ಬಂಟ್ವಾಳ: ಕಲ್ಲಡ್ಕ ರೈತರ ಸೇವಾ ಸಂಘ ನಿಯಮಿತದ ಆಡಳಿತ ಮಂಡಳಿಗೆ ಮೇ.26ರಂದು ನಡೆಯುವ ಚುನಾವಣಾ ಕಣದಿಂದ ತಾನು ಹಿಂದಕ್ಕೆ ಸರಿದಿರುವುದಾಗಿ ಸಂಘದ ಹಾಲಿ ನಿರ್ದೇಶಕ ಜಯರಾಮ ರೈ ಬೋಳಂತೂರು ತಿಳಿಸಿದ್ದಾರೆ. ಶುಕ್ರವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಕಣದಲ್ಲಿರುವ ತಾನು ಈ ಬಾರಿಯು ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು,ಸಹಕಾರ ಭಾರತಿಹಾಗೂ ಸಂಘ ಪರಿವಾರದ ಹಿರಿಯರ ಅಪೇಕ್ಷೆಯಂತೆ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿರುವುದಾಗಿ ತಿಳಿಸಿದ್ದಾರೆ. ನಾಮಪತ್ರ ವಾಪಾಸು ಪಡೆಯುವ ಪ್ರಕ್ರಿಯೆ ಈಗಾಗಲೇ ಅಂತಿಮಗೊಂಡಿದ್ದು, ಬ್ಯಾಲೆಟ್ ಪತ್ರದಲ್ಲಿ ನನ್ನ ಹೆಸರು ದಾಖಲಾಗಿದ್ದು,ನಾನು ಕಣದಿಂದ ಹಿಂದೆ ಸರಿದಿರುವುದರಿಂದ ಮತದಾರರು ಗೊಂದಲಕ್ಕೊಳಗಾಗದೆ ಸಹಕಾರ ಭಾರತಿಯ ಬೆಂಬಲದೊಂದಿಗೆ ಸ್ಪರ್ಧಿಸುತ್ತಿರುವ ಉಮೇದ್ವಾರರಿಗೆ ತಮ್ಮ ಮತ ಚಲಾಯಿಸಿ ಬೆಂಬಲಿಸುವಂತೆ ಜಯರಾಮ ರೈ ಕೋರಿದ್ದಾರೆ.
