Sunday, October 22, 2023

ಪೆರಾಜೆ ಕುಲಾಲ ಗ್ರಾಮ ಸಮಿತಿ ಅಧ್ಯಕ್ಷರಾಗಿ ಪುರುಷೋತ್ತಮ್ ಹಾಗೂ ಕಾರ್ಯದರ್ಶಿಯಾಗಿ ನಿತೇಶ್ ಮುಳಿತ್ತಪಡ್ಪು ಅವಿರೋಧ ಆಯ್ಕೆ

Must read

ಬಂಟ್ವಾಳ: ಪೆರಾಜೆ ಕುಲಾಲ ಗ್ರಾಮ ಸಮಿತಿಯ ನೂತನ ಆಧ್ಯಕ್ಷರಾಗಿ ಪುರುಷೋತ್ತಮ ಸಾದಿಕುಕ್ಕು ಹಾಗೂ ಕಾರ್ಯದರ್ಶಿ ಯಾಗಿ ನಿತೇಶ್ ಮುಳಿತ್ತಪಡ್ಪು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಮಾಣಿ ಕುಲಾಲ ಸಂಘದ ಅಧ್ಯಕ್ಷ ಬೋಜಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನೂತನ ಕಮಿಟಿ ರಚನೆಯಾಯಿತು. ಗೌರವಾಧ್ಯಕ್ಷರಾಗಿ ಬಾಲಕೃಷ್ಣ ಮಿತ್ತಪೆರಾಜೆ, ಉಪಾಧ್ಯಕ್ಷ ರಾಗಿ ಚೇತನ್ ಬೊಲ್ಲುಕಲ್ಲು, ಸುಂದರ ಮಿತ್ತಪೆರಾಜೆ, ಜನಾರ್ಧನ ಏಣಾಜೆ, ಜತೆಕಾರ್ಯದರ್ಶಿಯಾಗಿ ಸಂದೀಪ್ ಮಿತ್ತಪೆರಾಜೆ, ಕೋಶಾಧಿಕಾರಿ ಯಾಗಿ ದಿನೇಶ್ ಪಾಣೂರು, ಚಂದ್ರಹಾಸ ಸಾದಿಕುಕ್ಕು, ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ಮಿತ್ತಪೆರಾಜೆ, ಚಂದ್ರಹಾಸ ಕೊಮ್ಮಕೋಡಿ, ಸಂದೇಶ್ ಬರೆ, ಚಂದ್ರಶೇಖರ್ ಕೊಮ್ಮಕೋಡಿ, ಮನೋಜ್ ಮಿತ್ತಪೆರಾಜೆ, ಕ್ರೀಡಾ ಕಾರ್ಯದರ್ಶಿ ದೀಪಕ್ ಕೊಮ್ಮಕೋಡಿ, ಪುರುಷ ಸಾಗು, ಪ್ರದೀಪ್, ಗೌರವ ಸಲಹೆಗಾರರಾಗಿ ಮಾದವ ಪಾಳ್ಯ, ಉಮೇಶ್ ಸಾದಿಕುಕ್ಕು, ಲಿಂಗಪ್ಪ ಮೈಂದಗುರಿ, ಪ್ರಚಾರ ಸಮಿತಿ ಯ ಕಾರ್ಯದರ್ಶಿ ಜನಾರ್ಧನ ಮಿತ್ತಕೋಡಿ , ಆಶೋಕ್, ನಯನ್ ಮಿತ್ತಪೆರಾಜೆ, ಸಂದೀಪ್ ಬೊಳ್ಳುಕಲ್ಲು ಇವರನ್ನು ಆಯ್ಕೆಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾಣಿ ಕುಲಾಲ ಸಂಘದ ಕಾರ್ಯದರ್ಶಿ ಪದ್ಮನಾಭ ಅವರು ಉಪಸ್ಥಿತರಿದ್ದರು.

More articles

Latest article