Tuesday, September 26, 2023

ಸರಕಾರಿ ಪ್ರೌಢ ಶಾಲೆ ಪಂಜಿಕಲ್ಲಿನಲ್ಲಿ “ಬೀಜದುಂಡೆ ಬಿತ್ತನೆ ಹಾಗೂ ಗಿಡನೇಡುವ” ಕಾರ್ಯಕ್ರಮ

Must read

ಬಂಟ್ವಾಳ: ಸರಕಾರಿ ಪ್ರೌಢಶಾಲೆ ಪಂಜಿಕಲ್ಲಿನಲ್ಲಿ “ಬೀಜದುಂಡೆ ಬಿತ್ತನೆ ಹಾಗೂ ಗಿಡನೆಡುವ” ಕಾರ್ಯಕ್ರಮ ನೇರವೇರಿತು. ಅರಣ್ಯ ಇಲಾಖಾ ವಲಯ ಅರಣ್ಯ ಅಧಿಕಾರಿಯಾಗಿರುವ ಸುರೇಶ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪರಿಸರವನ್ನು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಹಾಗೂ ಈ ಮೂಲಕ ಸರಕಾರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ತಿಳಿಸುತ್ತಾ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ದುರ್ಗಾಪ್ರಸಾದ್ ಕಾರ್ಯಕ್ರಮವನ್ನು ಉದ್ದೇಶಿಸಿ  ಮಾತನಾಡಿದರು. ಶಾಲಾ ಎಸ್.ಡಿ.ಎಂ.ಸಿ ಕಾರ್ಯಧ್ಯಕ್ಷರು ಆದ  ಸುದರ್ಶನ್ ಜೈನ್ ಪ್ರಕೃತಿ ಅಸಮತೋಲನವನ್ನು ತಡೆಯುವ ನಿಟ್ಟಿನಲ್ಲಿ ಶಾಲಾ ಹಂತದಲ್ಲಿಯೇ ಗಿಡಗಳನ್ನು ನೆಡುವ ಮೂಲಕ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು. ಈ ಕಾರ್ಯಕ್ರಮವನ್ನು ಶಾಲಾ ಗಣಿತ ಶಿಕ್ಷಕಿ ಅನಿತಾ ಶೆಟ್ಟಿ ನಿರೂಪಿಸಿದರು. ವಿಧ್ಯಾರ್ಥಿನಿ ಜ್ಯೋತಿ ಸ್ವಾಗತಿಸಿದರು. ವೇದಿಕೆಯಲ್ಲಿ ಅರಣ್ಯಧಿಕಾರಿಯಾದ ಅನಿಲ್ ಹಾಗೂ ಅರಣ್ಯಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

More articles

Latest article