ಉಜಿರೆ: ದಕ್ಷಿಣಕನ್ನಡಜಿಲ್ಲೆಯ ಪತ್ರಕರ್ತರು ವಿಶೇಷವಾಗಿ, ವಿಭಿನ್ನವಾಗಿ ಹೊಣೆಗಾರಿಕೆಯಿಂದಕಾರ್ಯ ನಿರ್ವಹಿಸಿ ತಮ್ಮ ವೃತ್ತಿಯಘನತೆ, ಗೌರವಕಾಪಾಡಿಕೊಂಡಿದ್ದಾರೆಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ದ.ಕ. ಜಿಲ್ಲಾಕಾರ್ಯ ನಿರತ ಪತ್ರಕರ್ತರ ಸಂಘದಆಶ್ರಯದಲ್ಲಿ ಜುಲೈ ಒಂದರಂದು ಮಂಗಳೂರಿನಲ್ಲಿ ನಡೆಯಲಿರುವ ಜಿಲ್ಲಾ ಪತ್ರಕರ್ತರ ಸಮ್ಮೇಳನದ ಲಾಂಛನವನ್ನು ಅವರು ಸೋಮವಾರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಪ್ರಜ್ಞಾವಂತರಾಗಿ, ವಿಚಾರವಂತರಾಗಿ, ಬುದ್ಧಿವಂತರಾಗಿತಮ್ಮ ಸೃಜನಶೀಲ ವರದಿಗಾರಿಕೆಯಿಂದ ಓದುಗರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ತಾನು ಮೂರುತಲೆ ಮಾರಿನ ಪತ್ರಕರ್ತರ ಕಾರ್ಯ ಶೈಲಿಯನ್ನು ಗಮನಿಸಿದ್ದು ಹೊಸ ತಲೆ ಮಾರಿನ ಪತ್ರಕರ್ತರು ಕೂಡಾ ಪ್ರಾಮಾಣಿಕವಾಗಿ ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿ ಜಿಲ್ಲಾ ಸಮ್ಮೇಳನಕ್ಕೆ ಶುಭ ಹಾರೈಸಿದರು.
ದಕ್ಷಿಣಕನ್ನಡಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಶ್ರೀನಿವಾಸ್ ನಾಯಕ್‌ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಸ್ವಾಗತ ಸಮಿತಿ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ, ನಗರ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಮೋಟುಕಾನ, ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಯನ್. ಪೂವಣಿ ಮತ್ತು ಧನಕೀರ್ತಿ ಆರಿಗ, ಧರ್ಮಸ್ಥಳ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here