ಬುದ್ಧಿಯೇ ಇರಬಾರದು
ಈ ಮಾನವನಿಗೆ
ಪ್ರಾಣಿಗೂ ಇವನಿಗೂ
ವ್ಯತ್ಯಾಸವೇ ಇರಬಾರದಿತ್ತು..!

ಆಗ ಬಟ್ಟೆಯ ಗೊಡವೆಯೇ ಇರುತ್ತಿರಲಿಲ್ಲ
ಬಟ್ಟೆಯಲ್ಲೇ ಶ್ರೀಮಂತಿಕೆಯ ಅಳೆಯುತ್ತಿರಲಿಲ್ಲ
ನಾಳೆಯ ರುಚಿಯೇ ಮುಖ್ಯವಾಗುತ್ತಿರಲಿಲ್ಲ
ನೂರಾರು ಪ್ಲೇವರ್ ಗಳು ಹುಟ್ಟುತ್ತಲೇ ಇರಲಿಲ್ಲ
ಇರಲೊಂದು ಸುಂದರ ಮನೆಬೇಕೆಂಬ
ಆಸೆ ಬೆಳೆಯುತ್ತಿರಲಿಲ್ಲ
ಆಸೆ ಪೂರೈಕೆಗೆ ಪ್ರಕೃತಿಯ ನಾಶವಾಗುತ್ತಿರಲಿಲ್ಲ
ನಿದ್ದೆಗೊಂದು ತಲೆದಿಂಬಿನ ಬೇಡಿಕೆ ಇಡುತ್ತಿರಲಿಲ್ಲ
ನನಸಾಗಿಸುವ ಪ್ರಯತ್ನದ ಕನಸುಗಳು ಹುಟ್ಟುತ್ತಿರಲಿಲ್ಲ..!

ಸಾವಿರಾರು ದೇವರು
ಊರಿಗೊಂದು ಹೆಸರು
ಜಾತಿ ಗೀತಿ
ಬಡವ ಬಲ್ಲಿದ
ವಿದ್ಯಾವಂತ ಅವಿದ್ಯಾವಂತ
ಯಾವುದು ಕಾಣಸಿಗುತ್ತಿರಲಿಲ್ಲ..!

ತಿಂದು ಮಲಗೋದು ಜೀವನ
ಸಸ್ಯಹಾರಿಯಾದರೆ ಆಯ್ದು ತಿನ್ನೊದು
ಮಾಂಸಹಾರಿಯಾದರೆ ಬೇಟೆಯಾಡೋದು
ಸ್ವಾರ್ಥ ಗಳಿಲ್ಲ
ಮುಗಿಲೆತ್ತರದ ಆಸೆಗಳಿಲ್ಲ
ಸತ್ತಾಗಲು ತಿಥಿ ಬೇಕಾಗಿಲ್ಲ
ಸತ್ತ ಹೆಣವು ಹದ್ದಿಗೋ ನರಿಗೋ
ಹೊಟ್ಟೆ ತುಂಬಿಸುತ್ತಿತ್ತು
ಅಂತೂ ಬೂದಿಯಾಗಿ ಹೋಗುತ್ತಿರಲಿಲ್ಲ..!

ಅವನಂತೆ ನಾನಾಗಬೇಕು
ಊರಿಗೆ ಅರಸನಾಗಬೇಕು
ಚಂದ್ರನ ಮೇಲೆ ಲಗ್ಗೆ ಇಡಬೇಕು
ಭೂಮಿಯನ್ನು ಅಳೆಯಬೇಕು
ಸಮುದ್ರವನ್ನ ಈಜಬೇಕು
ಈ ಯಾವ ಮಹದಾಸೆಗಳು ಇರುತ್ತಿರಲ್ಲ…

ಪ್ರಕೃತಿಯಲ್ಲಿ
ಸುಖದ ಬೆನ್ನಟ್ಟುವ
ದುಃಖಿ ಜೀವಿ ನಾನಾಗುತ್ತಿರಲ್ಲಿಲ್ಲ…!

 

✍ಯತೀಶ್ ಕಾಮಾಜೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here