Sunday, October 22, 2023

ಕಳ್ಳಿಗೆಯಲ್ಲಿ ರಸ್ತೆ ಅಗೆದು ತೊಂದರೆ: ಶಾಸಕರಿಂದ ಪರಿಶೀಲನೆ

Must read

ಬಂಟ್ವಾಳ: ಕಳ್ಳಿಗೆ ಗ್ರಾಮದ ಹೊಳ್ಳರಬೈಲು ಪ್ರದೇಶದ ತಿಮ್ಮಪ್ಪ ಪೂಜಾರಿ ಎಂಬವರ ಮನೆ ಸಮೀಪ ಸ್ಥಳೀಯ ನಿವಾಸಿಯೋರ್ವರು ಜೆಸಿಬಿ ಬಳಸಿ ರಸ್ತೆಯ ಒಂದು ಪಾರ್ಶ್ವವನ್ನು ಅಗೆದ ಪರಿಣಾಮ ಸ್ಥಳೀಯರಿಗಾದ ತೊಂದರೆಯ ದೂರಿನ ಹಿನ್ನಲೆಯಲ್ಲಿ ಶುಕ್ರವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಸ್ತೆ ಅಗೆದು  ಸಂಪರ್ಕ ರಸ್ತೆ ಕುಸಿಯುವ ಹಂತಕ್ಕೆ ತಲುಪಿದಲ್ಲದೆ ರಸ್ತೆ ಕಾಮಗಾರಿಯ ವೇಳೆ ಅಳವಡಿಸಿರುವ ಮೋರಿಯು ಅಸಮರ್ಪಕವಾಗಿದ್ದು, ಮಳೆ ನೀರು ಸರಾಗವಾಗಿ ಹರಿಯದೆ  ಕೃತಕ ನೆರೆಯಿಂದಾಗಿ ಮನೆಗೆ ನೀರು ನುಗ್ಗುತಿತ್ತು. ಈ ಬಗ್ಗೆ ಸ್ಥಳೀಯರ ನೀಡಿದ ದೂರಿಗೆ ಸ್ಪಂದಿಸಿದ  ಶಾಸಕ ದೂರು  ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಕ್ಷಣ   ಜಿಪಂ ಕಿರಿಯ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ಕೃಷ್ಣ ಅವರನ್ನು ಸ್ಥಳಕ್ಕೆ ಕರೆಸಿ,   ರಸ್ತೆಯನ್ನು ಉಳಿಸುವ ನಿಟ್ಟಿನಲ್ಲಿ ತಡೆಗೋಡೆಯನ್ನು ತುರ್ತಾಗಿ ನಿರ್ಮಿಸುವಂತೆ ಮತ್ತು ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿಕೊಡುವಂತೆ ಇಂಜಿನಿಯರ್ ಗೆ ಸೂಚಿಸಿದರು. ಕಳ್ಳಿಗೆ ಗ್ರಾಮದ ಹಲವು ಸಮಸ್ಯೆಗಳ ಬಗ್ಗೆಯು  ಸ್ಥಳೀಯರು   ಇದೇ ವೇಳೆ   ಶಾಸಕರ ಗಮನಕ್ಕೂ ತಂದರು.   ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ  ದೇವದಾಸ ಶೆಟ್ಟಿ,  ಕಳ್ಳಿಗೆ ಪಂಚಾಯತ್ ಪಿಡಿಓ ಮಾಲಿನಿ, ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್, ಯಶೋಧ ಜಾರಂದಗುಡ್ಡೆ, ರೇವತಿ ಮಾಡಂಗೆ, ಸರಸ್ವತಿ ನೆತ್ರಕೆರೆ, ಸ್ಥಳೀಯ ಮುಖಂಡರಾದ ದಾಮೋದರ್ ನೆತ್ರಕೆರೆ, ಜಗದೀಶ್ ಹೊಳ್ಳರಬೈಲು, ನವೀನ್ ಚಂದ್ರ ಶೆಟ್ಟಿ ಮುಂಡಾಜೆ, ಸುರೇಶ್ ಭಂಡಾರಿ ಅರ್ಬಿ, ಪುರುಷೋತ್ತಮ ಕೊಟ್ಟಾರಿ, ದೇವಿಪ್ರಸಾದ್ ಎಂ., ಚಂದ್ರಹಾಸ ನೆತ್ರಕೆರೆ ಮತ್ತಿತರರು ಉಪಸ್ಥಿತರಿದ್ದರು.

More articles

Latest article