ಬಂಟ್ವಾಳ: ಸೈಡ್ ಕೊಡುವ ದ್ವಿಚಕ್ರ ವಾಹನ ಕ್ಕೆ ಡಿಕ್ಕಿಯಾಗಿದೆ ಎಂಬ ಕಾರಣಕ್ಕೆ ಪುಡಿಪುಡಿಯಾದ ಕಾರು , ಎರಡು ತಂಡಗಳ ಮಧ್ಯೆ ಗಲಾಟೆ ಒರ್ವನಿಗೆ ಗಾಯ.
ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಸೈಡ್ ಕೊಡುವ ಬರದಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ.
ದ್ವಿಚಕ್ರವಾಹನ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ದ್ವಿಚಕ್ರವಾಹನದ ಹಿಂಬದಿಯಲ್ಲಿ ಬರುತ್ತಿದ್ದ ಕಾರಿನಲ್ಲಿದ್ದ ಯುವಕರ ಮಂಗಳೂರು ಮೂಲದ ತಂಡ ಅಪಘಾತ ವೆಸಗಿದ ಕಾರನ್ನುರಾಡ್ ಹಾಗೂ ಇನ್ನಿತರ ವಸ್ತುಗಳನ್ನು ಬಳಸಿ ಪುಡಿಪುಡಿ ಮಾಡಿದೆ.
ಕಾರನ್ನು ಪುಡಿ ಮಾಡುವ ಸಂದರ್ಭದಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಸ್ಥಳೀಯ ಯುವಕರ ಹಾಗೂ ಮಂಗಳೂರು ಮೂಲದ ಯುವಕರ ಮಧ್ಯೆ ಗಲಾಟೆ ಗಳು ನಡೆದು ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗುತ್ತಿದೆ.
ಈ ಸಂದರ್ಭದಲ್ಲಿ ಒರ್ವನಿಗೆ ಗಾಯಗೊಂಡು ಪುತ್ತೂರು ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ.
ಕಾರು ಪುಡಿ ಮಾಡಿದ ಯುವಕರು ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ.
ಸ್ಥಳ ಕ್ಕೆ ವಿಟ್ಲ ಪೋಲೀಸರು ಬೇಟಿ ನೀಡಿದ್ದಾರೆ.


