Friday, October 27, 2023

’ಫೌಂಡೇಶನ್ ಮೂಲಕ ಕಲಾವಿದ ಕುಟುಂಬಕ್ಕೆ ಆಸರೆ’: ಸತೀಶ್ ಪಟ್ಲ

Must read

ವಿಟ್ಲ: ಕಲಾವಿದರ ಕುಟುಂಬದ ಕಣ್ಣೀರು ಒರೆಸುವ ಕಾರ್‍ಯವನ್ನು ಫೌಂಡೇಶನ್ ಮೂಲಕ ಮಾಡಲಾಗುತ್ತಿದೆ. ಧರ್ಮ ಮಾರ್ಗದಲ್ಲಿ ನಡೆಯುವ ವ್ಯಕ್ತಿಗೆ ಭಗವಂತನ ಶಕ್ತಿ ಬೆನ್ನೆಲುಬಾಗಿರುತ್ತದೆ. ವ್ಯಕ್ತಿಯ ಪ್ರಯತ್ನದ ಜತೆಗೆ ಶಕ್ತಿಯ ದಯೆ ಇದ್ದಾಗ ಮಾತ್ರ ಉತ್ತುಂಗಕ್ಕೆ ಏರಲು ಸಾಧ್ಯ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಹೇಳಿದರು.
ಅವರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವಿಟ್ಲ ಘಟಕದ ಪ್ರಥಮ ವಾರ್ಷಿಕೋತ್ಸವದ ಸಭಾ ಕಾರ್‍ಯಕ್ರಮದಲ್ಲಿ ಮಾತನಾಡಿದರು.
ರೋಟರಿ ಕ್ಲಬ್ ಕ್ಲಬ್ ಅಧ್ಯಕ್ಷ ಡಾ. ಚರಣ್ ಕಜೆ ಮಾತನಾಡಿ ಯಕ್ಷಗಾನ ಎಂಬುದು ನಮ್ಮ ಹೆಮ್ಮೆಯ ಕಲೆಯಾಗಿದ್ದು, ಹಲವು ಸಂಘ ಸಂಸ್ಥೆಗಳು ಇದಕ್ಕಾಗಿ ಕೆಲಸ ಮಾಡುತ್ತಿವೆ. ಯಕ್ಷಗಾನಕ್ಕೆ ಹಾಗೂ ಕಲಾವಿದರಿಗೆ ಸರ್ವ ರೀತಿಯ ಸಹಾಯ ಕಾರ್ಯ ನಡೆಯುವುದರಿಂದ ಸಂಸ್ಕೃತಿಗೆ ಅಳಿವಿಲ್ಲ ಎಂದು ತಿಳಿಸಿದರು.
ಮಂಗಳೂರು ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಅಶೋಕ್ ಎ. ಇರಾಮೂಲೆ, ಮಾಧವ ಮಾವೆ, ಯಕ್ಷಧ್ರುವ ಪಟ್ಲ ಫೌಂಡೇಶನ್ ಬೆಹರೈನ್ ಘಟಕದ ಮೋಹನದಾಸ ರೈ, ವಿಟ್ಲ ಘಟಕದ ಗೌರವಾಧ್ಯಕ್ಷ ಕೃಷ್ಣಯ್ಯ ಕೆ., ಗೌರವ ಮಾರ್ಗದರ್ಶಕ ಸತೀಶ್ ಕುಮಾರ್ ಆಳ್ವ, ಪ್ರಧಾನ ಸಂಚಾಲಕ ಸಂಜೀವ ಪೂಜಾರಿ, ಕೋಶಾಧಿಕಾರಿ ಸಂಜೀವ ಪೂಜಾರಿ ಎಂ. ಮತ್ತಿತರರು ಉಪಸ್ಥಿತರಿದ್ದರು.
ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಪ್ರಾರ್ಥಿಸಿದರು. ವಿಟ್ಲ ಘಟಕ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪೂವಪ್ಪ ಶೆಟ್ಟಿ ಅಳಿಕೆ ಪ್ರಸ್ತಾವನೆಗೈದರು. ವಿಜಯಶಂಕರ ಆಳ್ವ ಮಿತ್ತಳಿಕೆ ವಂದಿಸಿದರು. ಸುರೇಶ್ ಶೆಟ್ಟಿ ಪಡಿಬಾಗಿಲು ಕಾರ್‍ಯಕ್ರಮ ನಿರೂಪಿಸಿದರು.

More articles

Latest article