ಬಂಟ್ವಾಳ: ಪವಿತ್ರವಾದ ಎರಡು ಧರ್ಮಗಳ ನಡುವೆ ಇನ್ನಷ್ಟು ಬಾಂಧವ್ಯ ಹೊಂದಲು ಕಡೇಶಿವಾಲಯ ಗ್ರಾಮದಿಂದ ಮಣಿನಾಲ್ಕೂರು ಗ್ರಾಮದ ಸಂಪರ್ಕ ವ್ಯವಸ್ಥೆಗೆ ಸೌಹಾರ್ದ ಸೇತುವೆ ಮಾಡಲಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಕಡೇಶಿವಾಲಯ ದೇವಸ್ಥಾನದ ವಠಾರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.



ಎರಡು ಧರ್ಮದ ಆಸ್ತಿಯಾಗಿ ಜಿಲ್ಲೆಯ ಸೌಹಾರ್ದ ದ ಉದ್ದೇಶದಿಂದ ಈ ಸೇತುವೆ ನಿರ್ಮಾಣಕ್ಕೆ 2016 ರಲ್ಲಿ ಘೋಷಣೆ ಮಾಡಿದ್ದೆ.
ಬಹಳ ಪ್ರಮುಖವಾದ ಈ ರಸ್ತೆ ಯ ಸೇತುವೆಗೆ ಸೌಹಾರ್ದ ಸೇತುವೆ ಎಂಬ ಹೆಸರು ನೀಡಿದ್ದು ನಾನು, ಮಂಜೂರಾತಿ ನೀಡಿದ್ದು ಕೂಡಾ ನಾನೇ ಎಂದು ಅವರು ಹೇಳಿದರು.
19.84 ಕೋಟಿ ರೂ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣ ವಾಗುತ್ತಿದೆ. 8. 50 ಮೀ. ಎತ್ತರದಲ್ಲಿ 312 ಮೀ ಉದ್ದದ ಸೇತುವೆ ಯಲ್ಲಿ 13 ಪಿಲ್ಲರ್ 14 ಪೌಂಡೇಶನ್ ಬರುತ್ತದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
2017 ನೇ ಇಸವಿಯಲ್ಲಿ ಈ ಸೇತುವೆಯ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದ್ದು, 2018ರಲ್ಲಿ ಟೆಂಡರ್ ಅಗಿದೆ . ಟೆಂಡರ್ ಬಳಿಕ ಕಾಮಗಾರಿ ನಡೆಸುಲು ಸ್ವಲ್ಪ ಮಟ್ಟಿಗೆ ತಾಂತ್ರಿಕ ತೊಂದರೆಯಾಗಿತ್ತು, 2019 ರ ಮೇ ತಿಂಗಳಿನಿಂದ ಕಾಮಗಾರಿ ನಡೆಸಲಾಗುತ್ತಿದ್ದು ಅವಧಿಯೊಳಗೆ ಕಾಮಗಾರಿ ಮುಗಿಸಿ ಜನರ ಸೌಲಭ್ಯ ಕ್ಕೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
ನಾನು ಎಂ.ಎಲ್.ಎ.ಅಗಿದ್ದಾಗ ಪ್ರಾರಂಭವಾದ , ಮಂಜೂರಾತಿಯಾದ ಯೋಜನೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಲ್ಲಾ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಡೆಸಿ ಜನರ ಉಪಯೋಗ ಕ್ಕೆ ನೀಡುತ್ತೇವೆ ಎಂದು ರೈ ಅವರು ಭರವಸೆ ನೀಡಿದರು.
ಚೆನ್ನೈ ಮೂಲದ ಕಂಪೆನಿ ಯ ರಾಘವನ್ ಅವರು ಈ ಗುತ್ತಿಗೆ ವಹಿಸಿಕೊಂಡಿದ್ದಾರೆ.
30 ತಿಂಗಳಲ್ಲಿ ಈ ಕಾಮಗಾರಿ ಮುಗಿಸುವ ಭರವಸೆ ನೀಡಿದ ಗುತ್ತಿರದಾರರು ಇನ್ನು ಎರಡು ತಿಂಗಳು ಕೆಲಸ ಮಾಡಲಾಗುತ್ತದೆ, ಮಳೆಗಾಲವಾದರಿಂದ ಮಳೆ ಕಡಿಮೆ ಯಾದ ಬಳಿಕ ಕೆಲಸ ಮುಂದುವರಿಸುತ್ತೇವೆ ಎಂದರು.
ವೇದಿಕೆಯಲ್ಲಿ ಇಂಜಿನಿಯರ್ ಮಂಜೇಶ್, ಗುತ್ತಿಗೆದಾರ ರಾಘವನ್, ಜಿ.ಪಂ.ಸದಸ್ಯ ರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ್ ಜೈನ್, ಮಂಜುಳಾ ಮಾದವ ಮಾವೆ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಸಂಪತ್ ಕುಮಾರ್ ಶೆಟ್ಟಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಮಣಿನಾಲ್ಕೂರು ಗ್ರಾ.ಪಂ.ಅಧ್ಯಕ್ಷೆ ಗೀತಾಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.