ಬಂಟ್ವಾಳ: ದ.ಕ.ಜಿ.ಪ.ಹಿ ಪ್ರಾಥಮಿಕ ಶಾಲೆ ಬಡಗಕಜೆಕಾರ್ ಇದರ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಪ್ರವೀಣ್ ಪೂಜಾರಿ ಮಾಡ ಆಯ್ಕೆಯಾಗಿದ್ದಾರೆ ಶಾಲೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಸರ್ವಾನುಮತದಿಂದ ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಒಬಯ ಮಾಡ, ರಾಕೇಶ್ ಪಾದೆ, ಪ್ರಧಾನ ಕಾರ್ಯದರ್ಶಿಯಾಗಿ ತಾರಾನಾಥ್ ಪೆರಂಪಾಡಿ ಗುತ್ತು, ಕಾರ್ಯದರ್ಶಿಯಾಗಿ ರಕ್ಷಿತ್ ಕರಂಬಡ್ಕ, ಕೋಶಾಧಿಕಾರಿಯಾಗಿ ಮಂಜುನಾಥ್ ಮಾಡ, ಸಂಘಟನಾ ಕಾರ್ಯದರ್ಶಿಗಳಾಗಿ, ವಸಂತ ಪೂಜಾರಿ ಪಿತ್ತಿಲು, ಸಂದೇಶ್ ಮಾಡ, ಕೃಷ್ಣಪ್ಪ ಮಾಡ, ಹೇಮಂತ್ ಗಂಡಿಬಾಗಿಲು, ಗೌರವ ಸಲಹೆಗಾರರಾಗಿ 1.ಶಾಲಾ ಮುಖ್ಯೋಪಾದ್ಯಾಯರು, 2.ಪದ್ಮನಾಭ ನಾಯಕ್ ಗುಂಡಿದಡ್ಡ, 3.ಮಾಧವ ದೇವಾಡಿಗ ಕಿಜನಾರು, 4.ಸತೀಶ್ ಕಜೆಕಾರು, 5.ದೀರಾಜ್ , ನಿಡ್ವಾಲ್, 6.ಕೃಷ್ಣಪ್ಪ ಪೂಜಾರಿ, ಪಾರೊಟ್ಟು, ಇವರನ್ನ ಬಡಗಕಜೆಕಾರ್ ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಗೌಡ, ಶಾಲಾಭಿವೃದ್ಧಿ ಅಧ್ಯಕ್ಷರಾದ ಹರಿಕೀರ್ತಿ ಪೂಜಾರಿ ಗುಂಡಿಮನ್ಯ, ಇವರ ಗೌರವ ಸಮ್ಮುಖದಲ್ಲಿ ಆಯ್ಕೆಯಾಗಿರುತ್ತಾರೆ ಮುಂದಿನ ಪದಗ್ರಹಣ ಕಾರ್ಯಕ್ರಮದಲ್ಲಿ ಸದಸ್ಯತ್ವ ಅಭಿಯಾನ ನಡೆಯಲಿದೆ ಎಂದು ಆಡಳಿತ ಮಂಡಳಿ ನಿರ್ಣಯಿಸಿದೆ.


