ಬಂಟ್ವಾಳ: ಬಂಟ್ವಾಳ ನಗರ ಪೋಲೀಸ್ ಠಾಣೆಯ ಬಳಿ ಇರುವ ಹೋಟೆಲೊಂದರ ಅಂಗಳದಲ್ಲಿ ಯುವಕರಿಬ್ಬರು ಸೇರಿ ದಲಿತ ಯುವಕನ ಮೇಲೆ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಅಮ್ಟಾಡಿ ನಿವಾಸಿ ದಲಿತ ಯುವಕ ಸಂತೋಷ್ ಎಂಬಾತನಿಗೆ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ ಪರಿಣಾಮ ಈತ ಬಂಟ್ವಾಳ ಸಮುದಾಯ ಆಸ್ಪತ್ರೆ ಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.



ಜಿ.ಪಂ.ಸದಸ್ಯ ರೋರ್ವರಿಗೆ ಅವ್ಯಾಚ್ಚವಾಗಿ ಸಂತೋಷ್ ಬೈದಿದ್ದಾನೆ ಎಂದು ಆರೋಪಿಸಿ ಪಚ್ಚಿನಡ್ಕ ನಿವಾಸಿ ಶರಣ್ ಮತ್ತು ಯತೀಶ್ ಸೇರಿಕೊಂಡು ಸಂತೋಷ್ ಅವರಿಗೆ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.
ಆರೋಪಿ ಶರಣ್ ಮತ್ತು ಯತೀಶ್ ಎಂಬಾತನನ್ನು ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಸಂತೋಷ್ ಅವರಿಗೆ ಶರಣ್ ಹಾಗೂ ಯತೀಶ್ ಅವರು ಮಾರಣಾಂತಿಕ ಹಲ್ಲೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆ ಎಂದು ಬಂಟ್ವಾಳ ನಗರ ಠಾಣೆಯ ಲ್ಲಿ ಪ್ರಕರಣ ದಾಖಲಾಗಿದೆ.