ಬಂಟ್ವಾಳ: ಹ್ಯಾಪಿ ಬರ್ತಡ್ ಟು ವು ಅವಿನಾಶ್

ಹೀಗೆಂದು ಹೇಳಿ ಕೇಕ್ ನೀಡಿದವರು ಯಾರೂ ಗೊತ್ತಾ?
ದಿನದ 24 ಗಂಟೆಯೂ ಬ್ಯೂಸಿಯಾಗಿದ್ದುಕೊಂಡು ಕರ್ತವ್ಯ ವೇ ದೇವರು ಎಂದು ಹೇಳಿಕೊಂಡು , ನೇರ ನಡೆನುಡಿಯ ಯಾರೊಂದಿಗೂ ರಾಜಿ ಮಾಡಿಕೊಳ್ಳುಲು ಬಯಸದ, ಸದ್ಗುಣ ವಂತ ಅಫೀಸರ್ ಬಂಟ್ವಾಳ ನಗರ ಠಾಣಾ ಎಸ್.ಐ.ಚಂದ್ರಶೇಖರ್ ಅವರು.

 

ಸಿಬ್ಬಂದಿ ಗಳಿಂದ ಅಂತರ ಕಾಯ್ದುಕೊಂಡು ಖಡಕ್ ಅಫೀಸರ್ ಎಂದೇ ಕರೆಯಲ್ಪಡುವ ಚಂದ್ರಶೇಖರ್ ಅವರು ಮಂಗಳವಾರ ಸಂಜೆ ತನ್ನ ಠಾಣಾ ಸಿಬ್ಬಂದಿ ಅವಿನಾಶ್ ಅವರ ಹುಟ್ಟಿದ ಹಬ್ಬದ ಆಚರಣೆಯಲ್ಲಿ ಭಾಗವಹಿಸಿದರು.
ಅದರಲ್ಲಿ ಏನಪ್ಪ ವಿಶೇಷ ಅಂತೀರಾ?
ಯಾವುದೇ ಅಡಂಬರವಿಲ್ಲ, ಒಂದು ಕೇಕ್ ಮಾತ್ರ ಜೊತೆಗೆ ಅವಿನಾಶ್ ಅವರ ವರ್ಷವನ್ನು ಸೂಚಿಸುವ ಕ್ಯಾಂಡಲ್ ನಗರ ಪೋಲೀಸ್ ಠಾಣಾ ಟೇಬಲ್ ಮೇಲೆ ಇಡಲಾಗಿತ್ತು.
ನಗರ ಠಾಣಾ ಪೋಲೀಸ್ ಠಾಣೆ ಯ ಎಲ್ಲಾ ಸಿಬ್ಬಂದಿ ಗಳು ಒಂದೇ ಮನೆಯ ಸದಸ್ಯ ರಂತೆ ಅವಿನಾಶ್ ಅವರ ಬರ್ತಡೇ ಕೇಕ್ ಕತ್ತರಿಸುವ ಸಂದರ್ಭದಲ್ಲಿ ಹಾಜರು.
ಜೊತೆಗೆ ಎಸ್.ಐ.ಅವರು ಅವಿನಾಶ್ ಜೊತೆಯಲ್ಲಿ ನಿಂತುಕೊಂಡು ಅವರ ಬಾಯಿಗೆ ಕೇಕ್ ನೀಡಿ ಶುಭಹಾರೈಸಿದರು.
ತನ್ನ ಜೊತೆ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿ ಗಳ ಸಂತೋಷದ ಸಮಯದಲ್ಲಿ ಪಾಲ್ಗೊಂಡು ಅವರಿಗೆ ನೈತಿಕ ಸ್ಥೈರ್ಯ ತುಂಬಿಸುವ ಕೆಲಸ ಎಸ್.ಐ.ಚಂದ್ರಶೇಖರ್ ಅವರು ಮಾಡುತ್ತಾ ಇದ್ದಾರೆ.
ಹೀಗೆ ಪ್ರತಿಯೊಬ್ಬರ ಬರ್ತಡ್ ಠಾಣೆಯಲ್ಲಿ ನಡೆಯುವ ಸಂಪ್ರದಾಯ ಮಾಡಲಾಗುತ್ತಿದೆ.
ಕುಟುಂಬದ ಸದಸ್ಯರ ಜೊತೆ ಯಾವ ರೀತಿಯ ಲ್ಲಿ ಆಚರಣೆ ಮಾಡುತ್ತೇವೆ , ಅದೇ ರೀತಿಯಲ್ಲಿ ನಾವು ಕೆಲಸ ಮಾಡುವ ಕಚೇರಿಯಲ್ಲಿ ಆಚರಣೆಗಳು ನಡೆದಾಗ ಸಿಬ್ಬಂದಿ ಗಳ ಜೊತೆ ಉತ್ತಮ ಬಾಂಧ್ಯವ್ಯ ಇರುತ್ತದೆ. ಸಂಘನಾತ್ಮಕ ಕೆಲಸ ಮಾಡುವುದರಿಂದ ಠಾಣೆಯಲ್ಲಿ ಕೆಲಸದ ಒತ್ತಡವು ಕಡಿಮೆಯಾಗುತ್ತದೆ, ಮತ್ತು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಹಾಯವಾಗುತ್ತದೆ ಎಂಬುದು ಅವರ ಯೋಚನೆ.
ಇವರ ಇಂತಹ ಯೋಚನೆ ಗಳಿಗೆ ಬೆಂಬಲ ಸಿಗಲಿ ಎಂಬುದೇ ಹಾರೈಕೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here