ಬಂಟ್ವಾಳ: ಕಾಡುಕೋಣವೊಂದು ಕಾಡಿನಿಂದ ನಾಡಿಗೆ ಬಂದು ಹಾಡುಹಗಲಲ್ಲೆ  ದಾಳಿ ನಡೆಸಿ  ಬಾಲಕಿ ಹಾಗೂ ಮಹಿಳೆಗೆ ತಿವಿದು ಗಾಯಗೊಳಿಸಿ ಆಸ್ಪತ್ರೆಗೆ ದಾಖಲಾದ ಘಟನೆ ಕಾಡಬೆಟ್ಟು ಕಂದಾಡಿ ಎಂಬಲ್ಲಿ ನಡೆದಿದೆ.

ಗಾಯಗೊಂಡ ಬಾಲಕಿ ಕಂದಾಡಿ ನಿವಾಸಿ ರಾಮ ನಾಯ್ಕ ಹಾಗೂ ಲಲಿತಾ ದಂಪತಿಗಳ ಪುತ್ರಿ ಹರ್ಷಾ (12) ಬಾಲಕಿಯ ಚಿಕ್ಕಮ್ಮ ಅಂಗನವಾಡಿ ಶಿಕ್ಷಕಿ ಕುಮಾರಿ ಚಂದ್ರಾವತಿ ಎಂದು ಹೇಳಲಾಗಿದೆ.
ಬಂಟ್ವಾಳ ಮಹಾಲಿಂಗೇಶ್ಬರ ದೇವಲಾಯಕ್ಕೆ ತೆರಳಿ ಪೂಜೆ ಸಲ್ಲಿಸಿ‌ ವಾಪಾಸು ಮನೆಯ ಕಡೆಗೆ ತೆರಳುವ ವೇಳೆ ಕಾಡಬೆಟ್ಟು ವಿನ ಕಂದಾಡಿ ಎಂಬಲ್ಲಿ ರಸ್ತೆಗೆ ಬಂದ ಕಾಡುಕೋಣ ಬಾಲಕಿ ಮತ್ತು ಮಹಿಳೆಯ ಮೇಲೆ ಎರಗಿ ಗಾಯಗೊಳಿಸಿದೆ.
ಕಾಡುಕೋಣನ ರೌದ್ರಾವತಾರಕ್ಕೆ ಬಾಲಕಿಯ ಕೈ ಮುರಿದಿದೆ, ಮಹಿಳೆಯ ಮೈಮೇಲೆ ಎದೆ ಹಾಗೂ ಇನ್ನಿತರ ಭಾಗದಲ್ಲಿ ಗಾಯಗಳಾಗಿದೆ.
ಗಾಯಗೊಂಡ ಇಬ್ಬರನ್ಬು ಬಂಟ್ವಾಳ ಸರಕಾರಿ ಆಸ್ಪತ್ರೆ ಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಪಡೆಯಲಾಯಿತು.
ಬಳಿಕ ಇವರ ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಯಿತು. ‌

ಘಟನೆಯ ವಿವರ
ಗೊಬ್ಬರ ಗುಂಡಿಗೆ ಬಿದ್ದು ಮೇಲೆ ಬರಲು ಸಾಧ್ಯವಾಗದೆ ಗುಂಡಿಯೊಳಗೆ ಸುತ್ತಾಡುತ್ತಿದ್ದ ಕಾಡುಕೋಣವೊಂದನ್ನು ಬಂಟ್ವಾಳ ಅರಣ್ಯ ಇಲಾಖೆ ಹಾಗೂ ಊರವರ ಸಹಕಾರದಿಂದ ಮೇಲಕ್ಕೆ ತ್ತಿ
ಸುರಕ್ಷಿತವಾಗಿ ಕಾಡಿಗೆ ವಾಪಾಸು ಕಳುಹಿಸಿದ ಕೆಲ ಘಂಟೆಗಳ ಬಳಿಕ ಕಾಡಿನಿಂದ ವಾಪಾಸು ಬಂದ ಕಾಡುಕೋಣ ಬಾಲಕಿ ಹಾಗೂ ಮಹಿಳೆಗೆ ಗುದ್ದಿ ಗಾಯಗೊಳಿಸಿದೆ.

ಕಾಡುಕೋಣವೊಂದು ಗೊಬ್ಬರ ಗ್ಯಾಸ್ ನ ಗುಂಡಿಯೊಳಗೆ ಬಿದ್ದ ಘಟನೆ ಕಾಡಬೆಟ್ಟು ಗ್ರಾಮದ ಕಾಡಬೆಟ್ಟು ಪೂರ್ಲೊಟ್ಟು ಎಂಬಲ್ಲಿ ಶನಿವಾರ ಮುಂಜಾನೆ ನಡೆದಿತ್ತು.

ಪೊರ್ಲೊಟ್ಟು ನಿವಾಸಿ ಎಲ್ಪ್ರೆಡ್ ಡಿಸೋಜ ಎಂಬವರ ಮನೆಯ ಹಳೆಯ ಗೊಬ್ಬರ ಗ್ಯಾಸ್ ನ ಗುಂಡಿಗೆ ಮುಂಜಾನೆ ಸುಮಾರು ಮೂರು ಗಂಟೆಯ ವೇಳೆ ಕಾಡು ಕೋಣ ಬಿದ್ದಿರಬೇಕು ಎಂದು ಮನೆಯ ಮಾಲಕ ಹೇಳಿದ್ದಾರೆ. ‌

ಗೊಬ್ಬರ ಗ್ಯಾಸ್ ನ ಗುಂಡಿಯೊಳಗೆ ಬಿದ್ದಿರುವ ಕಾಡು ಕೋಣಕ್ಕೆ ಮತ್ತೆ ಮೇಲೆ ಬರಲು ಸಾಧ್ಯವಾಗದೆ
ಸಿಕ್ಕಿಹಾಕಿಗೊಂಡಿತ್ತು.

ಬೆಳಿಗ್ಗೆ ವೇಳೆ ಮನೆಯವರು ಗೊಬ್ಬರ ಗ್ಯಾಸ್ ಗೆ ಗೊಬ್ಬರ ಹಾಕಲು ಬಂದ ವೇಳೆ ಈ ಘಟನೆ ಬೆಳಕಿಗೆ ಬಂದ ಬಳಿಕ ಅವರು ಬಂಟ್ವಾಳ ಅರಣ್ಯ ಇಲಾಖೆ ಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಬಳಿಕ ಬಂಟ್ವಾಳ ಉಪವಲಯ ಸಂರಕ್ಷಣಾ ಧಿಕಾರಿ ಸುರೇಶ್ ಸ್ಥಳ ಕ್ಕೆ ಬೇಟಿ ನೀಡಿ ಕಾಡು ಕೋಣವನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡಲಾಗುತ್ತಿದೆ.
ಸಾಕಷ್ಟು ಹೆದರಿಕೆಯಿಂದ ಜನರನ್ನು ನೋಡಿದಾಗ ದುರುಗಟ್ಟಿ ನಿಲ್ಲುವ ಕಾಡುಕೋಣವನ್ನು ಜೆಸಿಬಿ ಮೂಲಕ ಮೇಲಕ್ಕೆ ಎತ್ತಲಾಯಿತು.
ನಿರಂತರವಾಗಿ ಮೂರ ಗಂಟೆಗಳ ಕಾಲ ಜೆಸಿಬಿ ಮೂಲಕ ಕಾರ್ಯಚರಣೆ ನಡೆಸಿ ದ ಬಳಿಕ ಕಾಡುಕೋಣ ಗುಂಡಿಯಿಂದ ಮೇಲಕ್ಕೆ ತಾನೆ ಹಾರಿ ಹೋಡಿಹೋಯಿತು.

ಗುಂಡಿಯ ಸುತ್ತಲೂ ಮಣ್ಣು ತೆಗೆದ ಬಳಿಕ ಜಾಗರೂಕತೆಯಿಂದ ಕಾಡು ಕೋಣವನ್ನು ಮೇಲೆ ತರುವ ಪ್ರಯತ್ನ ವನ್ನು ಉಪವಲಯ ಅರಣ್ಯ ಅಧಿಕಾರಿ ಸುರೇಶ್ ತಿಳಿಸಿದ್ದಾರೆ.
ಕಾಡು ಕೋಣವನ್ನು ನೋಡಲು ಊರಿನ ಜನ ತಂಡತಂಡೋಪವಾಗಿ ಬರುತ್ತಾ ಇದ್ದರು, ಸ್ಥಳದಲ್ಲಿ ಸೇರಿದ್ದ ಜನರನ್ನು ನೋಡಿ ಕಾಡು ಕೋಣ ನಿಯಂತ್ರಣ ಕಳೆದುಕೊಂಡ ರೀತಿಯಲ್ಲಿ ವರ್ತಿಸುತ್ತಿತ್ತು.
ಗುಂಡಿಗೆ ಬಿದ್ದ ಕಾಡುಕೋಣದ ಬೆನ್ನು ಮೇಲೆ ಚೂರು ಗಾಯವಾಗಿತ್ತು.
ಬೆನ್ನ ಮೇಲಿನ‌ಗಾಯಕ್ಕೆ ಗುಂಡಿಯೊಳಗೆ ಇರುವಾಗಲೇ ವಗ್ಗದ ಪಶು ವೈದ್ಯಾಧಿಕಾರಿ ಚಿಕಿತ್ಸೆ ನೀಡಿದ್ದರು. ‌

ರಾತ್ರಿ ಹೊತ್ತಿನಲ್ಲಿ ಕಾಡಿನಿಂದ ಬಂದಿರುವ ಈ ಕಾಡುಕೋಣ ಗೊಬ್ಬರದ ಗುಂಡಿಯ ಮೇಲೆ ಹಾಕಲಾಗಿದ್ದ ರಟ್ಟಿನ ಸೀಟು ಗೊತ್ತಾಗದೆ ನಡೆದುಕೊಂಡು ಹೋಗುವಾಗ ರಟ್ಟು ಮುರಿದು ಕಾಡು ಕೋಣ ಗುಂಡಿಯೋಳಗೆ ಬಿದ್ದಿರಬೇಕು ಎಂದು ಅಂದಾಜಿಸಲಾಗಿದೆ.

ಅರಣ್ಯ ಇಲಾಖೆಯ ಸಿಬ್ಬಂದಿ ಗಳಾದ ವಿನಯ್, ಬಾಸ್ಕರ್, ಸ್ಮಿತಾ, ಅನಿತಾ ಅನಿಲ್ ಹಾಗೂ ಪರಿಸರ ಸ್ನೇಹಿ ಕಿರಣ್ ಪಿಂಟೋ ಮತ್ತು ಗ್ರಾಮಸ್ಥರ ಸ್ಥಳ ದಲ್ಲಿದ್ದು ಕಾಡು ಕೋಣದ ರಕ್ಷಣೆಯಲ್ಲಿ ತೊಡಗಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here