ಬಂಟ್ವಾಳ: ಕ್ಷುಲಕ ಕಾರಣಕ್ಕೆ ಕೆ.ಎಸ್ .ಆರ್.ಟಿ.ಸಿ.ಬಸ್ ಮತ್ತು ದ್ವಿಚಕ್ರವಾಹನ ಸವಾರ ಮಧ್ಯೆ ಮಾತಿನ ಚಕಮಕಿ ನಡೆದು ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಮಾಣಿ ಪೇಟೆಯಲ್ಲಿ ಶನಿವಾರ ಮಧ್ಯಾಹ್ನದ ವೇಳೆ ನಡೆಯಿತು.



ದ್ವಿಚಕ್ರ ವಾಹನ ಸವಾರರಿಗೆ ಸರಕಾರಿ ಬಸ್ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಈ ಗಲಾಟೆ ನಡೆದಿದೆ ಎನ್ನಲಾಗಿದೆ.
ಮಂಗಳೂರು ಕಡೆಯಿಂದ ಮೈಸೂರು ಕಡೆಗೆ ಸಂಚರಿಸುತ್ತಿದ್ದ ಸರಕಾರಿ ಬಸ್ ಮಾಣಿ ಜಂಕ್ಸನ ಸಮೀಪಿಸುತ್ತಿದ್ದಂತೆ ದ್ವಿಚಕ್ರ ಸವಾರರಿಬ್ಬರಿಗೆ ಸೈಡ್ ಕೊಡದೆ ಮುಂದೆ ಹೋಗಲು ಬಿಟ್ಟಿ ಲ್ಲ ಎಂದು ಯುವಕರು ಬಸ್ ಚಾಲಕನಿಗೆ ಹಲ್ಲೆ ನಡೆಸಿದ್ದಾರೆ.
ಬಸ್ ಚಾಲಕ ಇಷ್ಟಾದರೂ ನಿಲ್ಲಿಸದೆ ಮುಂದೆ ಹೋದಾಗ ಬಸ್ ನ್ನು ಬೆನ್ನಟ್ಟಿಕೊಂಡು ಮಾಣಿ ಪೇಟೆಯಿಂದ ಸ್ವಲ್ಪ ಮುಂದೆ ಹೋಗಿ ಬಸ್ ಗೆ ದ್ವಿಚಕ್ರ ವಾಹನ ಅಡ್ಡ ಇಟ್ಟು ಚಾಲಕನಿಗೆ ಬಸ್ ನಿಂದ ಎಳೆದು ಹಾಕಿ ಥಳಿಸಿದ್ದಾರೆ.
ಯವಕರು ಕಲ್ಲಡ್ಕದಿಂದ ಒಂದು ಡಿಯೋ ವಾಹನದಲ್ಲಿ ಮೂರು ಮಂದಿ ಮತ್ತು ಬೈಕಿನಲ್ಲಿ ಎರಡು ಮಂದಿ ರೈಡ್ ಮಾಡಿಕೊಂಡು ಬರುತ್ತಿದ್ದಂತೆ ಮಾಣಿ ಸಮೀಪ ಇವರಿಗೆ ಸೈಡ್ ಕೊಟ್ಟಿಲ್ಲ ಎಂದು ಇವರು ಹಲ್ಲೆ ನಡೆಸಿ ದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.
ಗಡಿಯಾರ ನಿವಾಸಿಗಳಾದ ಶಿಯಾಬುದ್ದೀನ್, ಮಹಮ್ಮದ್ ಇಲ್ಯಾಸ್, ಜಾಸೀರ್, ಬೋಳಂತರೂ ನಿವಾಸಿ ಮಹಮ್ಮದ್ ಶಾಫಿ ಅವರನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಥಳಕ್ಕೆ ವಿಟ್ಲ ಎಸ್.ಐ.ಯಲ್ಲಪ್ಪ ಹಾಗೂ ಬಂಟ್ವಾಳ ಎ.ಎಸ್.ಪಿ.ವಿಶೇಷ ತಂಡದ ಉದಯ ರೈ ಹಾಗೂ ವಿವೇಕ್ ಬೇಟಿ ನೀಡಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.