ವಿಟ್ಲ: ಅಲ್-ಬಿರ್ರ್ ಇಸ್ಲಾಮಿಕ್ ಫ್ರೀ ಸ್ಕೂಲ್ ಪರ್ತಿಪ್ಪಾಡಿ ಇದರ ಕಚೇರಿಯ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು.
ಕಚೇರಿಯನ್ನು ಎನ್ ಅಬ್ದುಲ್ ಕುಂಞ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಬಿ ಸಿ ರೋಡ್ ಅವರು ಉದ್ಘಾಟಿಸಿದರು.
ಅಲ್ ಖೈರ್ ಮಹಿಳಾ ಶರೀಯತ್ ಕಾಲೇಜಿನ ಹಾಗೂ ಜುಮಾ ಮಸೀದಿ ವಿಟ್ಲ ಇದರ ಆಡಳಿತ ಸಮಿತಿ ಅಧ್ಯಕ್ಷ ಇಬ್ರಾಹಿಂ ಏರ್ ಸೌಂಡ್, ಜುಮಾ ಮಸೀದಿ ಪರ್ತಿಪ್ಪಾಡಿ ಅಧ್ಯಕ್ಷ ಇಸ್ಮಾಯೀಲ್, ಹಕೀಂ ಪರ್ತಿಪ್ಪಾಡಿ, ಹಕೀಂ ಅರ್ಶದಿ, ಇಬ್ರಾಹಿಂ ಪಾಣೆಮಂಗಳೂರು, ಮುಸ್ತಫಾ ಖಲೀಲ್ ವಿಟ್ಲ, ವ್ಯವಸ್ಥಾಪಕ ಹಾರೀಸ್ ಕೊಡಂಗಾಯಿ, ಖಲಂದರ್ ಪರ್ತಿಪ್ಪಾಡಿ, ನೌಶಿನ್ ಬದ್ರಿಯಾ, ಮಹಮ್ಮದ್ ರಫೀಕ್ ಪರ್ತಿಪ್ಪಾಡಿ ಮೊದಲಾದವರು ಭಾಗವಹಿಸಿದ್ದರು.


