ವಿಟ್ಲ: ಒಡಿಯೂರು ಶ್ರೀಗಳ ಜನ್ಮದಿನೋತ್ಸವ-ಗ್ರಾಮೋತ್ಸವ ಅಂಗವಾಗಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಬಾಕಿಲಪದವು ಘಟ ಸಮಿತಿ ವತಿಯಿಂದ ಬಾಕಿಲಪದವು ಶ್ರೀಗುರುರಾಘವೇಂದ್ರ ಭಜನಾ ಮಂದಿರದ ವಠಾರದಲ್ಲಿ ಸ್ವಚ್ಚತಾ ಕಾರ್‍ಯಕ್ರಮ ನೆರವೇರಿಸಲಾಯಿತು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ವಿಕಾಸ ವಾಹಿನಿಯ ಸದಸ್ಯೆಯಾದ ಸರಸ್ವತಿಯವರು ಗ್ರಾಮ ಸ್ವಚ್ಛತಾ ಕಾರ್‍ಯಕ್ರಮವನ್ನು ದೀಪೋಜ್ವಲನಗೊಳಿಸಿ ಶುಭ ಹಾರೈಸಿದರು. ಗುಂಪಿನ ಸದಸ್ಯೆ ಚಂದ್ರಾವತಿಯವರು ಸ್ವಾಗತಿಸಿದರು. ಘಟ ಸಮಿತಿ ಕಾರ್‍ಯದರ್ಶಿ ಶಶಿಕಲಾ ವಂದಿಸಿದರು. ಗ್ರಾಮ ಸೇವಾ ದೀಕ್ಷಿತೆ ಶಶಿಕಲಾ ಸಹಕರಿಸಿದರು.


