Sunday, October 22, 2023

ಬಂಟ್ವಾಳ ತಾ.ಬಿಲ್ಲವ ಸಂಘದ ಅಧ್ಯಕ್ಷರಾಗಿ ಸೇಸಪ್ಪ ಕೋಟ್ಯಾನ್ ಪುನರಾಯ್ಕೆ

Must read

ಬಂಟ್ವಾಳ: ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ 2019-20 ಮತ್ತು 2020-2021ರ ಸಾಲಿಗೆ ನೂತನ ಅಧ್ಯಕ್ಷರಾಗಿ ಸೇಸಪ್ಪ ಕೋಟ್ಯಾನ್ ಪುನರಾಯ್ಕೆಗೊಂಡಿದ್ದಾರೆ. ಉಳಿದಂತೆ ಬೊಳ್ಳುಕಲ್ಲು ನಾರಾಯಣ ಪೂಜಾರಿ (ಉಪಾಧ್ಯಕ್ಷ), ರಮೇಶ್ ಎಂ .ತುಂಬೆ( ಪ್ರಧಾನ ಕಾರ್ಯದರ್ಶಿ), ಆನಂದ ಸಾಲಿಯಾನ್ ಶಂಭೂರು( ಜತೆಕಾರ್ಯದರ್ಶಿ), ಉಮೇಶ್ ಸುವರ್ಣ (ಕೋಶಾಧಿಕಾರಿ)ಹಾಗೂ ಸತೀಶ್ ಬಿ.ಮಿತ್ತಬೈಲ್ ಲೆಕ್ಕಪರಿಶೋಧಕರಾಗಿ ಸರ್ವಾನುಮತದಿಂದ ಆಯ್ಕೆಗೊಂಡರು. ಹಾಗೆಯೇ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಸಭೆಯಲ್ಲಿ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಯಾಗಿ ನೇಮಕವಾದ ಸಂಘದ ಹಿರಿಯ ಸದಸ್ಯ ಮಹಾಬಲ ಬಂಗೇರ  ನಡೆಸಿದರು. ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗನ್ನು ಅಭಿನಂದಿಸಿ ಮಾತನಾಡಿದರು.

More articles

Latest article