ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಮೇಗಿನಪೇಟೆ ಹೊರೈಝನ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾರಂಭೋತ್ಸವವು ಶಾಲೆಯ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಖತೀಬ್ ಅಬ್ದುಸ್ಸಲಾಂ ಲತೀಫಿ ದುವಾ ನೆರವೇರಿಸಿದರು.
ಮಸೀದಿಯ ಆಡಳಿತ ಸಮಿತಿ ಅದ್ಯಕ್ಷ ವಿ.ಎಂ.ಇಬ್ರಾಹಿಂ ಮೇಗಿನಪೇಟೆ, ಸದರ್ ಉಮರ್ ಸಅದಿ,ಶಾಲೆಯ ಉಪಾಧ್ಯಕ್ಷ ಗಫೂರ್ ಮೇಗಿನಪೇಟೆ, ಕಾರ್‍ಯದರ್ಶಿ ಇಕ್ಬಾಲ್ ಮೇಗಿನಪೇಟೆ, ಜತೆ ಕಾರ್‍ಯದರ್ಶಿ ಹನೀಫ್ ಎಂ.ಎ, ಸಂಚಾಲಕ ನೋಟರಿ ಅಬೂಬಕರ್ ವಿಟ್ಲ, ಟ್ರಸ್ಟಿ ಇಕ್ಬಾಲ್ ಹಳೆಮನೆ, ಶಾಲೆಯ ಮುಖ್ಯ ಶಿಕ್ಷಕಿ ವಿಲಾಸಿನಿ, ಮಸೀದಿಯ ಸದಸ್ಯ ಇಸ್ಮಾಯಿಲ್ ಪರ್ತಿಪ್ಪಾಡಿ, ಸುರಕ್ಷಾ ಸಮಿತಿಯ ಅಬೂಬಕರ್ ಅನಿಲಕಟ್ಟೆ, ಹಕೀಂ ಅರ್ಶದಿ, ಶಾಲೆ ಮತ್ತು ಮದರಸದ ಶಿಕ್ಷಕರು ಉಪಸ್ಥಿತರಿದ್ದರು.
