ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ಯವಕ ಯುವತಿಯ ಪ್ರೇಮ ಸಲ್ಲಾಪದ ವಿಡಿಯೋ ವೈರಲ್ ಆರೋಪಿ ನಗರ ಠಾಣಾ ಪೋಲೀಸರ ವಶಕ್ಕೆ.

ವ್ಯಕ್ತಿ ಯೋರ್ವ ಯುವತಿ ಜೊತೆಯಲ್ಲಿ ನಗ್ನವಾಗಿ ಪ್ರೇಮಸಲ್ಲಾಪವಾಡುವ ವೀಡಿಯೋ ವೊಂದು ವ್ಯಾಟ್ಸ್ ಅಪ್ ಮೂಲಕ ಹರಿದಾಡುತ್ತಿದ್ದು , ಈ ಬಗ್ಗೆ ಸ್ಥಳೀಯ ಸಂಘಟನೆಯ ದೂರಿನಂತೆ ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಅವರು ಆರೋಪಿಯನ್ನು ದೂರು ನೀಡಿದ ಕೆಲವೇ ಕ್ಷಣದಲ್ಲಿ ವಶಕ್ಕೆ ಪಡೆದು ಕೊಂಡಿದ್ದು ವಿಚಾರಣೆ ನಡೆಯುತ್ತಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಲೊರೆಟ್ಟು ಟಿಪ್ಪು ನಗರ ನಿವಾಸಿ ಮೋನು ಯಾನೆ ಅಬ್ದುಲ್ ರಹಿಮಾನ್ (55)ಅವರನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈತ ಮೀನು ವ್ಯಾಪಾರಿ ಯಾಗಿದ್ದು ಎರಡು ಮದುವೆಯಾಗಿ 9 ಮಂದಿ ಮಕ್ಕಳಿದ್ದಾರೆ.
ಈತ ಯುವತಿಯೊಂದಿಗೆ ನಗ್ನವಾಗಿ ಪ್ರೇಮಸಲ್ಲಾಪವಾಡುವ ವೀಡಿಯೋ ಚಿತ್ರೀಕರಣ ನಡೆಸಿ ಅಬಳಿಕ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ ಎಂಬ ಆರೋಪ ಸಂಘಟನೆಯವರದ್ದು.
ಸಂಘಟನೆಯ ಪ್ರಮುಖರ ದೂರಿನಂತೆ ನಗರ ಠಾಣಾ ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಎಲ್ಲಿನಡೆದಿದೆ ಎಂಬುದು ತನಿಖೆಯ ಬಳಿಕವಷ್ಟೇ ಗೊತ್ತಾಗಬೇಕಾಗಿದೆ.