ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಹಿಲ್ಸ್ (ರಿ). ಇದರ ಲೊರಟ್ಟೋ ಗ್ರೀನ್ ಸಿಟಿ ಎಂಬಲ್ಲಿ ನಿರ್ಮಾಣ ವಾದ ನೂತನ ಕಟ್ಟಡದ ಉದ್ಘಾಟನೆ ಮಂಗಳವಾರ ಸಂಜೆ ಜಿಲ್ಲಾ ಗವರ್ನರ್ ಅಧಿಕೃತ ಬೇಟಿ ಸಂದರ್ಭದಲ್ಲಿ ನಡೆಯಿತು.



ಮೇಜರ್ ಜಿಲ್ಲಾ ಗವರ್ನರ್ ರೋ.ರೋಹಿನಾಥ್ ಪಾದೆ ನೂತನ ಕಟ್ಟಡವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ
ಅವರು
ಇಚ್ಚಾಶಕ್ತಿಯಿದ್ದರೆ ಮಹತ್ಕಾರ್ಯಗಳು ನಡೆಯುತ್ತದೆ ಎನ್ನುವುದಕ್ಕೆ ರೋಟರಿ ಹಿಲ್ಸ್ ನಿರ್ಮಿಸಿದ ಈ ಕಟ್ಟಡವೇ ಸಾಕ್ಷಿ ಎಂದು ಅವರು ಹೇಳಿದರು.
ರೋಟರಿ ಮೂಲಕ ಬಹಳಷ್ಟು ಬದಲಾವಣೆಗಳನ್ನು , ಅನುಭವಗಳನ್ನು ಕಂಡಿದ್ದೇವೆ.
ರೋಟರಿ ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ಮುಟ್ಟಿದಾಗ ರೋಟರಿಯ ಭಾವನೆ ಇಮ್ಮಡಿಯಾಗುತ್ತದೆ ಎಂದು ಅವರು ಹೇಳಿದರು.
ಕೊಡುಗು ಸಂತ್ರಸ್ತರಿಗೆ 50 ಮನೆಗಳ ನಿರ್ಮಾಣ ದ ಗುರಿ ಇಟ್ಟುಕೊಂಡಿದೆ ಎಂದರು.
ರೋಟರಿ ಕಾರ್ಯಕರ್ತರಾಗಿ ಪರಿವರ್ತನೆಯಾಗಲು ರೋಟರಿಯ ಹಿರಿಯರು ಸರಿಯಾದ ಮಾಹಿತಿ ನೀಡಬೇಕಾಗಿದೆ ಎಂದು ಅವತು ಹೇಳಿದರು. ರೋಟರಿಯ ಲ್ಲಿ ವ್ಯಕ್ತಿ ಗೆ ಪ್ರಾಮುಖ್ಯತೆ ಇಲ್ಲ, ಸಂಸ್ಥೆಯ ಹುದ್ದೆಗೆ ಮರ್ಯಾದೆ ಇರುವುದು ಎಂಬುದನ್ನು ನೆನಪಿಸಿದರು. ಸಮಾಜದಲ್ಲಿನ ಕೆಲವೊಂದು ಬದಲಾವಣೆ ಗೆ ರೋಟರಿ ಮಹತ್ತರವಾದ ಪಾತ್ರ ವಹಿಸಿದೆ. ನಾಯಕತ್ವದ ಗುಣವನ್ನು ಮೈಗೂಡಿಸಿಕೊಂಡು ಸಹಿಷ್ಣುತೆ, ಕ್ಷಮಾಪಣೆ, ಸಹಕಾರ ಮನೋಭಾವನೆ ಬೆಳೆಸಿಕೊಂಡು ಮುಂದುವರಿಯಲು ಇವರು ತಿಳಿಸಿದರು.
ಮೂಲಕ ಜಿಲ್ಲೆಯಲ್ಲಿ 253 ಅಂಗನವಾಡಿಗಳನ್ನು ನಿರ್ಮಿಸಿ ದಾಗ ಅ ಊರಿನ ಜನರು ಭೇದಭಾವ ಮರೆತು ಪ್ರತಿಯೊಬ್ಬರು ಪಾಲ್ಗೊಂಡಿದ್ದಾರೆ ಎಂಬ ಸಂತೋಷ ಇದೆ ಎಂದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆರ್ಶೀವಚನ ನೀಡಿದ
ಧರ್ಮ ಗುರು ಇಲ್ಯಾಸ್ ಡಿ.ಸೋಜ.
ರೋಟರಿ ಸಂಸ್ಥೆ ನನ್ನ ನೆಚ್ಚಿನ ಸಂಸ್ಥೆ.
ಕ್ಲಬ್ ನಿಂದ ಸಮಾಜ ಸೇವೆ , ಮಾನವೀಯ ಮೌಲ್ಯ, ಶಿಕ್ಷಣದ ಜೊತೆ ಜನಸೇವೆಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡಲಿ ಎಂದು ಅವರು ಹಾರೈಸಿದರು.
ಹೊಸತನಗಳ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಅವರು ಶುಭ ಹಾರೈಸಿದರು.
ವೇದಿಕೆಯಲ್ಲಿ ರೋ.
ಪ್ರಕಾಶ್ ಕಾರಂತ,
ಕಟ್ಟಡ ಸಮಿತಿ ಅಧ್ಯಕ್ಷ
ಆ್ಯಂಟನಿ ಸ್ವಿಕ್ವೇರ, ಕೋಶಾಧಿಕಾರಿ ಶೃತಿ ಮಾಡ್ತ ಉಪಸ್ಥಿತರಿದ್ದರು.
ಆಧ್ಯಕ್ಷ
ರೋ! ಅವಿಲ್ ಮಿನೇಜಸ್ ಸ್ವಾಗತಿಸಿದರು.
ಕ್ಲಬ್ ಕಾರ್ಯದರ್ಶಿ
ರಾಮಚಂದ್ರ ಶೆಟ್ಟಿಗಾರ್
ಶೆಟ್ಟಿಗಾರ್ ವರದಿ ವಾಚಿಸಿದರು.
ನಿಯೋಜಿತ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಜಿಲ್ಲಾ ಗವರ್ನರ್
ಪರಿಚಯ ಪತ್ರವಾಚಿಸಿದರು.
ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸಹಾಯ ನೀಡಿದ ಮಹನೀಯರ ನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಸುಮಾರು 32 ಲಕ್ಷ ವೆಚ್ಚದಲ್ಲಿ ಭವ್ಯವಾದ ಕಟ್ಟಡ
ಉದಯವಾದ
ಕೇವಲ ಒಂದುವರೆ ವರ್ಷದಲ್ಲಿ ನಿರ್ಮಾಣ ವಾಗಿರುವುದು ಜಿಲ್ಲಾ ಕ್ಲಬ್ ನಿಂದ ಶ್ಲಾಘನೆ ಗೆ ಪಾತ್ರವಾಗಿದೆ.