Sunday, October 22, 2023

ಕಲ್ಲಡ್ಕ ರೈ.ಸೇ.ಸ.ಸಂಘಕ್ಕೆ ಆಯ್ಕೆ

Must read

ಬಂಟ್ವಾಳ: ಕಲ್ಲಡ್ಕರೈತರ ಸೇವಾ ಸಹಕಾರ ಸಂಘ ನಿಯಮಿತ ಕಲ್ಲಡ್ಕ ಇದರ 2019-2024 ನೇ ಸಾಲಿನ ನೂತನ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆಯು ಗುರುವಾರ ಸಂಘದ ಮುಖ್ಯಕಛೇರಿಯಲ್ಲಿ  ನಡೆದಿದ್ದು,  ನೂತನ ಅಧ್ಯಕ್ಷರಾಗಿ ಸಹಕಾರ ಭಾರತಿಯ ಬೆಂಬಲಿತ,  ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಪುನರಾಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ  ಬಿ. ಸುಧಾಕರರೈ ಬೋಳಂತೂರು ರವರು ಸರ್ವಾನುಮತದಿಂದ ಅಯ್ಕೆಯಾಗಿದ್ದಾರೆ.   ಸಂಘದ ನಿರ್ದೇಶಕರಾಗಿ  ಪೂವಪ್ಪಗೌಡ, ಗಿರಿಯಪ್ಪಗೌಡ, ವೆಂಕಟ್ರಾಯ ಪ್ರಭು, ಲೋಕಾನಂದ,  ಸುರೇಶ್ ಶೆಟ್ಟಿ,  ಚಂದ್ರಶೇಖರಟೈಲರ್,  ಮಹಾಬಲ ಸಾಲ್ಯಾನ್, ಕೊರಗಪ್ಪ ನಾಯ್ಕ, ನೋಣಯ್ಯಎಂ.ಅರ್,  ಅರುಣ ಭಟ್,  ವಿಜಯರವರು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.  ಚುನಾವಣಾಧಿಕಾರಿಯಾಗಿ  ಬಿ. ನಾಗೇಂದ್ರರವರು ಕಾರ್ಯನಿರ್ವಹಿಸಿದರು. ಸಂಘದ ಅಧ್ಯಕ್ಷ ಕೆ.ಪದ್ಮನಾಭಕೊಟ್ಟಾರಿಯವರು ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿಗೆ ಸಹಕರಿಸಿದ ಸಂಘದ ಸದಸ್ಯ ಮತದಾರರಿಗೆಕೃತಜ್ಞತೆ ಸಲ್ಲಿಸಿದರು.  ಹಾಗೂ ಗೆಲುವಿಗೆ ಸಹಕರಿಸಿದ ಬಿಜೆಪಿ ಮತ್ತು ಸಹಕಾರ ಭಾರತಿಯಕಾರ್ಯಕರ್ತರು ಹಾಗೂ ಸಿಬ್ಬಂದಿ ವರ್ಗಕ್ಕೆ  ಕೃತಜ್ಞತೆ ಸಲ್ಲಿಸಿದರು.  ಈ ಸಂದರ್ಭದಲ್ಲಿಬಂಟ್ವಾಳ ಎ.ಪಿ.ಎಂ.ಸಿ ಸದಸ್ಯರಾದ ಬಿ.ನೇಮಿರಾಜರೈ ಬೋಳಂತೂರು, ವಿಟ್ಲಗ್ರಾಮೀಣ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಎಂ. ತಾಲೂಕು ಪಂಚಾಯತ್ ಸದಸ್ಯ ಮಹಾಬಲ ಆಳ್ವ, ಗೋಳ್ತಮಜಲು ಗ್ರಾಮ ಪಂಚಾಯತ್‌ಅಧ್ಯಕ್ಷೆ  ಜಯಲಕ್ಷ್ಮೀ, ಬಾಳ್ತಿಲ ಗ್ರಾಮ ಪಂಚಾಯತ್‌ಅಧ್ಯಕ್ಷ ವಿಠಲ ನಾಯ್ಕ್, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುರೇಶ.ಕೆ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

More articles

Latest article