Sunday, October 22, 2023

ಮೊಡಂಕಾಪು ಕಾರ್ಮೆಲ್ ಪ್ರೌಢ ಶಾಲೆ: ಮಂತ್ರಿ ಮಂಡಲ ಉದ್ಘಾಟನೆ

Must read

ಬಂಟ್ವಾಳ:  “ವಿದ್ಯಾರ್ಥಿಗಳಿಗೆ ಶಾಲೆಯ ಮೇಲೆ ಪ್ರೀತಿ ಅಭಿಮಾನ, ಗೌರವವಿರಬೇಕು. ಉತ್ತಮ ಶಿಸ್ತು ಗುಣ ನಡತೆ, ಮನುಷ್ಯನ ಮೌಲ್ಯವನ್ನು ಹೆಚ್ಚಿಸುತ್ತದೆ. ಪಾಠ ಪಠ್ಯೇತರ ಚುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ, ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ವಿದ್ಯಾರ್ಥಿ ಜೀವನ ಸಹಕಾರಿಯಾಗಿದೆ. ನಿಸ್ವಾರ್ಥ ಮನಸ್ಸಿನಿಂದ ಸೇವೆ ಮಾಡಿದಾಗ ಜೀವನ ಆನಂದಮಯವಾಗುತ್ತದೆ” ಎಂದು ಕಾರ್ಮೆಲ್ ಪ್ರೌಢ ಶಾಲೆ, ಮೊಡಂಕಾಪು ಇಲ್ಲಿಯ ಮುಖ್ಯ ಶಿಕ್ಷಕಿ ಭ.ನವೀನ ಎ.ಸಿ ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ನಾಯಕಿ ದಿಶಾ, ಉಪನಾಯಕಿ ಫಾತಿಮತ್ ಕೌಶ ಹಾಗೂ ಇತರ ಮಂತ್ರಿಗಳು ಮುಖ್ಯ ಶಿಕ್ಷಕರ ಸಮ್ಮುಖದಲ್ಲಿ ಪ್ರತಿಜ್ಞಾ ಸ್ವೀಕಾರ ಮಾಡಿದರು. ಶಾಲಾಭಿವೃದ್ಧಿಯಲ್ಲಿ ಮಂತ್ರಿಗಳ ಜವಾಬ್ದಾರಿಯನ್ನು ತಿಳಿಸಲಾಯಿತು. ಹರ್ಷಿತಾ ಸ್ವಾಗತಿಸಿದರು. ಅನನ್ಯ ಧನ್ಯವಾದವಿತ್ತರು. ಶಿಕ್ಷಕರಾದ  ಶರ್ಮಿಳಾ ರೊಜಾರಿಯೊ ಹಾಗೂ  ಗಾಯತ್ರಿ ಮಾರ್ಗದರ್ಶನವಿತ್ತರು. ಕಾರ್ಯಕ್ರಮವನ್ನು ಸಲ್ಮಾಶಾಹಿನಾ ನಿರೂಪಿಸಿದರು.

More articles

Latest article