Tuesday, September 26, 2023

ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಆಗತ – ಸ್ವಾಗತ ಕಾರ್ಯಕ್ರಮ

Must read

ಕಲ್ಲಡ್ಕ: ಅನ್ಯ ರಾಷ್ಟ್ರದವರು ತಮ್ಮ ದೇಶವನ್ನು ಪ್ರೀತಿಸುತ್ತಾರೆ. ಅದರೆ ಭಾರತೀಯರು ರಾಷ್ಟ್ರವನ್ನು ಆರಾದಿಸುತ್ತಾರೆ. ಪ್ರಕೃತಿಯ ವಸ್ತು, ಜೀವಿಗಳಲ್ಲಿ ದೇವರನ್ನು ಕಂಡ ರಾಷ್ಟ್ರ ಭಾರತ. ಇದರಿಂದ ಭಾರತ ಭಿನ್ನ ರಾಷ್ಟ್ರವಾಗಿದೆ. ಆದರೆ ವಿದೇಶಿ ಚಿಂತನೆ ಈ ರಾಷ್ಟ್ರದ ಶಿಕ್ಷಣದಲ್ಲಿ ಬಂದ ಕಾರಣ ನಾವಿಂದು ರಾಷ್ಟ್ರವನ್ನು ಆರಾದಿಸುವುದನ್ನು ಮರೆತಿದ್ದೇವೆ. ಇದನ್ನು ಬದಲಿಸಿ ಭಾರತದ ಮಣ್ಣಿನ ಚಿಂತನೆಯನ್ನು ಶಿಕ್ಷಣದಲ್ಲಿ ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಶ್ರೀರಾಮ ವಿದ್ಯಾಕೇಂದ್ರ ಕಾರ್ಯವೆಸಗುತ್ತದೆ. ಈ ರಾಷ್ಟ್ರಭಕ್ತಿ ಚಿಂತನೆಯನ್ನು ಸ್ವೀಕಾರ ಮಾಡುವ ಕಾರ್‍ಯವಾಗುತ್ತಿದೆ. ವಿದ್ಯಾರ್ಥಿಗಳು ಜಗತ್ತು ಗೌರವ ಕೊಡುವ ನಿಟ್ಟಿನಲ್ಲಿ ಬದುಕುವಂತಾಗಬೇಕು. ಎಂದು ಡಾ| ಪ್ರಭಾಕರ ಭಟ್ ಕಲ್ಲಡ್ಕ, ಅಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇವರು ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿನ ಆಗತ ಸ್ವಾಗತ ಕಾರ್‍ಯಕ್ರಮವನ್ನುದ್ದೇಶಿಸಿ ಮಾರ್ಗದರ್ಶನ ಮಾಡಿದರು.
ಮುಖ್ಯ ಅತಿಥಿಗಳಾದ ಜ್ಯೋತಿಷ್ಯರಾಗಿರುವ ಅಮ್ಟೂರಿನ ಶ್ರೀ ಮನೋಜ್ ಕಟ್ಟೆಮಾರ್ ಇವರು ಮಾತನಾಡಿ ಭಾರತದ ಸಾಧನೆಗಳು ಜಗತ್ತಿನಲ್ಲಿ ಉತ್ತಮ ರೀತಿಯಲ್ಲಿ ಗುರುತಿಸುವಂತಾಗಿದೆ. ಅಂತಹ ಭಾರತದ ಸಾಧನೆಗಳನ್ನು ಶಿಕ್ಷಣದ ಮೂಲಕ ಶ್ರೀರಾಮ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ತಿಳಿಸುವಂತಹ ಕಾರ್‍ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ವೇದಿಕೆಯಲ್ಲಿ ಅತಿಥಿಗಳಾಗಿ  ಪ್ರತಾಪ ಗೌಡ ಬಾಚಣಿ ಸರಕಾರಿ ಗುತ್ತಿಗೆದಾರರು, ನಂಜಪ್ಪ ಬೋವಿ, ರಾಜ್ಯಾಧ್ಯಕ್ಷರು ಬೋವಿ ಜನಾಂಗ ಸಮಿತಿ ಒಕ್ಕೂಟ, ಚಂದ್ರಶೇಖರ್ ಮಾಜಿ ಪ್ರಧಾನ ಕಾರ್‍ಯದರ್ಶಿ ಬೋವಿ ಜನಾಂಗ ಸಮಿತಿ ಒಕ್ಕೂಟ ಕರ್ನಾಟಕ ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ಬಿ. ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್ ಎನ್, ಮುಖ್ಯ ಶಿಕ್ಷಕಿ ವಸಂತಿ ಕುಮಾರಿ ಉಪಸ್ಥಿತರಿದ್ದರು.
ಕಾರ್‍ಯಕ್ರಮದಲ್ಲಿ ಪ್ರೌಢಶಾಲೆಗೆ ದಾಖಲಾದ ನೂತನ ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆಗೈದು ಹಿರಿಯರಿಂದ ತಿಲಕಧಾರಣೆ ಹಾಗೂ ಆಶೀರ್ವಾದ ಪಡೆದರು.
9ನೇ ತರಗತಿಯ ಪ್ರಕೃತಿ ವೈಯಕ್ತಿಕ ಗೀತೆ ಹಾಡಿದರು. ಪ್ರಶಾಂತ ನೇರೇಳು ಶ್ರೀಮಾನ್ ನಿರೂಪಿಸಿ, ಸೌಮ್ಯ ಬಿ. ಮಾತಾಜಿ ಸ್ವಾಗತಿಸಿ, ವಿಜಯಾ ಮಾತಾಜಿ ವಂದಿಸಿದರು.

More articles

Latest article