Thursday, October 19, 2023

ರೈತರಿಂದ ಅಂಚೆಕಾಡ್೯ ಚಳುವಳಿ

Must read

ಬಂಟ್ವಾಳ: ಬರದ ಛಾಯೆಯಿಂದ ನಲುಗುತ್ತಿರುವ ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಜಿಲ್ಲಾಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ರೈತ ಸಂಪರ್ಕ ಸಭೆಯನ್ನು ಏರ್ಪಡಿಸುವಂತೆ ಆಗ್ರಹಿಸಿ ಜಿಲ್ಲಾ ರೈತಸಂಘ ಹಸಿರು ಸೇನೆಯಿಂದ ಅಂಚೆಕಾರ್ಡ್ ಚಳುವಳಿ ನಡೆಯಿತು‌. ವಿಟ್ಲ ಸೀಮೆಯ ಅರಸು ವಂಶದ ಕೃಷ್ಣಯ್ಯ ಬಲ್ಲಾಳ್ ಅವರು ಈ ಚಳುವಳಿಗೆ ಚಾಲನೆ ನೀಡಿದರು.  ಜಿಲ್ಲಾ ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ರಾಜ್ಯ ಕಾರ್ಯದರ್ಶಿ ಕುಮಾರ ಸುಬ್ರಮಣ್ಯ ಶಾಸ್ತ್ರಿ, ಮುರುವ ಮಹಾಬಲ ಭಟ್, ದಯಾನಂದ ಶೆಟ್ಟಿ ಕುಳವೂರು ಗುತ್ತು,ಸುಬ್ರಮಣ್ಯ ಭಟ್ ಸಜಿಪ, ಸುದೇಶ್ ಮಯ್ಯ ಪಾಣಮಂಗಳೂರು, ಎನ್.ಕೆ.ಇದಿನಬ್ಬ,ಶೇಕ್ ಅಬ್ದುಲ್ಲ ಕುಪ್ಪೆಪದವು, ಲಕ್ಷ್ಮಣ್ ಕುಲಾಲ್ ನಾಯಿಲ, ಯೂಸುಫ್ ಸಜಿಪ, ಸುದೇಶ್ ಭಂಡಾರಿ ಎರ್ಮೆನಿಲೆ, ಆನಂದ ಶೆಟ್ಟಿ ಸವಣೂರು, ವಿನ್ಸೆಂಟ್ ಕಡಬ ಮತ್ತಿತರ ರೈತರು ಈ ಹಕ್ಕೊತ್ತಾಯ ಚಳುವಳಿಯಲ್ಲಿ ಪಾಳ್ಗೊಂಡರು.
ಮುಂದಿನ ದಿನದಲ್ಲಿ  ಜಿಲ್ಲಾಢಳಿತಕ್ಕೆ ಎಚ್ಚರ ನೀಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ರೈತರು ಅಂಚೆ ಕಾರ್ಡ್ ಚಳವಳಿ ನಡೆಸಲಿರುವರು ಎಂದು ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಡಿಕಂಬಳಗುತ್ತು ಮನೋಹರ ಶೆಟ್ಟಿಯವರು ತಿಳಿಸಿದ್ದಾರೆ.

More articles

Latest article