ಪೋಲೀಸ್ ಎಂದಾಕ್ಷಣ ಬೆಚ್ವಿಬಿದ್ದು ನೋಡುವ ಕಾಲವಿತ್ತು. ಆದರೆ ಈಗ ಹಾಗಿಲ್ಲ. ಧಮಸ್ಥಳ ಪೋಲೀಸ್ ಠಾಣಾ ಅಧಿಕಾರಿಗಳು ಮತ್ತು ಇತರೇ ಸಿಬ್ಬಂದಿಯ ಕಾರ್ಯವೊಂದು ಅಂತಹ ವಾತಾವರಣವನ್ನು ಬದಲಾಯಿಸುವಂತೆ ಮಾಡಿ ಇದೀಗ ಎಲ್ಲೆಡೆ ಪ್ರಶಂಸೆಗೊಳಗಾಗಿದೆ.*
ತಾವೇ ಸ್ವತಃ ವಾಟ್ಸಪ್ ಗ್ರೂಪ್ ಮಾಡಿ, ಗ್ರೂಪ್ ನ ಸದಸ್ಯರೇ ಚಂದಾಹಾಕಿ, ತಮ್ಮ ವ್ಯಾಪ್ತಿಯ ಪ್ರತೀ ಸರಕಾರೀ ಶಾಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸ್ಕೂಲ್ ಬ್ಯಾಗ್, ನೋಟ್ ಪುಸ್ತಕಗಳು, ಕಂಪಾಸ್ ಬಾಕ್ಸ್ ಗಳನ್ನು ಖರೀದಿಸಿ ಉಚಿತವಾಗಿ ಹಂಚುವ ಮಾದರಿ ಕಾರ್ಯಕ್ರಮವನ್ನು ನಮ್ಮ ಧರ್ಮಸ್ಥಳ ಪೋಲೀಸ್ ಠಾಣಾ ವತಿಯಿಂದ ನಡೆಯಿತು. ಇಂದು ಪಟ್ರಮೆಯ ಅನಾರು ಶಾಲೆಗೆ ಭೇಟಿಕೊಟ್ಟು ಸದ್ರಿ ಶಾಲಾ ಬಡ ಪ್ರತಿಭಾವಂತ ಮಕ್ಕಳಿಗೆ ತಮ್ಮ ಈ ಕೊಡುಗೆಯನ್ನು ಠಾಣಾಧಿಕಾರಿಯವರಾದ  ಅವಿನಾಶ್ ರವರ ಮೂಲಕ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ  ಅವಿನಾಶ್ ರವರು, ತಾವು ಸ್ವತಃ ಸರಕಾರಿ ಶಾಲೆಯಲ್ಲೇ ಕಲಿತದ್ದಾಗಿದ್ದು,ಸರಕಾರಿ ಶಾಲಾ ಮಕ್ಕಳ ಪರಿಸ್ಥಿತಿಯ ಸಂಪೂರ್ಣ ಅರಿವು ತಮಗಿರುವ ಕಾರಣ ಸರಕಾರಿ ಶಾಲಾ ಮಕ್ಕಳನ್ನು ಆಯ್ಕೆ ಮಾಡಿ , ಅವರ ಮುಂದಿನ ಉತ್ತಮ ಭವಿಷ್ಯಕ್ಕೆ ತಮ್ಮ ಈ ಅಳಿಲ ಸೇವೆ ಸಲ್ಲಿಸುತ್ತಿದ್ಧೆವೆ ಎಂದರು.*
*ಈ ಸಂದರ್ಭದಲ್ಲಿ ಪಟ್ರಮೆ ಗ್ರಾಮದ ಬೀಟ್ ಪೋಲೀಸರಾಗಿರುವ ಶ್ರೀ ಧರೇಶ್ , ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಕೃಷ್ಣಮೂರ್ತಿ, ಶಾಲಾ sdmc ಅಧ್ಯಕ್ಷರಾದ ಶ್ರೀ ಶ್ಯಾಮರಾಜ್, ಉಪಾಧ್ಯಕ್ಷರಾದ ಶ್ರೀಮತಿ ಸುನಿತಾ ಹಾಗೂ ಇತರೇ sdmc ಸದಸ್ಯರು, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.*
*ಅನಾರು ಶಾಲೆಯ ಪರವಾಗಿ ಮಾತ್ರವಲ್ಲ, ಪಟ್ರಮೆ ಗ್ರಾಮದ ಪರವಾಗಿ ಧರ್ಮಸ್ಥಳ ಪೋಲೀಸ್ ಠಾಣಾಧಿಕಾರಿಗಳು ಮತ್ತು ಈ ಕೈಂಕರ್ಯದಲ್ಲಿ ಜೊತೆಯಾದ ಅವರ ಎಲ್ಲಾ ಸಿಬ್ಬಂದಿವರ್ಗಕ್ಕೂ ತುಂಬುಹೃದಯದ ಅಭಿವಂದನೆಗಳು.🙏*

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here