Friday, October 27, 2023

ಒಂದೇ ಮಳೆಗೆ ಬಿಸಿರೋಡ್ ಜಲಾವೃತ

Must read

ಬಂಟ್ವಾಳ: ಮಳೆ ಬಂತೆಂದರೆ ಬಿ.ಸಿ.ರೋಡಿನ ಅವಸ್ಥೆ ಹೇಳಲಾರದಷ್ಟು ಕೊಳಕು. ಪ್ರಥಮ ಮಳೆಗೆ ಬಿ.ಸಿ.ರೋಡಿನ ಸರ್ವೀಸ್ ರಸ್ತೆ ತುಂಬಾ ನೀರು.
ಬಿ.ಸಿ.ರೋಡಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎದುರು ರಸ್ತೆಯಲ್ಲಿ ನೀರು ಹರಿದು ಹೋಗಲು ದಾರಿ ಇಲ್ಲದೆ ತುಂಬಿರುವ ನೀರು.
ಕಳೆದ ಮಳೆಗಾಲದಲ್ಲಿಯೂ ಈ ಪರಿಸರದಲ್ಲಿ ಇದೇ ಸಮಸ್ಯೆ ಉಂಟಾಗಿತ್ತು.
ಹಾಗಾಗಿ ಮಳೆಗಾಲ ಆರಂಭವಾಗುವ ಮುನ್ನವೇ ಇಲಾಖೆ ಎಚ್ಚೆತ್ತುಕೊಂಡು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕಿತ್ತು.
ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿಯೂ ಇದೇ ಸಮಸ್ಯೆ ಪ್ರಥಮ‌ ಮಳೆಗೆ ಅಂಗಡಿಯೊಳಗೆ ನೀರು ಹೋಗಿದೆ.


ಸರ್ವೀಸ್ ರಸ್ತೆಯ ನೀರು ಹರಿದು ಹೋಗಲು ಸಮರ್ಪಕವಾದ ಚರಂಡಿ ನಿರ್ಮಾಣ ಮಾಡದೆ ಇರುವುದೇ ಇದಕ್ಕೆ ಕಾರಣ.
ಇದರ ಬಗ್ಗೆ ಅನೇಕ ಬಾರಿ ಮಾದ್ಯಮ ಗಳು ಎಚ್ಚರಿಕೆ ಯ ವರದಿ ಮಾಡಿದ್ದರು ಕೂಡಾ ಸಂಬಂಧಿಸಿದ ಇಲಾಖೆ ಮಾತ್ರ ಎಚ್ಚೆತ್ತುಕೊಂಡಿಲ್ಲ.
ಮಳೆಗಾಲ ಆರಂಭವಾಗುವ ಮುನ್ನವೇ ಇದಕ್ಕೆ ಕಾಂಕ್ರೀಟ್ ಅಥವಾ ಚರಂಡಿಯ ಕೆಲಸ ಮಾಡಿದ್ದರೆ ಮತ್ತೆ ಅದೇ ಸಮಸ್ಯೆ ಉದ್ಬವವಾಗುತ್ತಿರಲಿಲ್ಲ.
ಸರ್ವೀಸ್ ಬಸ್ ನಿಲ್ದಾಣ ದಲ್ಲಿ ನೀರು ನಿಂತು ಕೃತಕ ನೆರೆಯಂತಾಗುತ್ತದೆ. ಬಸ್ ನಿಲ್ಲಿಸಲು ಅಥವಾ ಪ್ರಯಾಣಿಕರು ಬಸ್ ಗೆ ಹತ್ತಿ ಇಳಿಯಲು ಸಾಧ್ಯವಾಗದ ಪರಿಸ್ಥಿತಿ.
ಇತ್ತೀಚಿಗೆ ಸಭೆಯೊಂದಕ್ಕೆ ಆಗಮಿಸಿದ ಎ.ಸಿ.ಶಾಸಕರೊಂದಿಗೆ ಈ ಸಮಸ್ಯೆ ಯ ಪ್ರದೇಶಕ್ಕೆ ಭೇಟಿ ನೀಡಿ ಮಳೆ ಗಾಲ ಆರಂಭವಾಗುವ ಮುನ್ನವೇ ಇಲ್ಲಿ ನೀರು ನಿಲ್ಲದಂತೆ ಕಾಂಕ್ರೀಟ್ ಹಾಕಿ ಸಮಸ್ಯೆ ಪರಿಹಾರಕ್ಕೆ ಪುರಸಭಾ ಇಂಜಿನಿಯರ್ ಹಾಗೂ ಅಧಿಕಾರಿಗೆ ಸೂಚನೆ ನೀಡಿದ್ದರು.
ಆದರೆ ಮಳೆಗಾಲ ಆರಂಭವಾದರೂ ಇವರ ಕಾಮಗಾರಿಗೆ ವೇಗ ಸಿಕ್ಕಿಲ್ಲ. ಮತ್ತೆ ಅದೇ ರಾಗ ಅದೇ ಹಾಡು…ಬಿ.ಸಿ.ರೋಡಿನ ಸಮಸ್ಯೆಗೆ ಅಂತ್ಯವಿಲ್ಲ!

More articles

Latest article