(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜೂ.೨೨: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಮಾಜಿಕ ಮತ್ತು ಧಾರ್ಮಿಕ ಉಪ ಸಮಿತಿಯು ಇಂದಿಲ್ಲಿ ನಿರಂತರ ೨೪ ತಾಸುಗಳ ಭಜನಾ ಕಾರ್ಯಕ್ರಮವನ್ನು ಸಾಂತಕ್ರೂಜ್ ಪೂರ್ವದ ಅಸೋಸಿಯೇಶನ್ ಭವನದಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಸನ್ನಿಧಿಯಲ್ಲಿ ನಡೆಸಿತು.

ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ ಅವರು ದೀಪ ಪ್ರಜ್ವಲಿಸಿ ಇಂದಿಲ್ಲಿ ಶನಿವಾರ ಮುಂಜಾನೆ ಸುರ್ಯೋದಯದ ೬.೦೪ರ ವೇಳೆಗೆ ಏಕಾಹ ಭಜನೆಗೆ ಚಾಲನೆಯನ್ನಿತ್ತರು. ಈ ಸಂದರ್ಭದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಕೃಷ್ಣ ಪೂಜಾರಿ, ಎಂ.ಎನ್ ಸನಿಲ್, ರೋಹಿದಾಸ್ ಆರ್.ಬಂಗೇರ, ಕೆ.ಎಂ ಸುವರ್ಣ, ಉಮೇಶ್ ಪೂಜಾರಿ, ಶೇಖರ್ ಪೂಜಾರಿ, ನವೀನ್‌ಕುಮಾರ್ ಸುವರ್ಣ ಉಪಸ್ಥಿತರಿದ್ದು, ಎಂದು ಸಾಮಾಜಿಕ ಮತ್ತು ಧಾರ್ಮಿಕ ಉಪ ಸಮಿತಿ ಗೌರವ ಕಾರ್ಯದರ್ಶಿ ರವೀಂದ್ರ ಎ.ಶಾಂತಿ ತನ್ನ ಪೌರೋಹಿತ್ಯದಲ್ಲಿ ಮಹಾಪೂಜೆ ನೆರವೇರಿಸಿ ಪ್ರಸಾದ ವಿತರಿಸಿ ಹರಸಿದರು. ಬಳಿಕ ಅಸೋಸಿಯೇಶನ್‌ನ ಗುರುನಾರಾಯಣ ಭಜನಾ ಮಂಡಳಿ ಕೇಂದ್ರ ಕಾರ್ಯಾಲಯ, ಕೇಂದ್ರ ಕಾರ್ಯಾಲಯದ ಮಹಿಳಾ ವಿಭಾಗ, ೨೩ ಸ್ಥಳೀಯ ಕಚೇರಿಗಳ ಭಜನಾ ಮಂಡಳಿಗಳು ಹಾಗೂ ಮುಂಬಯಿ ಮಹಾ ನಗರದ ಸುಮಾರು ೧೭ ಪ್ರಸಿದ್ದ ಭಜನಾ ಮಂಡಳಿಗಳು ಪಾಲ್ಗೊಂಡು ಭಜನೆಗೈದರು.

ಇಂದಿಲ್ಲಿ ದಿನಪೂರ್ತಿಯಾಗಿ ನೆರವೇರಿದ ಈ ಕಾರ್ಯಕ್ರಮದಲ್ಲಿ ಸುಭಾಶ್ ಮಾಬಿಯಾನ್, ಸಂತೋಷ್ ಕೆ. ಪೂಜಾರಿ ಪೂಜೆ ನೆರವೇರಿಸಿ ತೀರ್ಥ-ಪ್ರಸಾದ ವಿತರಿಸಿದ್ದು, ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ದಯಾನಂದ್ ಆರ್.ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಗೌ| ಜೊತೆ ಕಾರ್ಯದರ್ಶಿಗಳಾದ ಹರೀಶ್ ಜಿ.ಸಾಲ್ಯಾನ್, ಕೇಶವ ಕೆ.ಕೋಟ್ಯಾನ್, ಜೊತೆ ಕೋಶಾಧಿಕಾರಿಗಳಾದ ಶಿವರಾಮ ಎಸ್.ಪೂಜಾರಿ, ಮೋಹನ್ ಡಿ.ಪೂಜಾರಿ, ಸಾಮಾಜಿಕ ಮತ್ತು ಧಾರ್ಮಿಕ ಸಮಿತಿ ಕಾರ್ಯಧ್ಯಕ್ಷ ಮೋಹನ್‌ದಾಸ್ ಜಿ ಪೂಜಾರಿ, ಮಾಜಿ ಮಹಿಳಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಮಾಜಿ ಅಧ್ಯಕ್ಷ ಎಲ್.ವಿ ಅವಿನ್, ಭಾರತ್ ಬ್ಯಾಂಕ್‌ನ ಉಪ ಕಾರ್ಯಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್, ನಿರ್ದೇಶಕರಾದ ಶಾರದಾ ಸೂರು ಕರ್ಕೇರ, ಜ್ಯೋತಿ ಕೆ.ಸುವರ್ಣ, ಎನ್.ಟಿ ಪೂಜಾರಿ, ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್ ಜೆ.ಪೂಜಾರಿ, ಪ್ರೇಮನಾಥ್ ಪಿ. ಕೋಟ್ಯಾನ್, ಮೋಹನ್‌ದಾಸ್ ಎ.ಪೂಜಾರಿ, ಬಿಲ್ಲವರ ಭವನದ ಪ್ರಬಂಧಕ್ಕ ಭಾಸ್ಕರ್ ಟಿ.ಪೂಜಾರಿ ಸೇರಿದಂತೆ ಅಸೋಸಿಯೇಶನ್‌ನ ಇತರ ಪದಾಧಿಕಾರಿಗಳು, ಸ್ಥಳೀಯ ಸಮಿತಿಗಳ ಮುಖ್ಯಸ್ಥರನೇಕರು ಹಾಗೂ ಸದಸ್ಯರ ನೇಕರು ಹಾಜರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here