-ಯಾದವ ಕುಲಾಲ್

ಬಿ.ಸಿ.ರೋಡ್ : ಬೇಸಿಗೆ ಕಾಲದಲ್ಲಿ ಜನರಿಗೆ ಬಾಯಾರಿಕೆಯನ್ನು ನೀಗಿಸಲು ಬಳಕೆಯಾಗಬೇಕಾಗಿದ್ದ ಹೆದ್ದಾರಿಯ ಬದಿಯಲ್ಲಿರುವ ಶುದ್ಧನೀರಿನ ಘಟಕಗಳು ಈ ಮಳೆಗಾಲದಲ್ಲಿ ಪೊದೆಯೊಳಗೆ ಹೂತು ಹೋಗುವ ಎಲ್ಲ ಸಾಧ್ಯತೆ ಸ್ಪಷ್ಟವಾಗಿ ಕಾಣುತ್ತಾ ಇದೆ. ಅಲ್ಲದೆ ಇನ್ನೊಂದು ಘಟಕ ರಸ್ತೆ ಕಾಮಗಾರಿಯ ಸಂದ‘ದಲ್ಲಿ ಮಣ್ಣು ಅಗೆದು ರಾಶಿ ಹಾಕುವಾಗ ಆ ಮಣ್ಣಿನ ಅಡಿಗೆ ಸೇರಿದೆ. ಇದು ಸುಮಾರು 8.8 ಲಕ್ಷ ರೂ.ಗಳಲ್ಲಿ ನಿರ್ಮಾಣಗೊಂಡ ಶುದ್ಧ ನೀರಿನ ಘಟಕಗಳ ದುರವಸ್ಥೆ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ವತಿಂದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯಿಂದ ಶುದ್ದ ಘಟಕಗಳು ಕೆಆರ್‌ಐಡಿಎಲ್ ಮಂಗಳೂರು ಸಂಸ್ಥೆಯಿಂದ ನಿರ್ಮಾಣಗೊಂಡಿದ್ದವು.


ಕಾವಳ ಮೂಡೂರು ಗ್ರಾಮದ ಕೈಲಾರ್ ಬಳಿ ಇರುವ ಶುದ್ಧ ನೀರಿನ ಘಟಕವು, ಮಣ್ಣಿನಡಿ ಸಿಲುಕಿದೆ. ಬಿ.ಸಿ.ರೊಡು-ಪುಂಜಾಲಕಟ್ಟೆ ರಸ್ತೆ ಕಾಮಗಾರಿ ಸಂದರ್ಭ ಈ ಘಟಕದ ಮೇಲೆಯೇ ಮಣ್ಣು ಹಾಕಲಾಗಿದೆ. ಹೆದ್ದಾರಿ ಇಲಾಖೆಯು ಕಾಮಗಾರಿ ಆರಂಭಿಸುವ ಮೊದಲೇ ಶುದ್ಧನೀರಿನ ಘಟಕವನ್ನು ಸ್ಥಳಾಂತರ ಮಾಡಲು ಸೂಚನೆ ನೀಡಿತ್ತು. ಆದರೆ ಸಂಬಂಧಪಟ್ಟ ಯಾವ ಇಲಾಖೆಯೂ ಇದರತ್ತ ಗಮನ ಹರಿಸದ ಕಾರಣ ಅದು ಅಲ್ಲಿಯೇ ಉಳಿತು.

ಬೇಸಿಗೆ ಕಾಲದಲ್ಲಿ ಸಾರ್ವಜನಿಕರಿಗೆ ಬಾಯಾರಿಕೆಯಾದರೆ ಒಂದು ರೂಪಾ ಕಾನ್ ಹಾಕಿ ನೀರು ಕುಡಿಯುವ ಸೌಲಭ್ಯ ಒದಗಿಸುವ ಈ ಶುದ್ಧ ನೀರಿನ ಘಟಕವು ನಿಜವಾಗಿಯೂ ಪ್ರಯೋಜನಕಾರಿ ಯೋಜನೆಯಾಗಿತ್ತು. ಎಲ್ಲ ಕಡೆ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟಕಗಳ ನಿರ್ಮಾಣವಾಗಿತ್ತು. ಜನಸ್ನೇಹಿ ಯೋಜನೆ ಇದಾಗಿದ್ದರೂ ತಾಂತ್ರಿಕ ಕಾರಣಗಳಿಂದ ಎಲ್ಲ ಘಟಕಗಳು ಸ್ಥಗಿತಗೊಂಡಿವೆ. ಸಮರ್ಪಕವಾದ, ವ್ಯವಸ್ಥಿತವಾದ ಉಸ್ತುವಾರಿ ಇಲ್ಲದೆ ಅಷ್ಟೊಂದು ಖರ್ಚು ಮಾಡಿ ನಿರ್ಮಾಣ ಮಾಡಿದ್ದು ಯಾರಿಗೂ ಪ್ರಯೋಜನಕ್ಕ ಬಾರದೆ ಹೋಗಿದೆ. ನೀರಿನಲ್ಲಿ ಹೋಮ ಮಾಡಿದ ಹಾಗೆ ಯೋಜನೆ ವ್ಯರ್ಥವಾಗಿದೆ.

ವಳಚ್ಚಿಲ್, ತುಂಬೆ ವ್ಯಾಪ್ತಿಯ ಘಟಕಗಳು ಕೂಡಾ ಈ ಮಳೆಗಾಲದಲ್ಲಿ ಪೊದೆಯೊಳಗೆ ಅಡಗುವ ಎಲ್ಲ ಮುನ್ಸೂಚನೆ ಇದೆ. ಬೃಹತ್ ನೀರಿನ ಟ್ಯಾಂಕ್, ಅಲ್ಯೂಮಿನಿಯಂ ಪಾರ್ಟಿಶಿಯನ್‌ನಿಂದ ಕೂಡಿದ್ದು ಅದರೊಳಗಡೆ ನೀರು ಶುದೀಕರಣದ ಯಂತ್ರಗಳು ಸೇರಿಕೊಂಡಿದೆ. ಜನರಿರುವ ಪ್ರದೇಶದಲ್ಲಿ ಅದರ ನಿರ್ಮಾಣ ಮಾಡಿದ್ದರೆ ಸಾರ್ವಜನಿಕರಿಗೆ ಅದರ ಪ್ರಯೋಜನವಾಗುತ್ತಿತ್ತು. ಒಂದೊಂದು ಘಟಕಕ್ಕೆ ಲಕ್ಷಗಟ್ಟಲೆ ವೆಚ್ಚ ಮಾಡಿ ಜನರಿಗೆ ಅದರ ಪ್ರಯೋಜನ ಸಿಗದೆ ಕಾಟಾಚಾರಕ್ಕೆ ಇಂತಹ ಯೋಜನೆಯನ್ನು ಜಾರಿ ಮಾಡಿದಂತಾಗಿದೆ.

ಹೆದ್ದಾರಿಯ ಕೆಲಸ ಪ್ರಾರಂಭ ಮಾಡುವ ಮೊದಲೇ ಶುದ್ಧ ನೀರಿನ ಘಟಕವನ್ನು ಸ್ಥಳಾಂತರಿಸಲು ಪಂಚಾಯತ್‌ಗೆ ತಿಳಿಸಿದ್ದೇವೆ. ಮಳೆಗಾಲವಾದ್ದರಿಂದ ಸ್ಥಳಾಂತರವನ್ನು ಕಾಯಲಿಕ್ಕೆ ಹೋದರೆ ನಮ್ಮ ಕೆಲಸ ಬಾಕಿಯಾಗುತ್ತದೆ. ಆದ ಕಾರಣ ನಾವು ಮಣ್ಣು ಮಾತ್ರ ಹಾಕಿದ್ದೇವೆ. ಮಳೆಗಾಲ ಮುಗಿದ ನಂತರ ನಮ್ಮ ಕೆಲಸ ಮುಂದುವರಿಸುವ ಕಾರಣ ಇನ್ನು ಈ ಜಾಗದಲ್ಲಿ ಕೆಲಸ ಮಾಡುವುದಿಲ್ಲ. ಸ್ಥಳಾಂತರ ಯಾವಾಗಲೂ ಮಾಡಬಹುದು.
– ರಮೇಶ್, ಎಇಇ, ರ್‍ಟ್ರಾಯ ಹೆದ್ದಾರಿ

ಹೆದ್ದಾರಿ ಸ್ಥಳ ಸ್ವಾನ ಮಾಡಿದಾಗ ಬಸ್ಸು ನಿಲ್ದಾಣವನ್ನು ಪಂಚಾಯತ್ ಹಸ್ತಾಂತರ ಮಾಡಿದೆ. ಆ ಕಾರಣ ನಮ್ಮ ಪಂಚಾಯತ್‌ಗೆ ಕೆಆರ್‌ಡಿಐಎಲ್ ಸಂಸ್ಥೆ ನೀರಿನ ಘಟಕವನ್ನು ಹಸ್ತಾಂತರ ಮಾಡಿಲ್ಲ. ಪಂಚಾಯತ್‌ಗೆ ಹಸ್ತಾಂತರ ಮಾಡಿದ್ದರೆ ನಾವು ಅದರ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ.
– ವೇದವ, ಪಂಚಾಯತ್ ಅಭಿವೃದ್ಧಿ ಅಕಾರಿ, ಕಾವಳಮೂಡೂರು

ಜನರ ತೆರಿಗೆಂದ ನಿರ್ಮಾಣವಾದ ಸರಕಾರಿ ಸ್ವತ್ತುಗಳು ಎಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣವಾಗಿದೆ. ಆದರೆ ಯಾರಿಗೂ ಅದರಿಂದ ಪ್ರಾಯೋಜನವಾಗಿಲ್ಲ. ಕೇಳಿದರೆ ತಾಂತ್ರಿಕ ತೊಂದರೆ ಎನ್ನುತ್ತಾರೆ. ಹೀಗೆ ಪ್ರತೀ ಪಂಚಾಯತ್‌ನಲ್ಲಿ ನಿರ್ಮಾಣವಾದ ನೀರಿನ ಘಟಕ್ಕೆ ಲಕ್ಷಗಟ್ಟಲೆ ಹಣ ವ್ಯುಸಿದ್ದನ್ನು ಯಾರೂ ಕೇಳುವವರಿಲ್ಲ. ಎಲ್ಲರೂ ನೋಡಿಕೊಂಡು ಬಾ ಮುಚ್ಚಿ ಹೋಗುತ್ತಾರೆ. ಆದಷ್ಟು ಬೇಗ ಎಲ್ಲಾ ಶುದ್ಧ ನೀರಿನ ಘಟಕಗಳಿಗೆ ಮರು ಜೀವ ನೀಡಿ ಜನರಿಗೆ ಅದರ ಪ್ರಯೋಜನ ಬರುವಂತಾಗಲಿ.
– ವಿನೋದ್ ಕುಮಾರ್, ತುಂಬೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here