ಬಂಟ್ವಾಳ: ಪ್ರಸತ್ತ ಶೈಕ್ಷಣಿಕ ವರ್ಷದಿಂದ ಒಂದು ಸಾವಿರ ಸರಕಾರಿ ಶಾಲೆಗಳಲ್ಲಿ ಅಂಗ್ಲ ಮಾಧ್ಯಮ ಶಿಕ್ಷಣದಲ್ಲಿ ಭೋದನೆಗೆ ಸರಕಾರ ಅವಕಾಶ ನೀಡಲಿದ್ದು , ಬಂಟ್ವಾಳ ತಾಲೂಕಿನ ಸುಮಾರು 17 ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಅಂಗ್ಲ ಮಾಧ್ಯಮ ಶಿಕ್ಷಣ ದ ಅವಕಾಶ ನೀಡುವಂತೆ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶಿವಪ್ರಕಾಶ್ ತಿಳಿಸಿದ್ದಾರೆ.

ಸರಕಾರಿ ಶಾಲೆಗಳ ಉಳಿವಿಗಾಗಿ ಅನೇಕ ಕಸರತ್ತುಗಳನ್ನು ಮಾಡಿದ ಸರಕಾರ ಕೊನೆಗೂ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಿಗಲ್ಲಿ ಶಿಕ್ಷಣ ನೀಡುವ ಅವಕಾಶ ಈ ಬಾರಿಯಿಂದ ನೀಡಿದೆ.
ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಅಂಗ್ಲಮಾಧ್ಯಮ ಶಾಲೆಯಾಗಿ ಪರಿವರ್ತನೆಗೆ ಸರಕಾರ ಅಸ್ತು ಎಂದಿದೆ.
ಈಗಾಗಲೇ ರಾಜ್ಯದ ಒಂದು ಸಾವಿರ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಅಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಅವಕಾಶ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಹಲವಾರು ವರ್ಷಗಳಿಂದ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಬಂಟ್ವಾಳ ದ ಹಲವು ಶಾಲೆಗಳು ಹೋರಾಟಗಳನ್ನು ಮಾಡುತ್ತಾ ಬಂದಿದೆ.
ಜೊತೆಗೆ ಸರಕಾರಿ ಶಾಲೆಗಳನ್ನು ಉಳಿಸಲು ಸಂಘಸಂಸ್ಥೆಗಳು ಹಾಗೂ ಹಳೆ ವಿದ್ಯಾರ್ಥಿ ಗಳು ಸಾಕಷ್ಟು ಪ್ರಯತ್ನ ಮಾಡುತ್ತಿದ್ದರು.
ಜೊತೆಗೆ ಕೆಲ ಶಾಲೆಗಳಲ್ಲಿ ಎಲ್.ಕೆ.ಜಿ.ಯು.ಕೆ.ಜಿ.ಮಾದರಿಯ ಶಿಕ್ಷಣ ವನ್ನು ನೀಡುತ್ತಿದ್ದರು.
ಅಂತಹ ಶಾಲೆಗಳಲ್ಲಿ
ಗೆಸ್ಟ್ ಟೀಚರ್ ಗಳ ನ್ನು ನೇಮಕ ಮಾಡಿ ಅವರಿಗೆ ಶಾಲಾಭಿವೃದ್ದಿ ಸಮಿತಿ ಯ ಅಧ್ಯಕ್ಷ ಸದಸ್ಯರು ಗಳು ಸ್ವತಃ ಕೈಯಿಂದ ಸಂಬಳ ನೀಡಿ ಶಾಲೆಯ ಉಳಿವಿಗಾಗಿ ಪ್ರಯತ್ನ ಮಾಡುತ್ತಿದ್ದರು.
ಇವರ ಈ ಎಲ್ಲಾ ಪ್ರಯತ್ನ ದ ಫಲವಾಗಿ ಸರಕಾರ ಈ ಬಾರಿ ಒಂದು ಸಾವಿರ ಶಾಲೆಗಳಿಗೆ ಅಂಗ್ಲ ಮಾಧ್ಯಮ ಶಿಕ್ಷಣ ಕ್ಕೆ ಅವಕಾಶ ನೀಡಿದೆ.‌
ಬಂಟ್ವಾಳ ತಾಲ್ಲೂಕಿನಲ್ಲಿ ಒಟ್ಟು ಸರಕಾರಿ ಪ್ರಾಥಮಿಕ 195 , ಮತ್ತು 37 ಹೈಸ್ಕೂಲ್ ಗಳಿವೆ.

ತಾಲೂಕಿನ ಸುಮಾರು 17 ಶಾಲೆ ಗಳನ್ನು ಅಂಗ್ಲ ಮಾಧ್ಯಮ ಶಿಕ್ಷಣ ದ ಅವಕಾಶ ಕ್ಕಾಗಿ ಆಯ್ಕೆ ಮಾಡಿ ಸರಕಾರಕ್ಕೆ ಕಳುಹಿಸಲಾಗಿದೆ.
224 ವಿಧಾನ ಸಭಾ ಕ್ಷೇತ್ರದ ಲ್ಲಿ ಪ್ರತಿ ವಿಧಾನ ಸಭಾ ಕ್ಷೇತ್ರ ಕ್ಕೆ ನಾಲ್ಕು ಶಾಲೆಗಳಿಗೆ ಮಾತ್ರ ಈ ಬಾರಿ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ. ಮೂಲಭೂತ ಸೌಕರ್ಯಗಳ ಇರುವ ಶಾಲೆಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ.

ಪಾಠ ಮಾಡಲು ಅಂಗ್ಲಮಾಧ್ಯಮದಲ್ಲಿ ಸಮರ್ಥ ಶಿಕ್ಷಕ ರಿರಬೇಕು. 1 ರಿಂದ ಪಿಯುಸಿ ಅಥವಾ ಹತ್ತನೇ ತರಗತಿ ಕ್ಲಾಸುಗಳಿರುವ ಕಡೆಗಳಿಗೆ ಹೆಚ್ಚು ಅವಕಾಶ ನೀಡಲಾಗುತ್ತದೆ.‌ ಸರಕಾರ ಒಂದು ವಾರದೊಳಗೆ ಈ ಅದೇಶ ಇಲಾಖೆ ಗೆ ನೀಡಬಹುದು.
ಅಂಗ್ಲ ಮಾಧ್ಯಮ ಶಿಕ್ಷಣ ನೀಡುವ ಶಾಲೆಯ ಟೀಚರ್ಸ್ ಗಳಿಗೆ ಇಲಾಖೆ ಟ್ರೈನಿಂಗ್ ನೀಡುತ್ತದೆ.
ಇದೊಂದು ಉತ್ತಮ ಯೋಜನೆ ಮತ್ತು ಯೋಚನೆ ಯಾಗಿದ್ದು ಸರಕಾರಿ ಶಾಲೆಗಳ ಉನ್ನತೀಕರಣಕ್ಕೆ ಇದು ಮೊದಲ ಹೆಜ್ಜೆ ಯಾಗಿದೆ.
ಮುಂದಿನ ಬಾರಿ ಇನ್ನು ಹೆಚ್ಚು ಶಾಲೆಗಳಿಗೆ ಅವಕಾಶ ಸಿಗಬಹುದು ಎಂದು ಅವರು ತಿಳಿಸಿದ್ದಾರೆ. ಕನ್ನಡ ಕ್ಕೆ ಹೆಚ್ಚು ಒತ್ತು ನೀಡಿ ಶಿಕ್ಷಣ ನೀಡಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶಿವಪ್ರಕಾಶ್ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here