ಮುಂಬಯಿ (ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಆಶ್ರಯದಲ್ಲಿ ಮಂಗಳೂರು ಹೊರ ವಲಯದ ಅಡ್ಯಾರ್ ಗಾರ್ಡ್‌ನಲ್ಲಿ ಇತ್ತೀಚೆಗೆ ಪಟ್ಲ ಸಂಭ್ರಮ ನಡೆಸಲಾಗಿದ್ದು ಇದರ ಯಶಸ್ಸಿಗೆ ಶ್ರಮಿಸಿದ ಘಟಕಗಳ ಪದಾಧಿಕಾರಿಗಳು, ಸದಸ್ಯರಿಗೆ ಧನ್ಯೋತ್ಸವ ಕಾರ್ಯಕ್ರಮ ಇಂದಿಲ್ಲಿ ಬೆಂದೂರ್‌ವೆಲ್‌ನ ಅಭಿಮಾನ್ ಟೆಕ್ಸಸ್ ಕಮ್ಯುನಿಟಿ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.

ಪಟ್ಲ ಸಂಭ್ರಮದ ಮೊದಲು ಕಲಾವಿದರಿಗೆ ಹಮ್ಮಿಕೊಂಡಿದ್ದ ಕ್ರೀಡಾಕೂಟವು ಯಶಸ್ವಿಯಾಗಿ ನಡೆದಿದ್ದು ಪಟ್ಲ ಸಂಭ್ರಮದ ಯಶಸ್ಸಿಗೆ ಇದು ಪೂರಕವಾಯಿತು. ಯಶಸ್ಸಿಗೆ ಶ್ರಮಿಸಿದ ಎಲ್ಲಾ ಘಟಕಗಳ ಪದಾಧಿಕಾರಿಗಳು ಸದಸ್ಯರು, ಕಲಾವಿದರು, ಮಹಿಳಾ ಘಟಕಗಳು ನಿರಂತರವಾಗಿ ಕೆಲಸ ಮಾಡಿದ ಪರಿಣಾಮ ಪಟ್ಲ ಸಂಭ್ರಮ ಅದ್ದೂರಿಯಾಗಿ ನೆರವೇರಿತು ಮುಂದಿನ ವರ್ಷ ಪಟ್ಲ ಸಂಭ್ರಮದ ೫ನೇ ವರ್ಷಾಚರಣೆ ಅರ್ಥಪೂರ್ಣವಾಗಿ ನಡೆಸಲು ಕಾರ್ಯ ಯೋಜನೆ ರೂಪಿಸಲಾಗುವುದು ಎಂದು ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಟ್ಲ ಫೌಂಡೇಶನ್‌ನ ಮಂಗಳೂರು ಘಟಕದ ಸಂಚಾಲಕ ನಿಟ್ಟೆ ಗುತ್ತು ರವಿರಾಜ ಶೆಟ್ಟಿ, ಅಮೋಘ ಶಿಪ್ಪಿಂಗ್‌ನ ಮಾಲಕ ನಿತ್ಯಾನಂದ ಶೆಟ್ಟಿ, ಸವಣೂರು ಸೀತಾರಾಮ ರೈ, ಭುಜಬಲಿ ಧರ್ಮಸ್ಥಳ, ಲಕ್ಷ್ಮೀಶ ಭಂಡಾರಿ, ಜಯರಾಮ ಶೇಖ ಕೇಂದ್ರೀಯ ಘಟಕದ ಉಪಾಧ್ಯಕ್ಷ ಮನುರಾವ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಜತೆ ಕಾರ್ಯದರ್ಶಿ ರಾಜೀವ ಪೂಜಾರಿ ಕೈಕಂಬ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಜಗನ್ನಾಥ್ ಶೆಟ್ಟಿ ಬಾಳ, ದುರ್ಗಾಪ್ರಕಾಶ್ ಈರೋಡ್, ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಆಳ್ವ, ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ ಮೊದಲಾದವರು ಉಪಸ್ಥಿತರಿದ್ದರು.

ಸರಪಾಡಿ ಅಶೋಕ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಪ್ರದೀಪ್ ಆಳ್ವ ಕದ್ರಿ, ಪಡು ಶರತ್ ಶೆಟ್ಟಿ, ಕದ್ರಿ ನವನೀತ ಶೆಟ್ಟಿ, ಮಹವೀರ್ ಪಾಂಡಿ ಮತ್ತಿತರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕೇಂದ್ರೀಯ ಘಟಕದ ಗೌರವಾಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಬದಲಾಯಿಸುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಸ್ವಾಗತಿಸಿ, ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here