ಬಂಟ್ವಾಳ: ವಿದ್ಯುತ್ ಶಾಕ್ ಹೊಡೆದು ಬಂಟ್ವಾಳ ಮೂಲದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಜು. 28 ರಂದು ಗುರುವಾರ ಸಂಜೆ ದೂರದ ಬೊಂಬಾಯಿಯಲ್ಲಿ ನಡೆದಿದೆ.
ಬಂಟ್ವಾಳ ಬಡ್ಡಕಟ್ಟೆ ನಿವಾಸಿ ಪೂವಪ್ಪ ಮೂಲ್ಯ (58) ಅವರು ಮೃತ ದುರ್ದೈವಿ. ಪೂವಪ್ಪ ಅವರು ಬೊಂಬಾಯಿನ ನಾಸಿಕ್ ಎಂಬಲ್ಲಿ ಕಳೆದ ಅನೇಕ ವರ್ಷಗಳಿಂದ ವಾಸವಾಗಿದ್ದಾರೆ. ಇವರು ಪಾನ್ ಸ್ಟಾಲ್ ಅಂಗಡಿಯನ್ನು ಇಟ್ಟು ಜೀವನ ಸಾಗಿಸುತ್ತಿದ್ದರು.
ಗುರುವಾರ ನಾಸಿಕ್ ನಲ್ಲಿ ಬಾರಿ ಮಳೆಯಾಗುತ್ತಿತ್ತು. ಇವರ ಅಂಗಡಿಯೊಳಗೆ ಬಾರಿ ಪ್ರಮಾಣದಲ್ಲಿ ನೀರು ಕೂಡಾ ನುಗ್ಗಿತ್ತು.
ಇವರು ಗುರುವಾರ ಸಂಜೆಯ ವೇಳೆ ಅಂಗಡಿಯನ್ನು ತೆರದು ಒಳಗೆ ನುಗ್ಗಿದ ಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಇವರ ಮೃತದೇಹವನ್ನು ಶುಕ್ರವಾರ ತವರು ಮನೆ ಬಂಟ್ವಾಳ ಬಡ್ಡಕಟ್ಟೆಗೆ ತಂದು ಸಂಸ್ಕಾರ ಮಾಡಲಾಯಿತು. ಇವರು ಪತ್ನಿ ಹಾಗೂ ಎರಡು ಹೆಣ್ಣು ಹಾಗೂ ಒಂದು ಗಂಡು ಮಗನನ್ನು ಅಗಲಿದ್ದಾರೆ.


