ವಿಟ್ಲ: ಪುತ್ತೂರಿನ ಬಂಟರ ಭವನದಲ್ಲಿ ನಡೆದ ಜೆಸಿಐ ವಲಯ ಮಧ್ಯಂತರ ಸಮಾವೇಶದಲ್ಲಿ ಜೆಎಫ್ಎಂ ಬಾಲಕೃಷ್ಣ ವಿಟ್ಲ ಇವರ ಅಧ್ಯಕ್ಷತೆಯ ವಿಟ್ಲ ಜೇಸಿಐ ಘಟಕ ನಾನಾ ವಿಭಾಗಗಳಲ್ಲಿ ಹತ್ತಾರು ಪ್ರಶಸ್ತಿಗಳನ್ನು ಪಡೆದು ಕೊಂಡಿದೆ.
ವಲಯ 15ರ ಜಿ ಪ್ರಾಂತ್ಯದಲ್ಲಿ, ಜಿ ಮತ್ತು ಡಿ (ಬೆಳವಣಿಗೆ ಮತ್ತು ಅಭಿವೃದ್ಧಿ) ವಿಭಾಗದ ’ಮುಂಗಾರಿನ ರಾಜ ರಾಣಿ ಪುರಸ್ಕಾರ’, ವಲಯ ಆಡಳಿತ ವಿಭಾಗದಿಂದ ಡೈಮಂಡ್ ಲೋಮ್ ಅವಾರ್ಡ್, ಕಾರ್ಯಕ್ರಮ ವಿಭಾಗದಲ್ಲಿ ಔಟ್ ಸ್ಟ್ಯಾಂಡಿಂಗ್ ಲೋಮ್ ಅವಾರ್ಡ್, ಪ್ರತಿಷ್ಠಿತ ಔಟ್ ಸ್ಟ್ಯಾಂಡಿಂಗ್ ಘಟಕಾಧ್ಯಕ್ಷ ಪ್ರಶಸ್ತಿ, ತರಬೇತಿ ವಿಭಾಗದಲ್ಲಿ ಮನ್ನಣೆ.. ಅಲ್ಲದೇ ಹಲವಾರು ವಿಶೇಷ ಮನ್ನಣೆಗಳು ಜೆಸಿಐ ವಿಟ್ಲ ಘಟಕಕ್ಕೆ ಸಂದಿದೆ. ಪ್ರಶಸ್ತಿ ಪ್ರದಾನ ಸಮಾವೇಶದಲ್ಲಿ ಜೆಸಿಐ ವಿಟ್ಲ ಘಟಕದ ಪೂರ್ವಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು.


