ವಿಟ್ಲ: ಇಡ್ಕಿದು ಮಿತ್ತೂರು ಫ್ರೆಂಡ್ಸ್ ಕ್ಲಬ್‌ನ ಅಡಿಯಲ್ಲಿ ಬಾಲಕರ ನೂತನ ಸ್ವ ಸಹಾಯ ಸಂಘ ಯುವಶಕ್ತಿ ಫ್ರೆಂಡ್ಸ್ ನವೋದಯ ಸ್ವ ಸಹಾಯ ಸಂಘದ ಉದ್ಘಾಟನೆ ನಡೆಯಿತು.
ಇಡ್ಕಿದು ಮತ್ತು ಕುಳ ಗ್ರಾಮಗಳ ನವೋದಯ ಪ್ರೇರಕಿ ವನಿತಾರವರು ಗುಂಪಿನ ಪುಸ್ತಕವನ್ನು ನೂತನ ಅಧ್ಯಕ್ಷ ರಂಜಿತ್ ಮತ್ತು ಕಾರ್‍ಯದರ್ಶಿ ಹೃತಿಕ್ ಇವರಿಗೆ ನೀಡುವುದರೊಂದಿಗೆ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಾಲಕರ ಗುಂಪಿನ ಸದಸ್ಯರು ಮತ್ತು ಫ್ರೆಂಡ್ಸ್ ನವೋದಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.
