ಬಂಟ್ವಾಳ : ಖಾಸಗಿ ಆಸ್ಪತ್ರೆಯ ನರ್ಸ್, ವಿವಾಹಿತೆಯೊರ್ವರು ಪತಿಯ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಪೆರುವ ಎಂಬಲ್ಲಿ ಶುಕ್ರವಾರ ನಡೆದಿದೆ.
ಇಲ್ಲಿನ ಪೆರುವ ಸಮೀಪದ ಕೊಳಕೆ ನಿವಾಸಿ ಮಹಾಬಲ ಎಂಬವರ ಪತ್ನಿ ಮಂಜುಳಾ (38) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಮಂಜುಳಾ ಅವರು ಬಿ.ಸಿ.ರೋಡಿನ ಖಾಸಗಿ ನರ್ಸಿಂಗ್ ಹೋಂನಲ್ಲಿ ನರ್ಸ್ ಆಗಿ ದುಡಿಯುತ್ತಿದ್ದರು ಎಂದು ತಿಳಿದುಬಂದಿದೆ. ಶುಕ್ರವಾರ ಸಂಜೆ ತನ್ನ ಪತಿಯ ಮನೆಯಲ್ಲಿ ಆತ್ಮಹತ್ಯೆ ಎಸಗಿದ್ದಾಗಿ ಶಂಕಿಸಲಾಗಿದೆ.
ಮಂಜುಳಾ ಅವರು ಮೂಲತಃ ತೊಕ್ಕೊಟ್ಟು ನಿವಾಸಿಯಾಗಿದ್ದು, ಇಲ್ಲಿನ ಮಹಾಬಲ ಅವರ ಜೊತೆ ಮದುವೆಯಾಗಿ ಒಂಭತ್ತು ವರ್ಷಗಳಾಗಿದ್ದು, ಈ ದಂಪತಿಗೆ ಮಕ್ಕಳಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರು ಪತಿಯನ್ನು ಅಗಲಿದ್ದಾರೆ.
ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಈ ಕುರಿತು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.


