ಬಿ.ಸಿ.ರೋಡು : ಕಳೆದ ಮೂರು ವರ್ಷಗಳ ಹಿಂದೆ ಕೇವಲ 43 ಮಕ್ಕಳಿದ್ದ ಶಾಲೆ ಈಗ 150ರ ಗಡಿ ಮುಟ್ಟುವ ಎಲ್ಲಾ ಸಾ‘ತೆಗಳನ್ನು ಬಿಂಬಿಸುತ್ತಾ ಇದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ.ಮೂಡ. ಹಾಗೆಂದು ಇದು ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಯಲ್ಲ. ನಗರ ಪ್ರದೇಶದಲ್ಲಿರುವ ಖಾಸಗಿ ಶಾಲೆಗಳ ದರ್ಬಾರನ್ನು ಲೆಕ್ಕಿಸದೆ ತನ್ನದೇ ಆದ ವೆ‘ಶಿಷ್ಟ್ಯತೆಯಿಂದ ಮಕ್ಕಳನ್ನು ಸೆಳೆಯುತ್ತಿರುವ ಸರಕಾರಿ ಶಾಲೆ ಇದಾಗಿದೆ. ಸುಮಾರು ಎಂಟು ದಶಕಗಳ ಇತಿಹಾಸವನ್ನು ಹೊಂದಿರುವ ಈ ಶಾಲೆಯಲ್ಲಿ ಕಲಿತು ಉನ್ನತ ವಿದ್ಯಾ‘ಸವನ್ನು ಮಾಡಿ ಸಮಾಜದ ನಾನಾ ಸ್ತರಗಳಲ್ಲಿ ಹುದ್ದೆಗಳನ್ನು ಅಲಂಕರಿಸಿರುವವರು ಎಷ್ಟೋ ಮಂದಿ.

ವಿಶಾಲವಾದ ಆಟದ ಮೆ‘ದಾನ, ಪೇಟೆಯ ಸದ್ದುಗದ್ದಲ ಇಲ್ಲದೆ ಪ್ರಶಾಂತ ವಾತಾವರಣದಲ್ಲಿ ಕಲಿಕೆ, ಟೆ‘ಲ್ಸ್ ಅಳವಡಿಸಿದ ಕೊಠಡಿಗಳು, ಶಾಲಾ ಆವರಣದಲ್ಲಿ ಸಿಸಿ ಕ್ಯಮರಾ ಅಳವಡಿಕೆ, ಕನ್ನಡ ಮತ್ತು ಇಂಗ್ಲೀಷ್ ಆಯ್ಕೆಗೆ ಮುಕ್ತ ಅವಕಾಶ ಇದು ಶಾಲೆಯ ಮಕ್ಕಳಿಗೆ ನೀಡಲಾಗುತ್ತಿರುವ ವಿಶೇಷ ಸೌಲ‘ಗಳು. ಬಿ.ಸಿ.ರೋಡು ಪೇಟೆಯಿಂದ ಅನತಿ ದೂರದಲ್ಲಿ ಎತ್ತರ ಹಾಗೂ ಪ್ರಶಾಂತ ವಾತಾವರಣದಲ್ಲ್ಲಿ, ವಿದ್ಯಾ‘ಸಕ್ಕೆ ಪೂರಕವಾಗಿರುವ ಪ್ರದೇಶದಲ್ಲಿ ಈ ಶಾಲೆ ಇದ್ದು ಅನು‘ವಿ ಅ‘ಪಕರು ಹಾಗೂ ಕ್ರಿಯಾಶೀಲ ಗೌರವ ಶಿಕ್ಕರ ತಂಡ ಇಲ್ಲಿದೆ. ಕ್ರೀಡೆ, ನೃತ್ಯ, ಯಕ್ಷಗಾನ, ಯೋಗ, ಹೊರಾಂಗಣ ‘ಟಿ ಹಾಗೂ ಜೀವನಾ‘ರಿತ ಕೌಶಲ್ಯಳಿಗೆ ಹೆಚ್ಚಿನ ಮಹತ್ವ ನೀಡುವ ಶಾಲೆಯಾಗಿದೆ.

ಬಂಟ್ವಾಳ ಪುರಸ‘ ವ್ಯಾಪ್ತಿಯಲ್ಲಿ ಇಂಗ್ಲೀಷ್ ಮಾ‘ಮಕ್ಕೆ ಅನುಮತಿ ಪಡೆದ ಏಕೆ‘ಕ ಶಾಲೆ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು ನಗರ ಪ್ರದೇಶದಲ್ಲಿ ಇಂಗ್ಲೀಷ್ ಮಾ‘ಮಕ್ಕೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಖಾಸಗಿ ಶಾಲೆ ಅವಲಂಬಿಸಬೇಕಾದ ಅನಿವಾರ್ಯತೆ ಇರುವವರಿಗೆ ಈ ಶಾಲೆ ವರದಾನವಾಗಿದೆ. ಕಳೆದ ಮೂರು ವರ್ಷಗಳಿಂದ ಪ್ರಾಥಮಿಕ ಶಾಲಾ ಪೂರ್ವ ಶಿಕ್ಷಣ ಎಲ್‌ಕೆಜಿ, ಯುಕೆಜಿ ಶಿಕ್ಷಣ ಆರಂಭಿಸಿದ್ದು ಇದೀಗ ೧ರಿಂದ ೫ನ ತರಗತಿವರೆಗೆ ಇಂಗ್ಲೀಷ್ ಮಾ‘ಮಕ್ಕೆ ಸರಕಾರ ಅನುಮತಿ ನೀಡಿದೆ. ಈ ಶಾಲಾ ಆವರಣದೊಳಗೇ ಪ್ರೌಢ ಶಾಲೆಯಲ್ಲಿಯೂ ಇಂಗ್ಲೀಷ್ ಮಾ‘ಮ ನಡೆಸಲು ಅನುಮತಿ ದೊರಕಿದ್ದು ಬಡ ಮತ್ತು ಮ‘ಮ ವರ್ಗದವರಿಗೆ ಎಲ್‌ಕೆಜಿಯಿಂದ ಎಸ್‌ಎಸ್‌ಎಲ್‌ಸಿ ವರೆಗೆ ಆಂಗ್ಲ ಮಾ‘ಮದಲ್ಲಿ ಕಲಿಯುವ ಯೋಗ ಬಂದಿದೆ.

ಶಾಲೆಯ ಎಲ್ಲಾ ತರಗತಿ ಕೊಠಡಿಗಳನ್ನು ರೋಟರಿ ಕ್ಲಬ್ ಹಾಗೂ ದಾನಿಗಳ ಸಹಕಾರದಿಂದ ಟೆ‘ಲ್ಸ್ ಅಳವಡಿಸಿ ಗೋಡೆಗೆ ಆಕರ್ಷಕ ಚಿತ್ತಾರಗಳಿಂದ ಪೆ‘ಂಟಿಂಗ್ ಮಾಡಿ ನವೀಕರಿಸಲಾಗಿದೆ. ಶಾಲಾ ಆವರಣದಲ್ಲಿ ಸಿಸಿ ಕ್ಯಾಮರೆರಾಗಳನ್ನು ಅಳವಡಿಸಲಾಗಿದ್ದು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. ಬಿಸಿನೀರು, ಬಿಸಿಯೂಟ, ಗಾಳಿ, ಬೆಳಕು, ಶೌಚಾಲಯ ಹಾಗೂ ಇನ್ನಿತರ ಮೂಲ‘ತ ಸೌಲ‘ಗಳನ್ನು ಅಭಿವೃದ್ಧಿ ಪಡಿಸಿದ್ದು ಸುಸಜ್ಜಿತವಾದ ಆಟದ ಮೆ‘ದಾನವನ್ನು ಹೊಂದಿದ್ದು ಸರ್ವ ಋತುಗಳಲ್ಲಿಯೂ ಉಪಯೋಗಿಸುವಂತೆ ಸುಂದರಗೊಳಿಸಲಾಗಿದೆ. ಸರಕಾರದಿಂದ ಉಚಿತವಾಗಿ ಸಿಗುವ ಬಿಸಿಯೂಟ, ಉಪಹಾರ, ಹಾಲು, ಸಮವಸ್ತ್ರ, ಶೂ, ಸಾಕ್ಸ್, ಪಠ್ಯ ಪುಸ್ತಕ ಹಾಗೂ ವಿದ್ಯಾಭಿಮಾನಿಗಳ ಸಹಕಾರದಿಂದ ಸಿಗುವ ಬರೆಯುವ ಪುಸ್ತಕಗಳು, ಬೆಲ್ಟ್, ಗುರುತಿನ ಚೀಟಿ ಇತ್ಯಾದಿಗಳನ್ನು ಒದಗಿಸಲಾಗುತ್ತಿದ್ದು ಎಲ್ಲವೂ ಉಚಿತವಾಗಿದ್ದು ಬಡವರ ಪಾಲಿಗೆ ಇದೊಂದು ವಿದ್ಯಾದೇಗುಲವಾಗಿದೆ.

*****************
ಮೂರು ವರ್ಷಗಳ ಹಿಂದೆ ಖಾಸಗಿ ಆಂಗ್ಲ ಮಾ‘ಮ ಶಾಲೆಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಮುಚ್ಚಬೇಕಿದ್ದ ಬಿ.ಮೂಡ ಶಾಲೆ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಮತ್ತೆ ಮರುಜೀವ ಬಂದಿದೆ. ಎಲ್‌ಕೆಜಿಯಿಂದಲೇ ಆಂಗ್ಲ ಮಾ‘ಮ ಶಿಕ್ಷಣ ಈಗ ನೀಡುತ್ತಿದ್ದೇವೆ. ಪುರಸ‘ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಯಲ್ಲಿ ಆಂಗ್ಲ ಮಾ‘ಮ ಶಿಕ್ಷಣಕ್ಕೆ ಮಾನ್ಯತೆ ಪಡೆದ ಏಕೆ‘ಕ ಶಾಲೆ ಬಿ.ಮೂಡ ಶಾಲೆಯಾಗಿದೆ. ಮಕ್ಕಳಿಗೆ ಆಟವಾಡಲು ಶಾಲಾ ಮೆ‘ದಾನ ಸಹಿತ ಎಲ್ಲಾ ಸೌಲ‘ಗಳು ನಮ್ಮ ಶಾಲೆಯಲ್ಲಿದೆ. ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ನೀಡುತ್ತಿದ್ದೇವೆ. ಈ ಕಾರಣದಿಂದ ವಿದ್ಯಾರ್ಥಿಗಳ ಸಂಖ್ಯೆ ಈಗ ಏರಿಕೆಯಾಗುತ್ತಾ ಇದೆ. ಜೂನ್ ೩ರಂದು ವಿಶೇಷ ಅತಿಥಿಗಳೊಂದಿಗೆ ಶಾಲಾ ಆರಂ‘ತ್ಸವವನ್ನು ಮಾಡಲಾಗುವುದು.
– ಶ್ರೀ‘ರ ಅಮೀನ್, ಅ‘ಕ್ಷರು ಶಾಲಾಭಿವೃದ್ಧಿ ಸಮಿತಿ, ಬಿ.ಮೂಡ

*********

ನಾವು ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳ ಬಗ್ಗೆಯೂ ಶಿಕ್ಷಣ ಕಲಿಸುತ್ತಿದ್ದೇವೆ. ಕ್ರೀಡೆ, ನೃತ್ಯ, ಯಕ್ಷಗಾನ, ಯೋಗ, ಹೊರಾಂಗಣ ‘ಟಿ ಹಾಗೂ ಜೀವನಾ‘ರಿತ ಕೌಶಲ್ಯಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದೇವೆ. ಸುಸಜ್ಜಿತವಾದ ಶಾಲಾ ಮೆ‘ದಾನ ಇದೆ. ಆಂಗ್ಲ ಶಿಕ್ಷಣದ ಜೊತೆಗ ಕನ್ನಡ ಮಾದ್ಯಮ ಶಿಕ್ಷಣವನ್ನೂ ನೀಡುತ್ತಿದ್ದೇವೆ.
– ಕುಶಲ, ಮುಖ್ಯೋಪಾ‘ಯಿನಿ, ಮುಖ್ಯೋಪಾ‘ಯರು, ಬಿ.ಮೂಡ ಪ್ರಾಥಮಿಕ ಶಾಲೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here