ಬಂಟ್ವಾಳ: ಜಿಲ್ಲೆಯ ಬಹುತೇಕ ಎಲ್ಲಾ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಇತಿ ಮಿತಿಯಿಲ್ಲಿ ನೀರು ಬಳಕೆ ಮಾಡುವಂತೆ ಜಿಲ್ಲಾಡಳಿತ ಆದೇಶ ಮಾಡಿದೆ.


ಸುಡುವ ಬಿಸಿಲಿಗೆ ನೀರು ಆವಿಯಾಗುತ್ತಿದ್ದು ತುಂಬೆ ವೆಂಟೆಡ್ ಡ್ಯಾಂ ನಲ್ಲಿ ದಿನಂಪ್ರತಿ ಸೆ.ಮೀ.ಲೆಕ್ಕಾಚಾರ ದಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ.
ಹಾಗಾಗಿ ಮಂಗಳೂರು ಮಹಾಜನತೆಗೆ ರೇಶನಿಂಗ್ ಮಾದರಿಯಲ್ಲಿ ನೀರು ನೀಡುಲು ಮಂಗಳೂರು ಮಹಾನಗರ ಪಾಲಿಕೆ ಸಿದ್ದವಾಗಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಅನೇಕ ಕಡೆಗಳಲ್ಲಿ ನೀರಿನ‌ ಅಭಾವ ಉಂಟಾಗಿದ್ದು ನೀರು ನೀಡಲು ಪುರಸಭೆ ಶಕ್ತವಾಗಿಲ್ಲ ಎಂದು ಸಾರ್ವಜನಿಕ ರ ಆರೋಪವಾಗಿದೆ.
ಒಂದು ಹನಿ ಕುಡಿಯುವ ನೀರಿಗೂ ಹಾಹಾಕಾರ ಪಡುವ ಈ ಮೇ ತಿಂಗಳಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ನೀರು ನಿರಂತರವಾಗಿ 24 ಗಂಟೆಗಳ ಕಾಲ ಪೋಲಾಗುತ್ತಿರುವುದು ಸಾರ್ವಜನಿಕರ ಆಕ್ರೋಶ ಕ್ಕೆ ಗುರಿಯಾಗಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೂಗಳೆತೆಯ ದೂರದಲ್ಲಿ ಬಂಟ್ವಾಳ ಪೇಟೆಯಲ್ಲಿ ಅನೇಕ ತಿಂಗಳಿನಿಂದ ರಸ್ತೆಯಲ್ಲಿ ಪೈಪ್ ಹೊಡೆದು ಹೋಗಿ ನಿರಂತರವಾಗಿ 24 ಗಂಟೆಯೂ ನೀರು ಹೋಗುತ್ತಿದೆ . ಈ ರಸ್ತೆಯಲ್ಲಿ ದಿನಕ್ಕೆ ನಾಲ್ಕಾರು ಬಾರಿ ಪುರಸಭಾ ಇಂಜಿನಿಯರ್ ಸಹಿತ ಅಧಿಕಾರಿಗಳು ಅತ್ತಿಂದಿತ್ತ ಹೋದರೂ ಇದರ ಬಗ್ಗೆ ಗಮನ ಹರಿಸಿಲ್ಲ ಎಂಬುದು ಸ್ಥಳೀಯ ಆಂಗಡಿ ಮಾಲಕರ ದೂರು.
ಇದಲ್ಲದೆ ಬಂಟ್ವಾಳ ಬೈಪಾಸ್, ಬಂಟ್ವಾಳ ದ ಜಕ್ರಿಬೆಟ್ಟು ಹೀಗೆ ಅನೇಕ ಕಡೆಗಳಲ್ಲಿ ಪುರಸಭೆಯ ಕುಡಿಯುವ ನೀರಿನ ಪೈಪ್ ಹೊಡೆದು ಹೋಗಿ ನಿರಂತರವಾಗಿ ಕಳೆದ ಕೆಲವು ತಿಂಗಳಿನಿಂದ ನೀರು ಪೋಲಾಗುತ್ತಿದೆ.
ಈಬಗ್ಗೆ ಸ್ಥಳೀಯ ರು ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಇವರ ದೂರು.
ಕುಡಿಯುವ ನೀರು ಇಲ್ಲದೆ ಸಾಕಷ್ಟು ತೊಂದರೆ ಅನುಭವಿಸುವ ಇಂತಹ ಸಂದಿಗ್ಧತೆಯ ಪರಿಸ್ಥಿತಿಯಲ್ಲಿ ಹೊಡೆದು ಹೋಗಿರುವ ಪೈಪ್ ಗಳ ಜೋಡಣೆ ಕೆಲಸ ಯಾಕೆ ಪುರಸಭೆ ಮಾಡುತ್ತಿಲ್ಲ ಎಂದು ಸಾರ್ವಜನಿಕ ರ ಪ್ರಶ್ನೆ ಯಾಗಿದೆ.
ಪೈಪ್ ಹೊಡೆದು ಹೋದ ಪರಿಣಾಮದಿಂದಾಗಿ
ಅನೇಕ ಕಡೆಗಳಲ್ಲಿ ಎತ್ತರ ಪ್ರದೇಶ ಗಳ ಮನೆಗೆ ನೀರಿನ ಪ್ರೆಶರ್ ಕಡಿಮೆಯಾಗಿ ಹೋಗುವುದಿಲ್ಲ ಎಂದು ಮನೆಯವರು ದೂರಿದ್ದಾರೆ.
ನೀರಿನ ಬಳಕೆ ಇತಿಮಿತಿಯಲ್ಲಿ ಮಾಡಿ , ಅತಿಯಾದ ದುರ್ಬಳಕೆ ಮಾಡಬೇಡಿ ಹೀಗೆ ನೀರಿನ ಬಗ್ಗೆ ಪಾಠ ಮಾಡುವ ಇಲಾಖೆಯ ಅಧಿಕಾರಿಗಳಿಗೆ ಕಳೆದ ಕೆಲವು ತಿಂಗಳಿನಿಂದ 24 ಗಂಟೆಯೂ ನೀರು ಹರಿದು ರಸ್ತೆಯಲ್ಲಿ ಚೆಲ್ಲಿ ಹೋಗುವುದು ಕಾಣಲಿಲ್ಲ ವೇ ಎಂದು ಇಲ್ಲಿನ ಜನರು ಪ್ರಶ್ನಿಸಿದ್ದಾರೆ.‌
ಪಂಪ್ ಹೌಸ್ ನಲ್ಲೂ ನೀರು ಪೋಲಾಗಿ ಚರಂಡಿ ಸೇರಿ ಯಾವುದೇ ಪ್ರಯೋಜನ ವಿಲ್ಲದೆ ಚೆಲ್ಲಿ ಹೋಗುತ್ತಿದೆ.
ಜಕ್ರಿಬೆಟ್ಟು ವಿನಲ್ಲಿ ರುವ ಕುಡಿಯುವ ನೀರಿನ ಪಂಪ್ ಹೌಸ್ ನಲ್ಲಿ ಟ್ಯಾಂಕ್ ನಿಂದ ನಿರಂತರವಾಗಿ 24 ಗಂಟೆ ನೀರು ಹೊರಗೆ ಹೋಗುತ್ತಿದೆ.
ಶುದ್ದಿಕರಣಗೊಂಡ ನೀರು ಟ್ಯಾಂಕ್ ನಿಂದ ಹೆಚ್ಚುವರಿ ಯಾಗಿ ಹೊರಕ್ಕೆ ಹೊಗುವಂತದ್ದು.‌ ಈ ನೀರನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ ದಿನದ 24 ಗಂಟೆಯೂ ಚೆಲ್ಲಿ ಹೋಗುವ ನೀರನ್ನು ನೂತನ ತಂತ್ರಜ್ಞಾನ ಬಳಸಿ ಕುಡಿಯಲು ಬಳಕೆ ಮಾಡಬಹುಬಹುದಿತ್ತು.
ಇಲ್ಲಿನ ಪುರಸಭಾ ಅಧಿಕಾರಿಗಳಿಗೆ ಜನರ ಹಿತ ಮುಖ್ಯವಲ್ಲ ಎಂಬುದಕ್ಕೆ ಇದೇ ಸಾಕ್ಷಿ ಯಾಗಿದೆ.‌

ಇದು ಪೈಪ್ ಹೊಡೆದು ಹೋಗಿ ನೀರು ಪೋಲಾದರೆ ಇನ್ನು ಪುರಸಭೆಯ ನೀರನ್ನು ಕೃಷಿ ಗೆ ಬಳಸುವರು ಕೂಡಾ ಇದ್ದಾರೆ ಎಂದು ದೂರಲಾಗುತ್ತಿದೆ.

ಅಂತೂ ನೀರಿನ ಅಭಾವದಿಂದ ಕಂಗೆಟ್ಟಿರುವ ಎಷ್ಟೋ ಮನೆಗಳಿಗೆ ಪುರಸಭೆಯ ಪೈಪ್ ಲೈನ್ ಮೂಲಕ ಅನಾವಶ್ಯಕ ವಾಗಿ ಚೆಲ್ಲಿ ಹೋಗುವ ನೀರನ್ನು ನೀಡಬಹುದು ಎಂಬುದು ಕೆಲವರ ವಾದ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here