ಬಂಟ್ವಾಳ : ಮಕ್ಕಳಿಗೆ ಸೂಕ್ತವಾದ ವೇದಿಕೆಗಳು ಸಿಕ್ಕಾಗ ಅವರಲ್ಲಿ ಅಡಗಿದ ಪ್ರತಿಬೆಗಳು ಅನಾವರಣಗೊಳ್ಳುತ್ತದೆ, ಅಂತಹ ಅವಕಾಶಗಳನ್ನು ನಾವು ಮಾಡಿಕೊಡಬೇಕಾಗಿದೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಹೇಳಿದರು.

ಅವರು ರಾಜ್ಯ ಬಾಲಭವನ ಸೊಸೈಟಿ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧೊ ಇಲಾಖೆ ಹಾಗೂ ಶಿಶುಅಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಬಿ.ಸಿ.ರೋಡ್ ಸ್ತ್ರೀಶಕ್ತಿ ಭವನದಲ್ಲಿ ಮೇ 8ರಿಂದ18 ರವರೆಗೆ ನಡೆದ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರಕಾರ ವಿವಿಧ ರೀತಿಯ ಯೋಜನೆಗಳನ್ನು ಮಕ್ಕಳ ಶೈಕ್ಷಣಿಕ ಹಾಗೂ ಬೌದ್ಧಿಕ ಬೆಳವಣಿಗೆ ದೃಷ್ಟಿಯಿಂದ ಹಮ್ಮಿಕೊಂಡಿದೆ. ಅದರಲ್ಲಿ ಸಿ.ಡಿ.ಪಿ.ಒ.ಇಲಾಖೆಯ ಮೂಲಕ ಹಮ್ಮಿಕೊಂಡಿರುವ ಬೇಸಿಗೆ ಶಿಬಿರವೂ ಒಂದು ಎಂದು ಅವರು ಹೇಳಿದರು.

ತಾ.ಪಂನ ಸಹಾಯಕ ನಿರ್ದೇಶಕ ಪ್ರಶಾಂತ್, ಕಛೇರಿ ವ್ಯವಸ್ಥಾಪಕಿ ಶಾಂಭವಿ, ಕೃಷಿ ಇಲಾಖೆಯ ಆತ್ಮಯೋಜನೆಯ  ಪ್ರಿಯಾಂಕ, ಸಂಪನ್ಮೂಲ ವ್ಯಕ್ತಿಗಳಾದ ಮೌನೇಶ್ ವಿಶ್ವಕರ್ಮ,  ಮುರಳಿಕೃಷ್ಣ ರಾವ್, ಹಿರಿಯ ಮೇಲ್ವಿಚಾರಕಿ ಬಿ.ಭಾರತಿ ವೇದಿಕೆಯಲ್ಲಿ  ಉಪಸ್ಥಿತರಿದ್ದರು. ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಮೇಲ್ವಿಚಾರಕಿಯರಾದ ಸರೋಜಾಭಟ್ , ಸಿಂಧೂ ಮತ್ತಿತರರು ಸಹಕರಿಸಿದರು. ಶಿಬಿರಾರ್ಥಿ ಸಂಜನಾ ಸ್ವಾಗತಿಸಿದರು, ಶೇಷರಾಜ್ ವಂದಿಸಿದರು. ಕು.ಸಂಜನಾ ಭಟ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here