನಿಸಿರುವ ಮನವಿಯಲ್ಲಿ ವಿವರಿಸಿದ್ದಾರೆ.                               ಐ.ಎಮ್.ಎ.ಜುವ್ಯೆಲ್ ಸಂಸ್ಥೆಯ ಮಾಲಿಕ, ಬಹು ಕೋಟಿ ವಂಚಕ  ಮಹಮ್ಮದ್ ಮನ್ಸೂರ್ ಖಾನ್ ನೊಂದಿಗೆ  ರಾಜ್ಯದ ಪ್ರಭಾವಿ ಸಚಿವರೊಬ್ವರ ಮತ್ತು ಶಾಸಕರೋರ್ವರ ಹೆಸರು ಥಳಕು ಹಾಕಿರುವ ಬಗ್ಗೆ ರಾಜ್ಯದ ಹಲವು ದ್ರಶ್ಯಮಾದ್ಯಮಗಳಲ್ಲಿ ಭಿತ್ತರವಾಗಿರುವುದರಿಂದ  ಸಾರ್ವಜನಿಕ ವಲಯದಲ್ಲಿ ಕರ್ನಾಟಕ ಸರಕಾರದ ಮೇಲೆ ಸಂಶಯ ಮೂಡುವಂತಾಗಿದೆಯಲ್ಲದೆ ಪ್ರಭಾವಿಗಳ ಸಹಕಾರದಿಂದಾಗಿಯೇ ಇಂತಹ ದೊಡ್ದ ಮೊತ್ತ ವಂಚಿಸಲು  ಐ.ಎಮ್.ಎ. ಸಂಸ್ಥೆಗೆ ಸಾದ್ಯವಾಯಿತು ಎಂದು ರಾಜ್ಯದ ಜನ ಮಾತಾಡುತ್ತಿದ್ದಾರೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಇಂತಹದೇ ಹಲವು ಸಂಸ್ಥೆಗಳು  ಕಾರ್ಯಚರಿಸುತ್ತಿದ್ದು ಅದರ ಬಗ್ಗೆಯೂ ತೀವ್ರ ನಿಗಾ ಸರಕಾರ ವಹಿಸಬೇಕಾಗಿದ್ದು, ಕರ್ನಾಟಕದ ಸಮ್ಮಿಶ್ರ ಸರಕಾರ ಅಧಿಕಾರ ಉಳಿಸಿಕೊಳ್ಳಲು  ಕಾಲಹರಣ ಮಾಡುತ್ತಿದೆಯೇ  ಹೊರತು ನೊಂದವರಿಗೆ ನೆರವಾಗುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿರುವ ಪ್ರಭಾಕರ ಪ್ರಭು
ರಾಜ್ಯದ ಪರಿಸ್ಥಿತಿ ಯನ್ನು ಕೇಂದ್ರಕ್ಕೆ ರವಾನಿಸಿ
ಈ ಪ್ರಕರಣ ದಲ್ಲಿ ಶಾಮೀಲಾಗಿದ್ದಾರೆನ್ನಲಾದ  ಸಚಿವರನ್ನು ಸಂಪುಟ ದಿಂದ ಕೈಬಿಡಲು ಮುಖ್ಯಮಂತ್ರಿ ಯವರಿಗೆ ಸಲಹೆ ನೀಡಬೇಕು ಎಂದು  ಮನವಿಯಲ್ಲಿ ಆಗ್ರಹಿಸಿದ್ದಾರೆ.

More articles

Latest article