ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತ್ರತ್ವದಲ್ಲಿ ಸೌಹಾರ್ದತೆಗಾಗಿ ಬಿಸಿರೋಡಿನ ತಲಪಾಡಿ ಆಲ್ ಖಜಾನಾ ಹಾಲ್ ನಲ್ಲಿ ಸೌಹಾರ್ದ ಇಪ್ತಾರ್ ಕೂಟ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿ ದ ಮಾಜಿ ಸಚಿವ ಬಿ.ರಮಾನಾಥ ರೈ, ಸಾಮರಸ್ಯದ ಬದುಕು ನಡೆಸಿ, ಮನುಷ್ಯ ಮನುಷ್ಯನ ನಡುವೆ ಪ್ರೀತಿ ವಿಶ್ವಾಸ ಗಳಿಸಿ ಎಂದು ಅವರು ಹೇಳಿದರು.
ದ್ವೇಷದಿಂದ ಬದುಕುವುದನ್ನು ಯಾರು ಸಹಿಸುದಿಲ್ಲ, ಎಲ್ಲರೂ ಒಟ್ಟಾಗಿ ಸಹಬಾಳ್ವೆ ನಡೆಸಿದಾಗ ಮಾತ್ರ ದೇವರು ಒಳ್ಳೆಯದು ಮಾಡುತ್ತಾರೆ ಎಂದು ಅವರು ಹೇಳಿದರು.
ಈ ಬಾರಿಯ ರಂಮ್ಜಾನ್ ಹಬ್ಬ ಶಾಂತಿಯಿಂದ ಅತ್ಯಂತ ಉತ್ತಮ ವಾಗಿ ನಡೆಯಲಿ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಸಚಿವರಾದ ಐವನ್ ಡಿ.ಸೋಜ, ಹರೀಶ್ ಕುಮಾರ್, ಪ್ರಮುಖರಾದ ಎ.ಸಿ.ಭಂಡಾರಿ, ಮಹಮ್ಮದ್ ಆಲಿ, ಕಾವು ಹೇಮನಾಥ ಶೆಟ್ಟಿ, ಪಿಯೂಸ್ ರೋಡ್ರಿಗಸ್, ನವೀನ್ .ಡಿ.ಸೋಜ, ಎಂ.ಎಸ್.ಮಹಮ್ಮದ್, ಅಬ್ಬಾಸ್ ಅಲಿ, ಪದ್ಮನಾಭ ರೈ, ಮಹಮ್ಮದ್ ಶಫಿ, ಸುದೀಪ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಪದ್ಮಶೇಖರ್ ಜೈನ್, ಸುದರ್ಶನ ಜೈನ್, ಬೇಬಿ ಕುಂದರ್, ಚಂದ್ರ ಪ್ರಕಾಶ್ ಶೆಟ್ಟಿ, ಮತ್ತಿತರ ಪ್ರಮುಖರು ಇಪ್ತಾರ್ ಕೂಟದ ಲ್ಲಿ ಭಾಗವಹಿಸಿ ದ್ದರು.