ಮುಂಬಯಿ: ವಿವಿಧ ಸಂಘಟನೆ ಸ್ಥಾಪಿಸಿ ಹಂಚಿ ಹೋಗಿರುವ ಬಿಲ್ಲವರು ಒಂದೇ ವೇದಿಕೆಯಡಿಯಲ್ಲಿ ಒಟ್ಟಾಗಿ ಸರಕಾರ ನೀಡುತ್ತಿರುವ ಸವಲತ್ತುಗಳಿಗಾಗಿ ಹೋರಾಡಬೇಕು. ಸರಕಾರವು ಎಲ್ಲಾ ಹಿಂದುಳಿದ ವರ್ಗ ಪಂಗಡಗಳ ಅಭಿವೃದ್ಧಿಗಾಗಿ ಸಾಕಷ್ಟು ಸವಲತ್ತುಗಳನ್ನು ಕಾಯ್ದಿರಿಸಿದೆ. ಆದರೆ ಅದನ್ನು ಪಡೆಯಲು ಸೂಕ್ತ ರೀತಿಯಲ್ಲಿ ಪ್ರಯತ್ನ ಆಗುತ್ತಿಲ್ಲ. ನಾನು ಈ ಸವಲತ್ತುಗಳನ್ನು ಸಮರ್ಪಕವಾಗಿ ಸಿಗುವಂತೆ ಅನೇಕ ಸಲ ಪ್ರಯತ್ನಸಿದ್ದೇನೆ ಎಂದು ಕರ್ನಾಟಕ ಸರಕಾರದ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಕಳೆದ ಸೋಮವಾರ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನಕ್ಕೆ ಭೇಟಿ ನೀಡಿದ ಶ್ರೀನಿವಾಸ ಪೂಜಾ ಬಿಲ್ಲವರ ಅಸೋಸಿಯೇಶನ್ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ ‘ನಾರಾಯಣ ಗುರುಗಳ ಸಂದೇಶದಂತೆ, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ನಾವು ತೋರಿಸಿಕೊಡಬೇಕಾಗಿದೆ. ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿಯವರು ಬಿಲ್ಲವ ಸಮಾಜದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ.

 

ಆ ಆದರ್ಶವನ್ನು ನಾವು ಮುಂದುವರೆಸಬೇಕು. ಕೋಟಿ-ಚೆನ್ನಯರ ಗರಡಿಗಳಿಗೆ ಸಂಬಂಧಿಸಿ ಎಷ್ಟೋ ಎಕರೆ ಜಾಗ ಪಾಲು ಬಿದ್ದಿದೆ. ಇದನ್ನು ಸೂಕ್ತ ರೀತಿಯಲ್ಲಿ ನೋಂದಣಿಗೊಳಿಸಿ ಅಭಿವೃದ್ಧಿ ಪಡಿಸಲು ನಾವು ಪ್ರಯತ್ನಶೀಲರಾಗಬೇಕು. ಮುಂಬಯಿ ಅಲ್ಲಿನ ಬಿಲ್ಲವರ ಅಸೋಸಿಯೇಶನ್ ಜಯ ಸಿ.ಸುವರ್ಣ ಅವರ ನೇತೃತ್ವದಲ್ಲಿ ಬಲಿಷ್ಠವಾಗಿ ಬೆಳೆಯುತ್ತಿರುವುದು ಅಭಿಮಾನದ ಸಂಗತಿ’ ಎಂಬುದಾಗಿ ವಿವರಿಸಿದರು.

ಮೊದಲಿಗೆ ನಾರಾಯಣ ಗುರುಗಳ ಮೂರ್ತಿಗೆ ಪ್ರಾಥಿಸಿದರು. ಅಸೋಸಿಯೇಶನ್‌ನ ಉಪಾಧ್ಯಕ್ಷ ಶಂಕರ್ ಡಿ.ಪೂಜಾರಿ ಅವರು ಶ್ರೀನಿವಾಸರನ್ನು ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರುಗಳಾದ ಹರೀಶ್ ಜಿ.ಅಮೀನ್, ಶ್ರೀನಿವಾಸ ಆರ್.ಕರ್ಕೇರ , ಜೊತೆ ಕಾರ್‍ಯದರ್ಶಿಗಳಾದ ಕೇಶವ ಕೆ. ಕೋಟ್ಯಾನ್, ರವೀಂದ್ರ ಎ.ಶಾಂತಿ, ಧರ್ಮೇಶ್ ಸಾಲ್ಯಾನ್, ಮಹಿಳಾ ವಿಭಾಗಧ್ಯಕ್ಷೆ ಜಯಂತಿ ವಿ. ಉಳ್ಳಾಲ್, ಆಡಳಿತ ಸಮಿತಿ ಸದಸ್ಯರಾದ ಶಕುಂತಳಾ ಕೆ.ಕೋಟ್ಯಾನ್, ಸುಮಿತ್ರಾ ಎಸ್.ಬಂಗೇರ, ದಿನೇಶ್ ಅಮೀನ್, ನವೀನ್ ಬಂಗೇರ, ವಿಶ್ವನಾಥ ತೋನ್ಸೆ, ಅಶೋಕ್ ಸಸಿಹಿತ್ಲು, ಭಾರತ್ ಬ್ಯಾಂಕ್‌ನ ನಿರ್ದೇಶಕರಾದ ಗಂಗಾಧರ ಜೆ.ಪೂಜಾರಿ, ಪ್ರೇಮನಾಥ ಪಿ.ಕೋಟ್ಯಾನ್ ಹಾಗೂ ಉನ್ನತಾಧಿಕಾರಿ ಡಾ| ಯು. ಧನಂಜಯಕುಮಾರ್, ಮೋಹನ್‌ದಾಸ್ ಹೆಜ್ಮಾಡಿ, ಗೀತಾಂಜಲಿ ಎಲ್.ಸಾಲ್ಯಾನ್, ಗೋಪಾಲ ಪಾಲನ್, ಸಂಜೀವ ಬಂಗೇರ, ಬಿಲ್ಲವರ ಭವನದ ಪ್ರಬಂಧಕ ಭಾಸ್ಕರ್ ಟಿ.ಪೂಜಾರಿ ಸೇರಿದಂತೆ ಸ್ಥಳೀಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here