Wednesday, October 18, 2023

ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘದ ವಾರ್ಷಿಕ ಮಹಾಸಭೆ

Must read

ಬಂಟ್ವಾಳ: ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿಯಮಿತ ಜೋಡುಮಾರ್ಗ ಇದರ ವಾರ್ಷಿಕ ಮಹಾಸಭೆ ಬಿಸಿರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಸಂಘ ದ ಅಧ್ಯಕ್ಷ ರವೀಂದ್ರ ಕಂಬಳಿ ಅವರ ಅಧ್ಯಕ್ಷ ತೆಯಲ್ಲಿ ನಡೆಯಿತು.
ಸಂಘ ಈ ವರ್ಷ 16,18.625 ಲಕ್ಷ ಲಾಭಾಂಶ ಹೊಂದಿದ್ದು, 7.97 ಲಕ್ಷ ಪಾಲು ಬಂಡವಾಳ ಹೊಂದಿದೆ, 10 ಕೋಟಿ ನಿರಖು ಠೇವಣಿ ಹೊಂದಿದೆ.
ಡಿ.ಸಿ.ಸಿ.ಬ್ಯಾಂಕ್ ನಲ್ಲಿ 663 ಲಕ್ಷ  ಠೇವಣಿ ಹೂಡಿದ್ದು, 389 ಲಕ್ಷ ಹೊರಸಾಲ ಕೊಟ್ಟಿರುತ್ತದೆ, ಲೆಕ್ಕ ಪರಿಶೋಧನ ವರದಿಯಲ್ಲಿ  ” ಎ” ವರ್ಗವನ್ನು ಹೊಂದಿದೆ.

ಈ ಸಂಘದ ಮೂಲಕ ಪ್ರತಿ ವರ್ಷ ಸಾಮಾಜಿಕ ಚಟುವಟಿಕೆ ಗಳಿಗೆ ಹೆಚ್ಚು ಒತ್ತು ನೀಡುತ್ತಿದೆ, ಪ್ರತಿ ವರ್ಷ ವಿದ್ಯಾರ್ಥಿಗಳಿಗೆ 1 ಲಕ್ಷ  ವಿದ್ಯಾರ್ಥಿ ವೇತನ ಆರೋಗ್ಯ ಶಿಬಿರ ಹೀಗೆ ಅನೇಕ ಸಾರ್ವಜನಿಕರಿಗೆ ಉಪಯೋಗವಾಗುವ ಕಾರ್ಯಕ್ರಮ ಗಳನ್ನು ಆಯೋಜಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಸಂಘವು ಸ್ವಂತ 3.47 ಎಕ್ರೆ ಜಮೀನು ಹೊಂದಿದ್ದು , 7 ಗೋದಾಮುಗಳು ಈ ಜಾಗದಲ್ಲಿ ಹೊಂದಿದೆ. 3 ಬ್ರಾಂಚಗಳನ್ನು ಹೊಂದಿದ್ದು ರೈತರ ಅನುಕೂಲಕ್ಕದ ದೃಷ್ಟಿಯಿಂದ  ಸಾಮಾಗ್ರಿಗಳನ್ನು
ಮಾರಾಟ ಮಾಡುವ ವ್ಯವಸ್ಥೆ ಮಾಡಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾದ ಹರ್ಷಿಣಿ, ನಿರ್ದೇಶಕ ರುಗಳಾದ ಬಿ.ಟಿ.ನಾರಾಯಣ ಭಟ್, ಸೀತಾರಾಮ ಶೆಟ್ಟಿ, ಜ್ಞಾನೇಶ್ವರ ಪ್ರಭು, ಪಿ.ಸುಬ್ರಹ್ಮಣ್ಯ ರಾವ್, ರತ್ನ, ಶಶಿಕಲಾ ಉಡುಪ, ರಾಮನಾಯ್ಕ, ಪದ್ಮನಾಭ ಕಿದಬೆಟ್ಟು, ಸುಂದರ ಭಂಡಾರಿ, ಪಿ.ವೆಂಕಟೇಶ ನಾವುಡ, ಪ್ರಭಾಕರ ಶೆಟ್ಟಿ ಅವರು ಉಪಸ್ಥಿತರಿದ್ದರು.
ಸಂಘದ ಅದ್ಯಕ್ಷ ರವೀಂದ್ರ ಕಂಬಳಿ ಸ್ವಾಗತಿಸಿ, ನಿರ್ದೇಶಕ ಬಿ.ಟಿ.ನಾರಾಯಣ ಭಟ್ ವಂದಿಸಿದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಯು. ಧರ್ಮಪಾಲ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು

More articles

Latest article