Tuesday, October 31, 2023

ಸಹಾಯ ಮಾಡುವುದೇ ಈ ಸಂಘಟನೆಗಳ ಮೂಲ ಧ್ಯೇಯ

Must read

ಬಂಟ್ವಾಳ: ಬೀಳುವ ಸ್ಥಿತಿಯಲ್ಲಿ ದ್ದ ಮನೆಯೊಂದರ ರಿಪೇರಿ ಮಾಡಿ ಮಾನವೀಯತೆ ಮೆರೆದ ಕಲ್ಕಡ್ಕದ ಸಂಘಟನೆಗಳು.
ಈ ಪರಿಸರದಲ್ಲಿ ಕಷ್ಟದಲ್ಲಿರುವ ರನ್ನು ಹುಡುಕಿ ಅವರ ಸಹಾಯ ಮಾಡಲು ಈ ಸಂಘಟನೆಗಳು ಯಾವಾಗಲೂ ಮುಂದು.
ಗೋಳ್ತಮಜಲು ಗ್ರಾಮದ ಗಣೇಶಕೋಡಿ ವಿಮಲಕ್ಕ ಎಂಬವರ ಮನೆಯ ಮಾಡು ಮುರಿದು ಹೋಗಿ ಹಂಚುಗಳು ಬಿದ್ದು ಹೋಗುವ ಪರಿಸ್ಥಿತಿಯಲ್ಲಿತ್ತು.

ಈ ಮನೆಯ ಆಧಾರಸ್ತಂಭವಾಗಿದ್ದ ಯಜಮಾನರನ್ನು ಕಳೆದುಕೊಂಡಿರುವ ವಿಮಲಕ್ಕ ಗಣೇಶ್ ಕೋಡಿ ಇವರ ಇಬ್ಬರು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಬೀಡಿ ಕಟ್ಟಿ ಜೀವನ ಸಾಗಿಸುತ್ತಿರುವ ಇವರ ಮನೆ ಬಿದ್ದು ಹೋಗುವ ಸ್ಥಿತಿಯಲ್ಲಿತ್ತು. ಮನೆ ರಿಪೇರಿ ಅಸಾಧ್ಯ ಪರಿಸ್ಥಿತಿಯಲ್ಲಿ
ಇವರ ಕಷ್ಟಕರ ಜೀವನವನ್ನರಿತು, ಶ್ರೀ ಗಣೇಶ್ ಗೆಳೆಯರ ಬಳಗ ಗೋಳ್ತಮಜಲು ತಂಡದ ಸದಸ್ಯರ ಮುಂದಾಳತ್ವದಲ್ಲಿ , ಸ್ವಸ್ತಿಕ್ ಫ್ರೆಂಡ್ಸ್ ಅಂಕದಡ್ಕ ಇವರ ಸಹಭಾಗಿತ್ವದಲ್ಲಿ, ಮಾತ್ರಶ್ರೀ ಗೆಳೆಯರ ಬಳಗ ವೀರಕಂಭ ಹಾಗೂ ಸ್ಥಳೀಯ ನಾಗರೀಕರ ಸಹಕಾರದೊಂದಿಗೆ ಮನೆಯ ಛಾವಣಿಯ ಕೆಲಸ ಪೂರ್ಣಗೊಂಡಿದೆ.


ಸುಮಾರು 60 ಸಾವಿರ ರೂ ವೆಚ್ಚದಲ್ಲಿ ಸಂಪೂರ್ಣ ಮೇಲ್ಚಾವಣಿಯ ಕೆಲಸ ವನ್ನು ಈ ಸಂಘಟನೆಗಳು ಹಾಗೂ ಊರಿನ ದಾನಿಗಳ ನೆರವಿನಿಂದ ಮಾಡಲಾಗಿದೆ.
ಸಂಘಟನೆಗಳ ಯುವಕರು ಶ್ರಮದಾನದ ಮೂಲಕವೇ ಹೆಚ್ಚಿನ ಕೆಲಸ ಮುಗಿಸಿದರೆ, ಕೆಲವೊಂದು ಕೆಲಸಗಳಿಗೆ ಮಾತ್ರ ಹೊರಗಿನ ಜನರನ್ನು ಸಂಬಳ ನೀಡಿ ಕರೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಡ ಜನರಿಗೆ , ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ಇವರ ಪ್ರಮುಖ ಧ್ಯೇಯವಾಗಿದೆ.

ಈ ಬಡ ಕುಟುಂಬಕ್ಕೆ ಧನ ಸಹಾಯ ಮಾಡಿದ ಎಲ್ಲರಿಗೂ ನಮ್ಮ ಬಂಟ್ವಾಳ ವೆಬ್ ಸೈಟ್ ಧನ್ಯವಾದ ಗಳನ್ನು ಹೇಳಲು ಬಯಸುವುದರ ಜೊತೆಯಲ್ಲಿ ಇಂತಹ ಸಮಾಜಿಮುಖಿ ಕಾರ್ಯಗಳಿಗೆ ನಿಮ್ಮ ಮನಸ್ಸು ಮಿಡಿಯಲಿ ಎಂಬುದೇ ಆಶಯ.

More articles

Latest article