Monday, September 25, 2023
More

  ಜೂ.15-17: ನವಿ ಮುಂಬಯಿ ವಾಶಿ ಇಲ್ಲಿನ (ಬಾಲಾಜಿ ಮಂದಿರ) ಶ್ರೀ ಲಕ್ಷಿ ವೆಂಕಟರಮಣ ದೇವಸ್ಥಾನದ ರಜತ ಸಂಭ್ರಮ

  Must read

  ಮುಂಬಾಯಿ: ನವಿ ಮುಂಬಯಿ ಅಲ್ಲಿನ ಅನೇಕ ದೇವಸ್ಥಾನಗಳ ಪೈಕಿ ವಾಶಿ ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನವೂ (ಬಾಲಾಜಿ ಮಂದಿರ) ಇದರ ರಜತ ಸಂಭ್ರಮವು ನಾಳೆ ಜೂ.13 ರ ಶನಿವಾರ ದಿಂದ ಮೊದಲ್ಗೊಂಡು ಜೂ.16ನೇ ಸೋಮವಾರ ತನಕ ಮೂರು ದಿನಗಳಲ್ಲಿ ವಾಶಿ ಇಲ್ಲಿನ ಶ್ರೀ ಲಕ್ಷಿ ವೆಂಕಟರಮಣ ದೇವಸ್ಥಾನದಲ್ಲಿ ಗೌಡ ಸಾರಸ್ವತ್ ಬ್ರಾಹ್ಮಣ ಸಮಾಜದ ಕುಲಗುರು ದೈವಕ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಗಳ ಕೃಪೆ ಹಾಗೂ ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ದಿವ್ಯೋಪಸ್ಥಿ ಮತ್ತು ಅನುಗ್ರಹಗಳೊಂದಿಗೆ ಅದ್ದೂರಿಯಾಗಿ ನಡೆಸಲಾಗುವುದು.

  ವರ್ಷಂಪ್ರತಿ ಶ್ರೀ ಲಕ್ಷ್ಮೀ ವೆಂಕಟರಮಣ ಮಂದಿರದ ವರ್ಧಂತ್ಯೋತ್ಸವ ವಿಧಿವತ್ತಾಗಿ ಆಚರಿಸಲಾಗುತ್ತಿದ್ದು ಈ ಬಾರಿ ರಜತ ಸಂಭ್ರಮ ಪ್ರಯುಕ್ತ 25ನೇ ಪ್ರತಿಷ್ಟಾ ವರ್ಧಂತಿ ಮಹೋತ್ಸವವನ್ನು ವಿವಿಧ ಸೇವೆಗಳೊಂದಿಗೆ ಸಂಭ್ರಮೋಲ್ಲಾಸದಿಂದ ನೆರವೇರಿಸಲಾಗುವುದು. ಅಂತೆಯೇ ಪರಿವಾರ ದೇವತೆಗಳ 22ನೇ ವರ್ಧಂತಿ ಮಹೋತ್ಸವವು ಮತ್ತು ನವಗ್ರಹ ದೇವತೆಗಳ 18ನೇ ವರ್ಧಂತಿ ಮಹೋತ್ಸವ ತ್ರಿದಿನಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8.30 ಗಂಟೆ ತನಕ ನಡೆಸಲಾಗುವುದು.

  ಆ ನಿಮಿತ್ತ ಇಂದು (ಜೂ.14) ಶುಕ್ರವಾರ ಸಂಜೆ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ದೇವಸ್ಥಾನಕ್ಕೆ ಪಾದಾರ್ಪಣೆಗೈದು ನಾಲ್ಕು ದಿನಗಳಲ್ಲಿ ಮೊಕ್ಕಾಂ ಹೂಡಿ ಶ್ರೀದೇವರಿಗೆ ಪೂಜೆ ನೆರವೇರಿಸಲಿದ್ದಾರೆ. ಜೂ.15ನೇ ಶನಿವಾರ ಬೆಳಿಗ್ಗೆ 7 ಗಂಟೆಯಿಂದ ದೇವತಾ ಪ್ರಾರ್ಥನೆ, ಗುರುಪೂಜೆ, ದೇವಾನಂದಿನಿ ಸಮಾರಾಧನೆ, ಋತ್ವಿಜವರಣ, ಬೆಳಿಗ್ಗೆ 8 ಗಂಟೆಗೆ ವೆಂಕಟೇಶ ಹಾಗೂ ಪರಿವಾರ ದೇವತಾ ಮೂಲ ಮಂತ್ರ ಜಪ, ಜೂ.16ನೇ ಭಾನುವಾರ ಜೇಷ್ಠಶುಕ್ಲ ಚತುರ್ದಶಿ ದಿನ (ಪರಿವಾರ ದೇವತಾ ಪ್ರತಿಷ್ಠಾ ವರ್ಧಂತಿ) ಬೆಳಿಗ್ಗೆ 7 ಗಂಟೆಯಿಂದ ಮೂಲ ಮಂತ್ರ ಜಪ, ಶ್ರೀ ಲಕ್ಷಿ ಹೃದಯ ಪಾರಯಣ ಹವನ, ಜೂ.17ನೇ ಸೋಮವಾರ ಲಘು ವಿಷ್ಣು ಹವನ ಮತ್ತು ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮ, ಜೂ.20ನೇ ಗುರುವಾರ ನಾಗ ದೇವತೆಯ ಪ್ರತಿಷ್ಟಾ ವರ್ಧಂತಿ ಮಹೋತ್ಸವ ನಡೆಸಲಾಗುವುದು. ಅಂತೆಯೇ ಭಕ್ತಾಭಿಮಾನಿಗಳ ಸಹಕಾರದಿಂದ ಪ್ರಸಕ್ತ ವರ್ಷ ಆಡಳಿತ ಮಂಡಳಿಯು ಶ್ರೀ ವೆಂಕಟರಮಣ ಮತ್ತು ಶ್ರೀದೇವಿ, ಭೂದೇವಿಗೆ ಬೆಳ್ಳಿಯ ಆಭೂಷಣಗಳನ್ನು ಸಿದ್ಧಪಡಿದ್ದು ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಶ್ರೀ ದೇವರಿಗೆ ಅರ್ಪಣೆ ಮಾಡಲಿದ್ದಾರೆ.

  ಜಿಎಸ್‌ಬಿ ಸಭಾ ನವಿ ಮುಂಬಯಿ:
  ನವಿ ಮುಂಬಯಿ ಅಲ್ಲಿನ ಅನೇಕ ದೇವಸ್ಥಾನಗಳ ಪೈಕಿ ವಾಶಿ ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನವೂ (ಬಾಲಾಜಿ ಮಂದಿರ) ಒಂದಾಗಿದೆ. ಇದು ಪ್ರತಿಷ್ಠಿತ ಹಾಗೂ ಉನ್ನತ ಸ್ಥಾನ ಪಡೆದಿರುವ ಒಂದು ಧಾರ್ಮಿಕ ಕೇಂದ್ರವೂ ಹೌದು. ವಾಶಿ ಇಲ್ಲಿನ ಹೃದಯ ಭಾಗದಲ್ಲಿ ಧಾರ್ಮಿಕ ಕೇಂದ್ರವಾಗಿದ್ದು ವಿವಿಧ ಮೂಲೆಗಳಿಂದಲೂ ಸಮಾಜದ ಸಹಸ್ರಾರು ಭಕ್ತಾಭಿಮಾನಿಗಳನ್ನು ಆಕರ್ಷಿಸುತ್ತಿದೆ. ಮಂದಿರದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಅತೀ ಸುಂದರವಾದ ಶ್ರೀ ವೆಂಕಟರಮಣ ದೇವರ ಮತ್ತು ಎಡ ಬದಿಯಲ್ಲಿ ಶ್ರೀದೇವಿ ಹಾಗೂ ಬಲ ಬದಿಯಲ್ಲಿ ಭೂದೇವಿ ವಿಗ್ರಹವು ತಿರುಮಲ ತಿರುಪತಿ ದೇವಸ್ಥಾನದ ಕೊಡುಗೆಯಾಗಿರುತ್ತದೆ. ಮಂದಿರದ ಮೇಲಂತಸ್ತಿನ ನಾಲ್ಕು ಮೂಲೆಗಳಲ್ಲಿರುವ ಶ್ರೀ ಮುಖ್ಯಪ್ರಾಣ, ಶ್ರೀ ಗಣಪತಿ, ಶ್ರೀ ಲಕ್ಷ್ಮಿ, ಶ್ರೀ ಗರುಡ ಮತ್ತು ನೆಲ ಅಂತಸ್ತಿನಲ್ಲಿರುವ ಭಗವಾನ್ ಸುಬ್ರಹ್ಮಣ್ಯ, ನಾಗ ದೇವತೆ ಮತ್ತು ನವಗ್ರಹಗಳಿಗೆ ನಿತ್ಯ ಪೂಜೆಗಳು ನೆರವೇರಿಸಲಾಗುತ್ತ್ತಿದೆ.

  1978ರಲ್ಲಿ ಸ್ಥಾಪಿತ ಜಿಎಸ್‌ಬಿ ಸಭಾ ನವಿ ಮುಂಬಯಿ ಸ್ವಸಮಾಜದ ಹಿತದೃಷ್ಟಿಯೊಂದಿಗೆ ಆಧ್ಯಾತ್ಮಿಕ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಗಳಲ್ಲಿ ತೊಡಗಿಸಿ ಕೊಂಡು ಸಮಾಜೋಭಿವೃದ್ಧಿಯ
  ಸೇವೆಗಳಲ್ಲಿ ಕಾರ್ಯಪ್ರವೃತ ಗೊಂಡಿದೆ. ಉಪನಗರ ನವಿಮುಂಬಯಿ ಇಲ್ಲಿನ ವಾಶಿಯಲ್ಲಿ ಸಿಡ್ಕೋ ನಿವೇಶನ ಖರೀದಿಸಿ ತನ್ನ ಸಂಚಾಲಕತ್ವದಲ್ಲಿ ಶ್ರೀ ಲಕ್ಷಿ ವೆಂಕಟರಮಣ ದೇವಸ್ಥಾನವೂ (ಬಾಲಾಜಿ ಮಂದಿರ) ಸ್ಥಾಪಿಸಿ ಶ್ರದ್ಧಾಕೇಂದ್ರವಾಗಿಸಿ ಶ್ರೀದೇವರ ಸೇವೆಯಲ್ಲಿ ನಿರತವಾಗಿದೆ. ಹಾಗೂ ಸಮಾಜ ಭವನವನ್ನೂ ನಡೆಸುತ್ತಿದೆ. ಈ ವರ್ಷ ಜಿಎಸ್‌ಬಿ ಸಭಾ ನವಿ ಮುಂಬಯಿ ಸಂಸ್ಥೆಯು ಬೆಳ್ಳಿಹಬ್ಬ ಸಡಗರದಲ್ಲಿದ್ದು ೨೫ನೇ ವಾರ್ಷಿಕ ಆಚರಣೆಯಲ್ಲಿದ್ದು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ (ಬಾಲಾಜಿ ಮಂದಿರ) ಪ್ರತಿಷ್ಠಾ ವರ್ಧಂತಿ ಮಹೋತ್ಸವ ರಜತಮಹೋತ್ಸವ ಸಂಭ್ರಮಿಸುತ್ತಿದೆ.

  ಭಕ್ತಿಯಿಂದ ಮಾಡಿದ ಅರ್ಪಣೆಯನ್ನು ಭಗವಂತ ಸ್ವೀಕಾರ ಮಾಡಬೇಕೆಂದು ಅತ್ಯಂತ ಶ್ರದ್ಧಾ ಪೂರ್ವಕವಾಗಿ ವರ್ಧಂತಿ ಮಹೋತ್ಸವದ ಆಚರಣೆ ನಡೆಸಲಾಗುತ್ತದೆ. ಬಾಲಾಜಿಯ ವಿಗ್ರಹವು ಸ್ವರ್ಣಾಭರಣಗಳಿಂದ ಮತ್ತು ಚಿನ್ನದ ಕಿರೀಟದಿಂದ ರಾರಾಜಿಸುತ್ತದೆ. ಭಗವಂತ ತಮ್ಮ ಎಲ್ಲಾ ಸಮಸ್ಯಗಳ ಪರಿಹಾರ ಮಾಡುತ್ತಿದ್ದು ಭಕ್ತಾಭಿಮಾನಿಗಳಿಗೆ ಇಲ್ಲಿನ ಭಗವಂತನ ಮೇಲಿರುವ ನಂಬಿಕೆ ವರ್ಷ ಕಳೆದಂತೆ ಹೆಚ್ಚೆಚ್ಚುತ್ತಿದ್ದು ಈ ಮಂದಿರವು ದಿನಕಳೆದಂತೆ ಸದ್ಭಕ್ತರ ಆಕರ್ಷಣೀಯ ಧಾರ್ಮಿಕ ಕೇಂದ್ರವಾಗಿ ಪರಿವರ್ತನೆ ಗೊಳ್ಳುತ್ತಿದೆ. ದೇವಸ್ಥಾನದ ಟ್ರಸ್ಟ್ ಕೂಡಾ ವಿವಿಧ ಸೇವೆಗಳಲ್ಲಿ ನಿರತವಾಗಿ ಆಥಿಕ ಸಂಕಷ್ಟದಲ್ಲಿರುವ ಸಮಾಜ ಬಾಂಧವರಿಗೆ ಶೈಕ್ಷಣಿಕ ನೆರವು ಮತ್ತು ವೈದ್ಯಕೀಯ ಸಹಾಯವನ್ನೂ ಮಾಡುತ್ತಿದೆ.

  ಆ ಪ್ರಯುಕ್ತ ನಡೆಸಲ್ಪಡುವ ಈ ರಜತ ಸಡಗರದಲ್ಲಿ ನಾಡಿನ ಸಮಸ್ತ ಜಿಎಸ್‌ಬಿ ಬಂಧು-ಭಗಿನಿಯರು, ಸಭಾ ಸದಸ್ಯರು ಮತ್ತು ಭಕ್ತಾಭಿಮಾನಿಗಳು ಆಗಮಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಿ ಶ್ರೀ ಹರಿಯ ಕೃಪೆಗೆ ಪಾತ್ರರಾಗುವಂತೆ ಜಿಎಸ್‌ಬಿ ಸಭಾ ನವಿ ಮುಂಬಯಿ ಅಧ್ಯಕ್ಷ ಎಸ್.ಆರ್ ಪೈ, ಕಾರ್ಯಾಧ್ಯಕ್ಷ ದೀಪಕ್ ಬಿ.ಶೆಣೈ ಗೌರವ ಕಾರ್ಯದರ್ಶಿ ವಸಂತ್ ಕುಮಾರ್ ಬಂಟ್ವಾಳ ಮತ್ತು ಕೋಶಾಧಿಕಾರಿ ಪ್ರೇಮಾನಂದ ಮಲ್ಯ ಹಾಗೂ ಪದಾಧಿಕಾರಿಗಳು ಆಡಳಿತ ಮಂಡಳಿ ಪರವಾಗಿ ಈ ಮೂಲಕ ವಿನಂತಿಸಿದ್ದಾರೆ.

  More articles

  LEAVE A REPLY

  Please enter your comment!
  Please enter your name here

  Latest article