ಬಂಟ್ವಾಳ :
ಪೊಲೀಸರಿಂದ ಸರ್ಕಾರಕ್ಕೆ ಕೆಲವು ಪ್ರಶ್ನೆಗಳು ಎಂದು ವ್ಯಾಟ್ಸಪ್ ಮೂಲಕ ಸಂದೇಶ ಹರಿದಾಡುತ್ತಿದೆ.
೧- ಪೊಲೀಸರು ವಾಹನಗಳನ್ನ ನಾವೇಕೆ ತಪಾಸಣೆ ಮಾಡಬೇಕು ಆರ್.ಟಿ.ಓ ಇಲಾಖೆ ಯ ಸಿಬ್ಬಂದಿಗಳು ಏನು ಮಾಡುತ್ತಾರೆ?
೨-ಪೊಲೀಸರು ಬಾರ್ ಗಳನ್ನ ಯಾಕೆ ಬಂದ್ ಮಾಡಿಸಬೇಕು ಕುಡುಕರನ್ನ ಯಾಕೆ ಎತ್ತ ಬೇಕು ಅಬಕಾರಿ ಇಲಾಖೆಯವರು ಏನು ಮಾಡುತ್ತಾರೆ?
೩- ಪೊಲೀಸರು ಮರಳು ಕಲ್ಲಿನ ಅಕ್ರಮ ಏಕೆ ತಡೆಯಬೇಕು ಭೂ-ಗಣಿ ಇಲಾಖೆಯವರು ಏನು ಮಾಡುತ್ತಾರೆ?
ಪೊಲೀಸರು ಅಪರಾದಗಳನ್ನ ತಡೆಯಲು ಇರುವುದು ಬೇರೆ ಇಲಾಖೆ ಕೆಲಸ ಮಾಡಲು ಇಲ್ಲ
ಜಪಾನ್ ರಾಷ್ಟ್ರದಂತೆ ಭಾರತ ಬಲಿಷ್ಟ ರಾಷ್ಟ್ರವಾಗಬೇಕಾದರೆ ಅವರವರ ಕೆಲಸ ಅವರವರೆ ಮಾಡಲು ಹೇಳಿ ……….ಇದು ಸರ್ಕಾರಕ್ಕೆ ತಲುಪುವವರೆಗೂ ಶೇರ್ ಮಾಡಿ.
ಎಂದು ಸಂದೇಶ ಗಳು ರವಾನೆಯಾಗುತ್ತಿದೆ.
ನ್ಯಾಯಾಲಯದ ಅದೇಶದಂತೆ ಸಂಚಾರ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಟ್ರಾಫಿಕ್ ಪೋಲೀಸರಿಗೆ ಖಡಕ್ ಅದೇಶ ಮಾಡಿದ್ದಾರೆ.
ಸಂಚಾರಿ ನಿಯಮಗಳನ್ನು ಪಾಲಿಸದಿರುವ ವಾಹನಸವಾರರಿಗೆ ಕೇಸು ದಾಖಲಿಸಿ ಎಂಬ ಆದೇಶ ದ ಹಿನ್ನೆಲೆಯಲ್ಲಿ ಪ್ರತಿ ತಾಲೂಕಿನ ಪೋಲೀಸರು ರಸ್ತೆಯಲ್ಲಿ ನಿಂತು ಪ್ರಕರಣ ದಾಖಲಿಸುತ್ತಿದ್ದಾರೆ.
ಆದರೆ ಇಲ್ಲಿ ಸಾರ್ವಜನಿಕ ರ ಪ್ರಶ್ನೆ ಇಷ್ಟೇ ನಿಯಮಗಳನ್ನು ಪಾಲಿಸಬೇಕಾಗಿರುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ, ಅದರೆ ಇಲ್ಲಿ ದಿನವೊಂದಕ್ಕೆ ಹಾಕಲಾದ ಪ್ರಕರಣಗಳಿಂದ ಆದ ಹಣವನ್ನು ಅಯಾ ತಾಲೂಕಿನ ರಸ್ತೆ ಅಭಿವೃದ್ಧಿ ಅಥವಾ ಪೋಲೀಸರ ಮೂಲಭೂತ ಸೌಕರ್ಯಗಳಿಗೆ ಉಪಯೋಗ ಮಾಡುತ್ತಾರಾ ಎಂಬ ಪ್ರಶ್ನೆ ಮಾಡುತ್ತಿದ್ದಾರೆ.
ರಸ್ತೆ ನಿಯಮಗಳನ್ನು ಪಾಲಿಸಬೇಕು ಸರಿ ಹಾಗಾದರೆ ಸರಿಯಾದ ವ್ಯವಸ್ಥಿತ ರಸ್ತೆಯನ್ನು ಯಾಕೆ ಸರಕಾರ ಜನರಿಗೆ ನೀಡುತ್ತ ಇಲ್ಲ. ಹೊಂಡ ಗುಂಡಿಗಳಿಂದ , ತಿರುವುಗಳನ್ನೊಳಗೊಂಡ, ಅಭಿವೃದ್ಧಿ ಹೊಂದದ ರಸ್ತೆಗಳಿಂದ ಅಪಘಾತ ಗಳು ಎಷ್ಟು ನಡೆಯುತ್ತಿವೆ. ಅದರ ಬಗ್ಗೆ ಯಾಕೆ ಸರಕಾರ ಮೌನ ತಾಳಿದೆ.
ಮೂಲಭೂತ ಸೌಕರ್ಯಗಳ ನ್ನು ಮೊದಲು ಜನರಿಗೆ ನೀಡಿ ಅಬಳಿಕವೂ ಕಾನೂನು ನಿಯಮಗಳಿಗೆ ಅನುಸಾರವಾಗಿ ಹೊಂದಿಕೊಳ್ಳದ್ದಿದ್ದರೆ ಈ ಆದೇಶ ಸರಿಎಂಬುದು ಇವರ ವಾದ.
ಜನರಿಗೆ ಮೂಲಭೂತ ಸೌಕರ್ಯಗಳ ನ್ನು ಒದಗಿಸಲು ಶಕ್ತ ವಾಗಿಲ್ಲದ ಇವರು ಪೋಲೀಸರು ದಿನಕ್ಕೆ ಇಷ್ಟು ಪ್ರಕರಣ ದಾಖಲಿಸಲೇ ಬೇಕು ಎಂದು ಒತ್ತಾಯ ಮಾಡಿದ್ದರಿಂದಲೇ ಇವರು ಸಾರ್ವಜನಿಕ ರ ಮೇಲೆ ಪ್ರಭಾವ ಬೀರುವ ಮಟ್ಟಕ್ಕೆ ತಲುಪಿದೆ ಎಂಬುದು ವಾದ.
ಇದು ಸಾಕಾಗಿ ಹೋಗಿ ಕೊನೆಗೂ ಪೋಲೀಸರು ಸಾಮಾಜಿಕ ಜಾಲತಾಟದ ಮೂಲಕ ಸರಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಅದು ಸರಕಾರ ದ ವೆರೆಗೆ ತಲುಪುತ್ತದಾ ಅಥವಾ ಅದರ ಮೊದಲೇ ಚಿವುಟಿ ಹಾಕುತ್ತಾರಾ ಎಂಬುದೇ ಯಕ್ಷ ಪ್ರಶ್ನೆ! ಯಾವುದಕ್ಕೂ ಕಾದು ನೋಡೋಣ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here