


ವಿಟ್ಲ: ಕೇಪು ಕಲ್ಲಂಗಳ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಯೋಗ ದಿನಾಚರಣೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ನಾನಾ ರೀತಿಯ ಯೋಗಾಸನಗಳ ಪ್ರದರ್ಶನ ನಡೆಯಿತು.
ಮುಖ್ಯ ಅತಿಥಿಗಳಾಗಿ ನಿವೃತ್ತ ದೈ.ಶಿ.ಶಿಕ್ಷಕ ಜಯ.ಪಿ, ವಿಠಲ ಪ.ಪೂ.ಕಾಲೇಜಿನ ಲೀಲಾಲಕ್ಷ್ಮಣ್ ವಿಟ್ಲ. ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮಾಲತಿ ಕೆ.ವಹಿಸಿದ್ದರು. ಸಹಶಿಕ್ಷಕ ಸುಬ್ರಮಣ್ಯ ಭಟ್, ಲಕ್ಷ್ಮಣ್ ನಾಯ್ಕ, ರಮೇಶ.ಡಿ, ಪುಷ್ಪ ಹಾಗೂ ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು.
ವಿಶಿತ ಸ್ವಾಗತಿಸಿದರು. ತ್ರಿಶಾಲಿ ವಂದಿಸಿದರು.


