ಬಂಟ್ವಾಳ: ಸರಕಾರಿ ಕಚೇರಿಗಳ ಲ್ಲಿರುವ ಸೌಲಭ್ಯಗಳನ್ನು ನಿರ್ವಹಣೆ ಮಾಡಲು ಸರಿಯಾದ ವ್ಯವಸ್ಥೆ ಗಳಿಲ್ಲದಾಗ ಆಗುವ ತೊಂದರೆಗಳು ಯಾವರೀತಿ ಇರುತ್ತದೆ ಎಂಬುದಕ್ಕೆ ಸಾಕ್ಷಿ ಇಲ್ಲಿದೆ ನೋಡಿ .
ಬಿ.ಸಿ.ರೋಡಿನ ಮಿನಿ ವಿಧಾನ ಸೌಧದಲ್ಲಿ ಮಹಡಿಗಳಿಗೆ ಹತ್ತಿ ಇಳಿಯಲು ಅನುಕೂಲವಾಗುವಂತೆ ಲಿಪ್ಟ್ ನ ವ್ಯವಸ್ಥೆ ಇದ್ದರೂ ಕೂಡ ಕಳೆದ ಕೆಲ ತಿಂಗಳಿನಿಂದ ಕೆಟ್ಟು ಹೋಗಿದ್ದು, ಉಪಯೋಗಕ್ಕೆ ಬರದೆ , ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ತಾಲೂಕಿನ ಎಲ್ಲಾ ಸರಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ಸಾರ್ವಜನಿಕರಿಗೆ ಸಿಗುವಂತೆ ಮಾಡುವ ಉದ್ದೇಶದಿಂದ ಮಿನಿವಿಧಾನ ಸೌಧದ ಕಚೇರಿಯ ನಿರ್ಮಾಣ ವಾಗಿದೆಯಾದರೂ ಇಲ್ಲಿನ ಅವ್ಯವಸ್ಥೆ ಗಳ ಬಗ್ಗೆ ಮಾತ್ರ ಹೇಳುವ ವರಿಲ್ಲ, ಕೇಳುವವರಿಲ್ಲ ಎಂಬಂತೆ ಕಾಣುತ್ತಿದೆ.

ಕಳೆದ ಕೆಲ ತಿಂಗಳಿನಿಂದ ಈ ಸೌಧದಲ್ಲಿರುವ ಲಿಪ್ಟ್ ಕೆಟ್ಟು ಹೋಗಿದ್ದರು ಇದರ ರಿಪೇರಿ ಮಾಡುವ ಕೆಲಸ ಇನ್ನೂ ಆಗಿಲ್ಲ.
ವಿಕಲಚೇತನರು ಹಾಗೂ ಹಿರಿಯ ವ್ಯಕ್ತಿಗಳು ಲಿಪ್ಟ್ ಕೆಟ್ಟು ಹೋಗಿದ್ದರಿಂದ ಮೂರನೇ ಮಹಡಿವರೆಗೆ ಲಿಪ್ಟ್ ಮೂಲಕ ಹತ್ತಿಕೊಂಡು ಹೋಗುವ ದೃಶ್ಯ ಇಂದು ಕಂಡು ಬಂತು.
ದಿನಂಪ್ರತಿ ಈ ಕಚೇರಿಗೆ ಬರುವ ವಯಸ್ಸಿನ ಜನರಿಗೆ ಹಾಗೂ ವಿಕಲಾಂಗ ವ್ಯಕ್ತಿಗಳಿಗೆ ಸಾಕಷ್ಟು ತೊಂದರೆ ಯಾಗುತ್ತಿದೆ ಎಂದು ಕಳೆದ ತಿಂಗಳು ವರದಿ ಮಾಡಲಾಗಿತ್ತು.
ಆದರೆ ಈ ಸಮಸ್ಯೆಯ ಬಗ್ಗೆ ಗಂಭೀರವಾಗಿ ಪರಿಗಣಿಸದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಮಹಮ್ಮದ್ ನಂದಾವರ ಆರೋಪ ವ್ಯಕ್ತಪಡಿಸಿದ್ದಾರೆ.