Tuesday, September 26, 2023

ರಾಜಕಾಲವೆ ಒತ್ತುವರಿ : ಶಾಸಕರಿಗೆ ರೈತರ ದೂರು

Must read

ಬಂಟ್ವಾಳ: ರಾ.ಹೆ.ಯ ಪಾಣೆಮಂಗಳೂರಿನಲ್ಲಿರುವ ಮದುವೆ ಅಡಿಟೊರಿಯಮ್ ನ ಮಾಲಿಕ  ರಾಜಕಾಲುವೆಯನ್ನು ಒತ್ತುವರಿ ಮಾಡಿರುವುದರಿಂದ ಸಂಕಷ್ಟಕ್ಕೊಳಗಾದ ಈ ಭಾಗದ  ರೈತರು  ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಬಂಟ್ವಾಳ ಶಾಸಕರ ಮೊರೆ ಹೋಗಿದ್ದಾರೆ. ಸ್ಥಳೀಯ ಪುರಸಭೆ , ತಹಶೀಲ್ದಾರರಿಗೆ ಇದರ ಬಗ್ಗೆ ಈಗಾಗಲೇ ದೂರು ನೀಡಿದರೂ ಇದುವರೆಗೂ ಸೂಕ್ತ ಸ್ಪಂದನೆ ನೀಡಿಲ್ಲ ಎಂದು ರೈತರ ನಿಯೋಗ ಶಾಸಕರ ಮುಂದೆ ಆಳಲನ್ನು ತೋಡಿಕೊಂಡಿತು.ರೈತರ ದೂರಿಗೆ    ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ರೈತ ಸಂಘ, ಹಸಿರು ಸೇನೆಯ ಬಂಟ್ಟಾಳ ತಾಲೂಕು ಅಧ್ಯಕ್ಷ ಸುಬ್ರಮಣ್ಯ ಭಟ್ , ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಮೊದಲಾದವರಿದ್ದರು.

More articles

Latest article