ಮುಂಬಯಿ (ಮಂಗಳೂರು): ಮಂಗಳೂರು ಅಲ್ಲಿನ ಸಂತ ಅಂತೋನಿ ಆಶ್ರಮ ಜೆಪ್ಪು ಇದರ ಪಾಲಕ ಸಂತ ಅಂತೋನಿ ಅವರ ವಾರ್ಷಿಕ ಮಹೋತ್ಸವ ಕಳೆದ ಗುರುವಾರ ಸಂಜೆ ಸಂಪನ್ನಗೊಂಡಿದ್ದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಅ| ವಂ| ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ ವಾರ್ಷಿಕ ಮಹೋತ್ಸವದ ಪ್ರಧಾನ ಬಲಿಪೂಜೆ ಮಿಲಾಗ್ರಿಸ್ ದೇವಾಲಯದಲ್ಲಿ ಅರ್ಪಿಸಿದರು.

ಸಂತ ಅಂತೋನಿ ತಮ್ಮ ಜೀವನದಲ್ಲಿ ಯೇಸುಕ್ರಿಸ್ತರನ್ನು ಆದರ್ಶವಾಗಿಟ್ಟು ಕೊಂಡು ಅವರಂತೆ ಪರರಿಗಾಗಿ ಜೀವಿಸಲು ಪ್ರಯತ್ನ ಪಟ್ಟ ಮಹಾ ಪುರುಷ. ದೇವರು ತಮಗೆ ನೀಡಿದ ಪವಾಡ ಮಾಡುವ ಶಕ್ತಿಯಿಂದ ಜನರ ಕಷ್ಟಗಳಿಗೆ ಸ್ಪಂದಿಸಿ ಅವರಿಗೆ ಬೇಕಾದ ವರಗಳನ್ನು ನೀಡಿದ ಪುಣ್ಯ ಪುರುಷ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದೆಂದರೆ ದೇವೆರಿಗೇ ಸಹಾಯ ಮಾಡುವುದೆಂದು ತಿಳಿದ ಜಾಣ ವ್ಯಕ್ತಿ. ಕಥೋಲಿಕ ಧರ್ಮಸಭೆ ಅವರ ಆ ತ್ಯಾಗದ ಜೀವನಕ್ಕಾಗಿ ಅವರಿಗೆ ಸಂತ ಪದವಿ ನೀಡಿದೆ. ಆಂತೋನಿ ಅವರು ನಿಧನರಾಗಿ ಎಂಟು ಶತಮಾನ ಕಳೆದರೂ ತಮ್ಮ ಭಕ್ತರಿಗಾಗಿ ಇಂದಿಗೂ ದೇವರಲ್ಲಿ ಪ್ರಾಥಿಸಿ ಸಂಕಷ್ಟದಲ್ಲಿ ಇದ್ದವರಿಗೆ ಸಾಂತ್ವಾನ ನೀಡುತ್ತಾರೆ. ಸಂತ ಅಂತೋನಿಯವರಂತೆ ಯೇಸು ಸ್ವಾಮಿಯನ್ನು ಹಿಂಬಾಲಿಸಲು ಪ್ರಯತ್ನ ಪಡೋಣ. ಅದುವೇ ಸಂತ ಅಂತೋನಿಯವರ ಗೌರಾವಾರ್ಥ ನಾವು ಆಚರಿಸುವ ಹಬ್ಬವಾಗಿದೆ ಎಂದ ಬಿಷಪ್ ಪೀಟರ್ ಪಾವ್ಲ್ ತಿಳಿಸಿ ನೆರೆದ ಸದ್ಭಕ್ತರನ್ನು ಹರಸಿದರು.

ಕಳೆದ ಏಳು ವರ್ಷಗಳಲ್ಲಿ ಸಂತ ಅಂತೋನಿಯವರ ಭಕ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಲಹಿ ಸಹಕರಿಸಿದ್ದು, ಶೀಘ್ರವೇ ಬಂಟ್ವಾಳ ಯೇಸು ಇಗರ್ಜಿಗೆ ವರ್ಗವಾಗಿ ಪ್ರಧಾನ ಗುರುಗಳಾಗಿ ಹೋಗುತ್ತಿರುವ ಮಿಲಾಗ್ರಿಸ್ ದೇವಾಲಯದ ಧರ್ಮಗುರು ರೆ| ಫಾ| ವಲೇರಿಯನ್ ಡಿಸೋಜ ಅವರನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಿ ಶುಭ ಕೋರಲಾಯಿತು. ಫಾ| ವಲೇರಿಯನ್ ಡಿಸೋಜರವರು ಪ್ರವಚನ ನೀಡಿದರು.

ಹಬ್ಬದ ಶುಭಾವಸರದಲ್ಲಿ ದಿನ ಬೆಳಗ್ಗೆ ಕಾಟಿಪಳ್ಳ ದೇವಾಲಯದ ಧರ್ಮಗುರು ರೆ| ಫಾ| ವಲೇರಿಯನ್ ಲುವಿಸ್, ಸಂತ ಜೋಸೆಫರ ಗುರುಮಠ ಜೆಪ್ಪು ಇದರ ಆತ್ಮಿಕ ನಿರ್ದೇಶಕರಾದ ರೆ| ಫಾ| ಫ್ರಾನ್ಸಿಸ್ ಡಿಸೋಜ ಮತ್ತು ಸಾಯಾಂಕಾಲ ಮಂಜೇಶ್ವರ ಡೊನ್ ಬೊಸ್ಕೊ ಶಾಲಾ ಪ್ರಾಂಶುಪಾಲ ರೆ| ಫಾ| ಆಗಸ್ಟಿನ್ ತೆಕ್ಕೆಪೂಕೆಂಬಿಲ್ ಅವರು ಅಭಿವಂದನಾ ಪೂಜೆ ಅರ್ಪಿಸಿದರು.

ಆಶ್ರಮದ ನಿರ್ದೇಶಕರಾದ ರೆ| ಫಾ| ಒನಿಲ್ ಡಿಸೋಜ ಅವರು ಉಪಕಾರ ಸ್ಮರಣೆ ಮಾಡಿದರು. ಸಹಾಯಕ ನಿರ್ದೇಶಕರಾದ ಫಾ| ತೃಶಾನ್, ಫಾ| ರೋಶನ್ ಮತ್ತು ನಗರದ ಆಸುಪಾಸಿನ ಧರ್ಮಗುರುಗಳು, ಧರ್ಮಭಗಿನಿಯರು ಮತ್ತು ಸಹಸ್ರಾರು ಭಕ್ತಾಧಿಗಳು ಹಬ್ಬದ ಸಂಭ್ರದಲ್ಲಿ ಪಾಲ್ಗೊಂಡರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here